ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಶ್ರೀ, ರಘು ಬಲಿಯಾಗಿದ್ದು ಒಂದೇ ರೀತಿ! ಮರುಕಳಿಸಿತು ಅದೇ ದೃಶ್ಯ

|
Google Oneindia Kannada News

ಅದು 2017 ರ ನವೆಂಬರ್ ತಿಂಗಳು. ಮಗ ಆಫಿಸಿನಿಂದ ಬರುವ ದಾರಿಯನ್ನೇ ಕಾಯುತ್ತಿದ್ದ ಕೋಯಿಮತ್ತೂರಿನ ಪಾಲಕರಿಗೆ ಬಂದಿದ್ದು, 'ರಘು ಇನ್ನಿಲ್ಲ' ಎಂಬ ಆಘಾತದ ಸುದ್ದಿ.

30 ವರ್ಷ ವಯಸ್ಸಿನ ಮಗ, ಕುಟುಂಬದ ಬೆನ್ನೆಲುಬಾಗಿ, ಮನೆಯ ಜವಾಬ್ದಾರಿ ಹೊತ್ತು, ಪ್ರೀತಿ ಪಾತ್ರನಾಗಿದ್ದವನು ಅಕ್ರಮ ಫ್ಲೆಕ್ಸ್ ಸಂಸ್ಕೃತಿಗೆ ಬಲಿಯಾಗಿದ್ದ. ಅದಕ್ಕೂ ಮುನ್ನವೂ ಇಂಥ ಹಲವು ಸಾವುಗಳನ್ನು ದೇಶ ಕಂಡಿತ್ತು.

ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

Recommended Video

ಕ್ಯಾಮರಾದಲ್ಲಿ ಸೆರೆಯಾಯ್ತು ಸಾವಿನ ದೃಶ್ಯ..? | Oneindia Kannada

ಆದರೆ ಯಾರಾದೋ ಪ್ರಚಾರದ ಹಸಿವಿಗೆ, ಶೋಕಿಗೆ, ಕಾನೂನನ್ನೆಲ್ಲ ಗಾಳಿಗೆ ಸೋಕಿ ಅಕ್ರಮವಾಗಿ ಮಾಡುವ ಕೆಲಸಕ್ಕೆ ಮುಗ್ಧ ಜೀವಗಳು ಬಲಿಯಾಗುವ ಘಟನೆಗಳು ಮಾತ್ರ ಇಂದಿಗೂ ನಿಂತಿಲ್ಲ ಎಂಬುದು ವಿಷಾದನೀಯ! ಶುಭಶ್ರೀ ತಾಜಾ ಉದಾಹರಣೆ. ಅಕ್ರಮ ಫ್ಲೆಕ್ಸ್, ಹೋರ್ಡಿಂಗ್ಸ್ ಗಳಿಗೆ ಉತ್ತೇಜನ ನೀಡುವ ಸರ್ಕಾರದ ವಿರುದ್ಧ ಜನದನಿ ಮೊಳಗದೆ ಇದ್ದರೆ ಮತ್ತೆಷ್ಟು ಬಲಿಯನ್ನು ನಾವು ನೋಡಬೇಕಾಗುತ್ತದೋ!

ರಾಘು ಭೀಕರ ಸಾವು

ರಾಘು ಭೀಕರ ಸಾವು

2017 ರ ನವೆಂಬರ್ ನಲ್ಲಿ ರಘುಪತಿ ಅವರು ಆಫೀಸಿನಿಂದ ವಾಪಸ್ಸಾಗುತ್ತಿದ್ದ ವೇಳೆ ರಸ್ತೆಯ ಪಕ್ಕದಲ್ಲಿ ಹಾಕಲಾಗಿದ್ದ ಎಐಎಡಿಎಂಕೆಯ ಹೋರ್ಡಿಂಗ್ ಅವರ ಮೇಲೆ ಬಿದ್ದಿತ್ತು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ರಾಘು ಅವರ ಮೇಲೆ ವೇಗವಾಗಿ ಬರುತ್ತಿದ್ದ ಟ್ರಕ್ ಹರಿದ ಪರಿಣಾಮ ಅವರು ಮೃತರಾಗಿದ್ದರು.

ಮರುಕಳಿಸಿತು ಅದೇ ದೃಶ್ಯ

ಮರುಕಳಿಸಿತು ಅದೇ ದೃಶ್ಯ

ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶುಭಶ್ರೀ, ಸೆಪ್ಟೆಂಬರ್ 12 ರಂದು ಗುರುವಾರ ಸಂಜೆ ದ್ವಿಚಕ್ರವಾಹನದಲ್ಲಿ ಆಫೀಸ್ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪಲ್ಲವರಂ-ತೋರೈಪಕ್ಕಂ ರೇಡಿಯಲ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಕ್ರಮ ಫ್ಲೆಕ್ಸ್ ವೊಂದು ಅವರ ಮೇಲೆ ಬಿದ್ದ ಪರಿಣಾಮ ಅವರು ಆಯತಪ್ಪಿ ರಸ್ತೆಗೆ ಬಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಶುಭಶ್ರೀ ಮೇಲೆ ಹರಿದ ಪರಿಣಾಮ ಆಕೆ ಸಾವನ್ನಪ್ಪಿದ್ದರು. ಅದೂ ಎಐಎಡಿಎಂಕೆ ಪಕ್ಷದ ನಾಯಕರ ಫ್ಲೆಕ್ಸ್!

ಶುಭಶ್ರೀ ಪರಿಚಯ: ಟೆಕ್ಕಿ,Zumba ಡ್ಯಾನ್ಸರ್, ಆಪ್ತರ ಸ್ಟಾರ್ಶುಭಶ್ರೀ ಪರಿಚಯ: ಟೆಕ್ಕಿ,Zumba ಡ್ಯಾನ್ಸರ್, ಆಪ್ತರ ಸ್ಟಾರ್

ನ್ಯಾಯಾಲಯದ ಮಾತಿಗೆ ಗೌರವವಿಲ್ಲ!

ನ್ಯಾಯಾಲಯದ ಮಾತಿಗೆ ಗೌರವವಿಲ್ಲ!

2017 ರಲ್ಲಿ ರಘು ಪ್ರಕರಣದ ನಂತರ ಅಕ್ರಮ ಹೋರ್ಡಿಂಗ್ ಗಳನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಅದನ್ನು ಸರ್ಕಾರ ಪಾಲಿಸಿರಲಿಲ್ಲ. ನಂತರ 2018 ರ ಡಿಸೆಂಬರ್ ನಲ್ಲೂ ಇಂಥದೇ ಆದೇಶ ನೀಡಿತ್ತು. ನಂತರ ಜನವರಿ 11ರಂದು ಸುಪ್ರೀಂ ಕೋರ್ಟ್ ಅಕ್ರಮ ಫ್ಲೆಕ್ಸ್ ಗಳಿಗೆ ವಿವಿಧ ರಾಜ್ಯಗಳ ಹೈಕೋರ್ಟ್ ಗಳು ಹೇರಿದ್ದ ನಿಷೇಧವನ್ನು ಎತ್ತಿಹಿಡಿದಿತ್ತು. ಇಷ್ಟಾದರೂ ಉಚ್ಚ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿ, ಅಕ್ರಮ ಹೋರ್ಡಿಂಗ್ಸ್ ಗಳು ಕಾಣಿಸುತ್ತಲೇ ಇವೆ.

ಸರ್ಕಾರದತ್ತ ಅಸಹ್ಯದ ನೋಟ ಬೀರಿದ ಕೋರ್ಟ್

ಸರ್ಕಾರದತ್ತ ಅಸಹ್ಯದ ನೋಟ ಬೀರಿದ ಕೋರ್ಟ್

ಶುಭಶ್ರೀ ಘಟನೆಯ ನಂತರ ಕೋರ್ಟ್ ಸರ್ಕಾರದತ್ತ ಅಸಹ್ಯದ ನೋಟ ಬೀರಿದ್ದು, "ನಿಮಗೆ ಇನ್ನೆಷ್ಟು ಬಲಿಯಾದ ಮೇಲೆ ಬುದ್ಧಿ ಬರುತ್ತದೆ? ನಿಮಗೆ ಜನರ ಜೀವದ ಬೆಲೆ ಅರ್ಥವಾಗುವುದಿಲ್ಲವೇ? ನಿಮಗೆ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ" ಎಂದು ಅತ್ಯಂತ ಖೇದಕರ ದಾಟಿಯಲ್ಲಿ ಹೇಳಿದೆ.

'ಈ ಬೆಂಕಿಯುರಿಯನ್ನು ಸಹಿಸುತ್ತೀಯಾ?' ಶುಭಶ್ರೀ ಶವದ ಮುಂದೆ ತಂದೆಯ ರೋದನ'ಈ ಬೆಂಕಿಯುರಿಯನ್ನು ಸಹಿಸುತ್ತೀಯಾ?' ಶುಭಶ್ರೀ ಶವದ ಮುಂದೆ ತಂದೆಯ ರೋದನ

English summary
Accident deaths of Techies in Recent Days In India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X