ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹೇರ್ ಕಟ್ಟಿಂಗ್' ಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ಸರಕಾರ

|
Google Oneindia Kannada News

ಚೆನ್ನೈ, ಜೂನ್ 3: ಕೊರೊನಾ ವೈರಸ್ ತೀವ್ರವಾಗಿ ಆಘಾತ ನೀಡಿದ ರಾಜ್ಯಗಳಲ್ಲಿ ತಮಿಳುನಾಡು ಕೂಡಾ ಒಂದು. ವಿಪರೀತವಾಗಿ ಏರುತ್ತಿರುವ ಸೋಂಕಿತರ ಸಂಖ್ಯೆಯನ್ನು ಹತೋಟಿಗೆ ತರಲು ವಿಶಿಷ್ಟ ಪ್ರಯತ್ನಕ್ಕೆ ಅಲ್ಲಿನ ಪಳನಿಸ್ವಾಮಿ ಸರಕಾರ ಮುಂದಾಗಿದೆ.

Recommended Video

Good news to all you beer fans of Karnataka | Brewery | Oneindia kannada

ಇರೋಬರೋದಕ್ಕೆಲ್ಲಾ ಆಧಾರ್ ಕಡ್ಡಾಯ ಮಾಡಲಾಗುತ್ತಿರುವ ಈ ಸಮಯದಲ್ಲಿ ತಮಿಳುನಾಡು ಸರಕಾರ ಹೇರ್ ಕಟ್ಟಿಂಗ್ ಗೂ ಆಧಾರ್ ಕಾರ್ಡ್ ತೋರಿಸುವುದನ್ನು ಅಥವಾ ನಂಬರ್ ಹೇಳುವುದನ್ನು ಕಡ್ಡಾಯ ಮಾಡಿದೆ.

ಸಲೂನ್‌ಗೆ ಹೋಗಿ ಮಾಲೀಕನಿಂದ ಕೊರೊನಾ ಅಂಟಿಸಿಕೊಂಡ ವ್ಯಕ್ತಿಸಲೂನ್‌ಗೆ ಹೋಗಿ ಮಾಲೀಕನಿಂದ ಕೊರೊನಾ ಅಂಟಿಸಿಕೊಂಡ ವ್ಯಕ್ತಿ

ಮಂಗಳವಾರ (ಜೂ 2) ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೇರ್ ಕಟ್ಟಿಂಗ್, ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರು, ತಮ್ಮ ಗ್ರಾಹಕರಿಂದ ಆಧಾರ್ ಕಾರ್ಡ್ ಮಾಹಿತಿಯನ್ನು ಪಡೆದು ಸೇವೆಯನ್ನು ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

Aadhaar Card Made Mandatory In Tamil Nadu For Getting Haircut, Visiting Spas

"ತೀವ್ರವಾಗಿ ಹರಡುತ್ತಿರುವ ಸೋಂಕನ್ನು ತಡೆಯಲು ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ" ಎಂದಿರುವ ಸಿಎಂ ಪಳನಿಸ್ವಾಮಿ, "ಗ್ರಾಹಕರಿಂದ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಆಧಾರ್ ಕಾರ್ಡ್ ನಂಬರ್ ಅನ್ನು ಪುಸ್ತಕದಲ್ಲಿ ನೊಂದಾಯಿಸಕೊಳ್ಳಬೇಕು"ಎಂದು ಅಂಗಡಿ ಮಾಲೀಕರಿಗೆ ಸೂಚಿಸಿದ್ದಾರೆ.

ಮೇ 24ರಿಂದ ತಮಿಳುನಾಡಿನಲ್ಲಿ ಸಲೂನ್ ಓಪನ್ ಮಾಡಲು, ಮತ್ತು, ಜೂನ್ ಒಂದರಿಂದ ಚೆನ್ನೈ ನಗರದಲ್ಲೂ ಕಟ್ಟಿಂಗ್ ಶಾಪ್ ತೆರೆಯಲು ಸರಕಾರ ಅನುಮತಿ ನೀಡಿತ್ತು. ಆದರೂ, ಜೂನ್ 30ರ ವರೆಗೆ ಲಾಕ್ ಡೌನ್ ಅನ್ನು ತಮಿಳುನಾಡಿನಲ್ಲಿ ಮುಂದುವರಿಸಲಾಗಿದೆ.

ಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳ

ದೇಶದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 23,495 ಸೋಂಕಿತರು ಇದ್ದು, 184 ಜನರು ಇದುವರೆಗೆ ಮೃತ ಪಟ್ಟಿದ್ದಾರೆ.

English summary
Aadhaar Card Made Mandatory In Tamil Nadu For Getting Haircut, Visiting Spas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X