ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಪಿಜೆ ಅಬ್ದುಲ್ ಕಲಾಂರ ಅಣ್ಣ ಮೊಹಮ್ಮದ್ ನಿಧನ

|
Google Oneindia Kannada News

ರಾಮೇಶ್ವರಂ, ಮಾರ್ಚ್ 7: ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ. ಪಿ.ಜೆ.ಅಬ್ದುಲ್ ಕಲಾಂ ಅವರ ಹಿರಿಯ ಸಹೋದರ ಮೊಹಮ್ಮದ್ ಮುತ್ತು ಮೀರಾ ಲೆಬ್ಬೆ ಮರಕಯಾರ್ ಅವರು ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು. ರಾಮೇಶ್ವರಂನ ಸ್ವಗೃಹದಲ್ಲಿ ಭಾನುವಾರ ನಿಧನರಾದರು ಎಂದು ಕುಟುಂಬಸ್ಥತು ತಿಳಿಸಿದ್ದಾರೆ.

ಮೊಹಮ್ಮದ್ ಮುತ್ತು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು, ಇಂದು ಸುಮಾರು 7: 30 ಕ್ಕೆ ಕೊನೆಯುಸಿರೆಳೆದರು. ಮಾಜಿ ಅಧ್ಯಕ್ಷ ಎಪಿಜೆ ಅಬ್ದುಲ್ ಕಲಾಂ ಅವರು ಜುಲೈ 27, 2015 ರಂದು ಮೇಘಾಲಯದ ಶಿಲ್ಲಾಂಗ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಮುಂದಾಗಿದ್ದವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Abdul Kalam’s elder brother dies at 104

ಕಲಾಂ ಆಸ್ತಿ ಸಂರಕ್ಷಿಸಿದ್ದ ಮೊಹಮ್ಮದ್ ಕಲಾಂ ಅವರ ದೊಡ್ಡ ಆಸ್ತಿ ಎಂದರೆ ಅವರ ಬಳಿ ಇದ್ದ ಪುಸ್ತಕಗಳು, ವೀಣೆ, ಒಂದು ಲ್ಯಾಪ್ ಟಾಪ್, ವ್ರಿಸ್ಟ್ ವಾಚ್, ಎರಡು ಬೆಲ್ಟ್, ಸಿಡಿ ಪ್ಲೇಯರ್, ಅವರ ನೆಚ್ಚಿನ ನೀಲಿ ಅಂಗಿ. ಇದಲ್ಲದೆ, ಕಲಾಂ ಹಿರಿಯ ಸಹೋದರರೇ ಎಲ್ಲ ಪುಸ್ತಕಗಳ ರಾಯಲ್ಟಿಗೆ ಪಾಲುದಾರರಾಗಿದ್ದರು.

ಆದರೆ, ಸೋದರರು ಹಾಗೂ ಕುಟುಂಬಸ್ಥರು ಕೂಡಾ ಕಲಾಂರಂತೆ ಸರಳ ಜೀವನ ನಡೆಸಿ ಮಾದರಿಯಾಗಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವ, ಸರ್ವಧರ್ಮ ಸಹಿಷ್ಣುತೆ ಬಗ್ಗೆ ತಿಳಿ ಹೇಳುತ್ತಿದ್ದರು, ಕಲಾಂ ಬಗ್ಗೆ ವಿಶೇಷ ಅಭಿಮಾನವಿತ್ತು, ಎಂದು ಮೊಮ್ಮಕ್ಕಳಲ್ಲಿ ಒಬ್ಬರಾದ ಸಲೀಂ ಖಾನ್ ಸ್ಮರಿಸಿದ್ದಾರೆ. ಮೃತ ಮೊಹಮ್ಮದ್ ಅವರ ಅಂತಿಮ ಸಂಸ್ಕಾರವನ್ನು ಸೋಮವಾರದಂದು ಸ್ವಗ್ರಾಮದಲ್ಲಿ ನೆರವೇರಿಸಲಾಗುತ್ತದೆ.

English summary
Mohammed Muthu Meera Lebbai Maraikayar, the elder brother of former President of India A.P.J. Abdul Kalam, passed away at his residence in Rameswaram in Ramanathapuram district on Sunday. He was 104.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X