ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ಕೋಟಿ ಮೌಲ್ಯದ ಮೊಬೈಲ್ ಸಾಗಿಸುತ್ತಿದ್ದ ಲಾರಿ ಅಪಹರಣ!

|
Google Oneindia Kannada News

ಚೆನ್ನೈ, ಆಗಸ್ಟ್ 27 : ತಮಿಳುನಾಡಿನಿಂದ ಮುಂಬೈಗೆ ಸಂಚಾರ ನಡೆಸುತ್ತಿದ್ದ ಲಾರಿಯನ್ನು ಅಪಹರಣ ಮಾಡಲಾಗಿದೆ. ಲಾರಿಯಲ್ಲಿ 12 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್‌ಗಳಿದ್ದವು. 6 ಕೋಟಿ ರೂ. ಮೌಲ್ಯದ ಮೊಬೈಲ್ ಕಳುವು ಮಾಡಲಾಗಿದೆ.

ತಮಿಳುನಾಡು-ಆಂಧ್ರಪ್ರದೇಶ ಗಡಿ ಭಾಗದಲ್ಲಿ ಅಪರಿಚಿತರು ಲಾರಿಯನ್ನು ಅಪಹರಣ ಮಾಡಿದ್ದಾರೆ. 6 ಕೋಟಿ ರೂ. ಮೌಲ್ಯದ ಮೊಬೈಲ್ ಕಳುವು ಮಾಡಲಾಗಿದ್ದು, ಚಿತ್ತೂರು ಬಳಿ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಭಾರತದಲ್ಲೇ ಮೊಬೈಲ್ ತಯಾರಿಸಿಲು ಮುಗಿಬಿದ್ದ ಕಂಪನಿಗಳು: 11 ಲಕ್ಷ ಕೋಟಿ ರೂ. ಪ್ರಸ್ತಾಪಭಾರತದಲ್ಲೇ ಮೊಬೈಲ್ ತಯಾರಿಸಿಲು ಮುಗಿಬಿದ್ದ ಕಂಪನಿಗಳು: 11 ಲಕ್ಷ ಕೋಟಿ ರೂ. ಪ್ರಸ್ತಾಪ

ಲಾರಿ ಚಾಲಕ ಇರ್ಫಾನ್ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದು, ಕೈಗಳನ್ನು ಕಟ್ಟಿ ಕಂಟೈನೈರ್ ಒಳಗೆ ಹಾಕಿದ್ದಾರೆ. ಕೈಗಳನ್ನು ಬಿಚ್ಚಿಕೊಂಡ ಚಾಲಕ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದರೋಡೆ ಕುರಿತು ದೂರು ನೀಡಿದ್ದಾನೆ.

ಮೈಸೂರು: ಲಾರಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ ಮೈಸೂರು: ಲಾರಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

A Truck Carrying Mobile Phone Hijacked

ತಮಿಳುನಾಡಿನಿಂದ ಮಂಗಳವಾರ ಸಂಜೆ ಲಾರಿ ಹೊರಟಿತ್ತು. ಮುಂಬೈಗೆ ಮೊಬೈಲ್ ಫೋನ್‌ಗಳನ್ನು ತಲುಪಿಸಬೇಕಿತ್ತು. ತಮಿಳುನಾಡು-ಆಂಧ್ರಪ್ರದೇಶ ಗಡಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಅಪಹರಣ ಮಾಡಲಾಗಿದೆ.

ಏಪ್ರಿಲ್‌ನಲ್ಲಿ 82 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಕಂಪನಿಗಳುಏಪ್ರಿಲ್‌ನಲ್ಲಿ 82 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಕಂಪನಿಗಳು

15 ಕಿ. ಮೀ. ದೂರ ಲಾರಿಯನ್ನು ತಂದಿರುವ ಕಳ್ಳರು, ಲಾರಿಯಲ್ಲಿದ್ದ 16 ಬಾಕ್ಸ್‌ಗಳ ಪೈಕಿ 8 ಬಾಕ್ಸ್ ಹೊತ್ತುಕೊಂಡು ಹೋಗಿದ್ದಾರೆ. ಒಟ್ಟು 7,500 ಮೊಬೈಲ್‌ಗಳು ಬಾಕ್ಸ್‌ಗಳಲ್ಲಿ ಇದ್ದವು ಎಂಬ ಮಾಹಿತಿ ಸಿಕ್ಕಿದೆ.

ದರೋಡೆಕೋರರನ್ನು ಹಿಡಿಯಲು ಪೊಲೀಸರು ತಂಡವನ್ನು ರಚನೆ ಮಾಡಿದ್ದಾರೆ. ತಮಿಳುನಾಡಿನಲ್ಲಿದ್ದ ಉತ್ಪಾದನಾ ಕಂಪನಿಯ ಪ್ರತಿನಿಧಿಗಳನ್ನು ಸಹ ಪೊಲೀಸರು ಕರೆಸುತ್ತಿದ್ದಾರೆ.

English summary
A truck carrying mobile phone worth of Rs 12 crore hijacked. Miscreants stolen phones worth of Rs 6 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X