ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಹರೂ, ರಾಜೀವ್ ನಂತರ ಮೋದಿ ದಿವ್ಯಪ್ರಭೆಯುಳ್ಳ ನಾಯಕ : ರಜನಿ

|
Google Oneindia Kannada News

ಚೆನ್ನೈ, ಮೇ 28: ಲೋಕಸಭೆ ಚುನಾವಣೆ 2019ರ ಫಲಿತಾಂಶ ಕಂಡು ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಂತಸಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದರು. ಈಗ ಮತ್ತೊಮ್ಮೆ ನರೇಂದ್ರ ಮೋದಿ ನಾಯಕತ್ವವನ್ನು ಹಾಡಿ ಹೊಗಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವ ಪಕ್ಷದ ಪರ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಯಾರ ಪರವೂ ನಿಲ್ಲದೆ, ತಟಸ್ಥವಾಗಿರುವ ರಜನಿ ಅವರು ರಾಜಕೀಯ ಸಂಘಟನೆ ಬಗ್ಗೆ ಘೋಷಿಸಿದರೂ ಸಕ್ರಿಯವಾಗಿರಲಿಲ್ಲ.

ಕಮಲ ಪಕ್ಷದ ಪರ ವಾಲಿದರೆ 'ಕಬಾಲಿ' ರಜನಿ ಕಾಂತ್? ಕಮಲ ಪಕ್ಷದ ಪರ ವಾಲಿದರೆ 'ಕಬಾಲಿ' ರಜನಿ ಕಾಂತ್?

ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಮೇ 23ರಂದು ಮತದಾರರು ನೀಡಿರುವ ತೀರ್ಪಿನ ಬಳಿಕ ಬಿಜೆಪಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಅಧಿಕಾರ ಸ್ಥಾಪಿಸಲು ಮುಂದಾಗಿದೆ.

2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. 2019ರಲ್ಲಿ 353 ಸ್ಥಾನ ಗೆದ್ದ ಮೋದಿ ನಾಯಕತ್ವಕ್ಕೆ ರಜನಿ ಜೈಕಾರ ಹಾಕಿ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ, ಶುಭ ಹಾರೈಕೆ ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದರು.

ಬಿಜೆಪಿ ಪ್ರಣಾಳಿಕೆ ಮೆಚ್ಚಿರುವ ರಜನಿ

ಬಿಜೆಪಿ ಪ್ರಣಾಳಿಕೆ ಮೆಚ್ಚಿರುವ ರಜನಿ

'ನಾನು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನದಿ ಜೋಡಣೆ ಬಗ್ಗೆ ಪ್ರಸ್ತಾಪಿಸಿದೆ. ಇದು ಅಗತ್ಯವಾಗಿದ್ದು, ಅಸಾಧ್ಯವಾದುದೇನು ಅಲ್ಲ, ಇದರಿಂದ ಅಂತಾರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಗೂ ಪರಿಹಾರ ಸಿಗಲಿದೆ' ಎಂದು ರಜನಿಕಾಂತ್ ಹೇಳಿದ್ದರು.

ವಾಜಪೇಯಿ ಅವರ 'ಭಗೀರಥ ಯೋಜನೆ'

ವಾಜಪೇಯಿ ಅವರ 'ಭಗೀರಥ ಯೋಜನೆ'

2017ರಲ್ಲಿ ರಜನಿಕಾಂತ್ ಅವರು ರೈತ ಸಮೂಹವನ್ನು ಭೇಟಿ ಮಾಡಿ, ನದಿ ಜೋಡಣೆ ಬಗ್ಗೆ ಚರ್ಚಿಸಿದ್ದರು. ವಾಜಪೇಯಿ ಅವರ 'ಭಗೀರಥ ಯೋಜನೆ' ಇದಕ್ಕೆ ಪರಿಹಾರ ಎಂದು ನಿರ್ಧರಿಸಲಾಗಿತ್ತು. ಇದಕ್ಕಾಗಿ 1 ಕೋಟಿ ರು ದೇಣಿಗೆ ನೀಡಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಹುಲ್ ಗಾಂಧಿ ರಾಜೀನಾಮೆ ನೀಡಬಾರದು

ರಾಹುಲ್ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು, ಪ್ರಜಾಪ್ರಭುತ್ವದಲ್ಲಿ ಸಮರ್ಥವಾದ ವಿರೋಧ ಪಕ್ಷ ಇರಬೇಕು ಎಂದು ರಜನಿಕಾಂತ್ ಹೇಳಿದ್ದಾರೆ.

ನೆಹರೂ, ರಾಜೀವ್ ವರ್ಚಸ್ಸು ಪಿಆರ್ ಸಂಸ್ಥೆಗಳಿಂದ

ನೆಹರೂ, ರಾಜೀವ್ ವರ್ಚಸ್ಸು ಪಿಆರ್ ಸಂಸ್ಥೆಗಳಿಂದ ವೃದ್ಧಿಯಾಗಿದ್ದು, ಮೋದಿ ಅವರ ವರ್ಚಸ್ಸು ಜನರ ಪ್ರೀತಿಯಿಂದ ಬೆಳೆದಿದ್ದು ಎಂದು ಪ್ರತಿಕ್ರಿಯೆಗಳು ಬಂದಿವೆ.

English summary
Actor turned politician Rajinikanth in Chennai, Tamil Nadu: This victory is a victory for Modi. He is a charismatic leader. In India after JL Nehru and Rajiv Gandhi he is now a charismatic leader. I will be going for the swearing in ceremony of Narendra Modi ji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X