ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನೂರಿನ ಜನರಿಗೆ ಕೊರೊನಾ ಬರಬಾರದು: ಬಾಲಕಿಯ ದೊಡ್ಡತನ

|
Google Oneindia Kannada News

ಅರಿಯಲೂರ್, ಏಪ್ರಿಲ್ 27: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ ಹಾಗೆ ಕೊರೊನಾ ವಿರುದ್ಧ ಪ್ರತಿಯೊಬ್ಬರು ಸೈನಿಕರ ಹಾಗೆ ಹೋರಾಟ ಮಾಡಬೇಕು. ಆದರೆ, ಈ ಹೋರಾಟದಲ್ಲಿ ಮಕ್ಕಳು ಕೂಡ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಇದು ನಿಜಕ್ಕೂ ಖುಷಿಯ ವಿಷಯ.

ತಮಿಳುನಾಡಿನ ಅರಿಯಲೂರ್ ಜಿಲ್ಲೆಯಲ್ಲಿ ಎಸ್‌ ಅಭಿ ಎಂಬ ಬಾಲಕಿ ತನ್ನ ಊರಿನ ಜನರಿಗೆ ಕೊರೊನಾ ವೈರಸ್‌ ಹರಡಬಾರದು ಎಂದು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾಳೆ. ಈ ಹುಡುಗಿ ಕುಂತಪುರಂ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜನವರಿ ತಿಂಗಳಿನಲ್ಲಿ ತನ್ನ ತಂದೆಯನ್ನು ಈಕೆ ಅಪಘಾತದಲ್ಲಿ ಕಳೆದುಕೊಂಡಿದ್ದಾಳೆ.

ಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

ಜನರಲ್ಲಿ ರೋಗ ನಿರೋಧಕ ಶಕ್ತಿ ಇದ್ದರೆ, ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟ ಮಾಡಬಹುದು ಎಂದು ತಿಳಿದ ಅಭಿ ತನ್ನ ಕೈಲಾದ ಸೇವೆ ಮಾಡಿದ್ದಾರೆ. ಕೊರೊನಾಗೆ ಯಾರು ಬಲಿ ಆಗಬಾರದು ಎನ್ನುವುದು ಬಾಲಕಿಯ ಗುರಿಯಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು

ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು

ಕೊರೊನಾ ವೈರಸ್‌ಗೆ ಇನ್ನು ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕೊರೊನಾ ಸೋಂಕು ತಗುಲಿದರೆ, ವ್ಯಕ್ತಿಯ ರೋಗ ನಿರೋಧಕ ಶಕ್ತಿಯಿಂದ ಸೋಂಕು ದೂರ ಆಗುತ್ತಿದೆ. ಇದನ್ನು ತಿಳಿದ ಬಾಲಕಿ ಅಭಿ, ತನ್ನ ಊರಿನಲ್ಲಿ ಗಿಡಮೂಲಿಕೆಗಳ ಮಿಶ್ರಣವನ್ನು ತಯಾರು ಮಾಡಲು ಮುಂದಾದರು. ಅದನ್ನು ಸೇವಿಸಿದರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಊರಿನ ಜನರಿಗೆ ನೀಡಿದರು.

ಸಾರ್ವಜನಿಕರು ಮೆಚ್ಚುಗೆ

ಸಾರ್ವಜನಿಕರು ಮೆಚ್ಚುಗೆ

ಯೂ ಟ್ಯೂಬ್‌ ನೋಡಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವ ಒಂದು ಸೂಪ್ ತಯಾರು ಮಾಡಲಾಗಿದೆ. ಜೀರಿಗೆ, ಟೊಮೆಟೊ, ಮೆಣಸು, ಈರುಳ್ಳಿ, ಅರಿಶಿನ, ನುಗ್ಗೆಕಾಯಿ ಹಾಕಿ ಈ ಸೂಪ್ ಸಿದ್ದ ಮಾಡಲಾಗಿದೆ. ಗ್ರಾಮದ ಮಹಿಳೆಯರು ಸೇರಿ ಇದನ್ನು ತಯಾರು ಮಾಡಿದ್ದಾರೆ. ನಂತರ ಊರಿನ ಜನರಿಗೆ ವಿತರಿಸಲಾಗಿದೆ. ಬಾಲಕಿಯ ಕಾರ್ಯವನ್ನು ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ.

ಯುವತಿ ಕಥೆ: 'ಕೊರೊನಾಕ್ಕಿಂತಲೂ ಸುದ್ದಿಗಳೇ ನಮ್ಮ ಜೀವ ಹಿಂಡಿದವುಯುವತಿ ಕಥೆ: 'ಕೊರೊನಾಕ್ಕಿಂತಲೂ ಸುದ್ದಿಗಳೇ ನಮ್ಮ ಜೀವ ಹಿಂಡಿದವು

3 ವರ್ಷದ 3 ಸಾವಿರ ರೂಪಾಯಿ

3 ವರ್ಷದ 3 ಸಾವಿರ ರೂಪಾಯಿ

ಅಭಿ ಸೂಪ್ ತಯಾರು ಮಾಡಲು ತಾನು ಕೂಡಿಟ್ಟ ಹಣವನ್ನು ನೀಡಿದ್ದಾರೆ. 3 ವರ್ಷದಲ್ಲಿ ತಾನು 3 ಸಾವಿರ ರೂಪಾಯಿ ಹಣವನ್ನು ಉಳಿತಾಯ ಮಾಡಿದ್ದು, ಆ ದುಡ್ಡನ್ನು ನೀಡಿದ್ದಾರೆ. ತನ್ನ ತಂದೆ ಇರುವಾಗ ಆಗಾಗ ನೀಡಿದ ಹಣವನ್ನು ಉಳಿತಾಯ ಮಾಡಿದ್ದು, ಈಗ ಅನನ್ನು ಕೊಟ್ಟಿದ್ದೇನೆ ಎಂದು ಅಭಿ ತಿಳಿಸಿದ್ದಾರೆ. ಟಿವಿಯಲ್ಲಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅನೇಕರು ಸಹಾಯ ಮಾಡುತ್ತಿರುವ ದೃಶ್ಯ ನೋಡಿ ತಾನು ಕೂಡ ಸಹಾಯ ಹಸ್ತ ಚಾಚಿದರಂತೆ.

ತಮಿಳುನಾಡಿನಲ್ಲಿ 1821 ಕೇಸ್

ತಮಿಳುನಾಡಿನಲ್ಲಿ 1821 ಕೇಸ್

ಈ ಬಗ್ಗೆ ಮಾತನಾಡಿರುವ ಅಭಿ ಅರಿಯಲೂರ್‌ನಲ್ಲಿ ''ಟಿವಿ ನೋಡಿ ನಾನು ಜನರಿಗೆ ಸಹಾಯ ಮಾಡಬೇಕು ಎಂದು ಇದನ್ನು ಮಾಡಿದೆ. ಊರಿನ ಜನರು ಇದಕ್ಕೆ ಕೈ ಜೋಡಿಸಿದರು. ತಂದೆ ನೀಡಿದ ಹಣವನ್ನು ಈ ಕೆಲಸಕ್ಕೆ ಬಳಸಿಕೊಂಡಿದ್ದೇನೆ'' ಎಂದಿದ್ದಾರೆ. ಅರಿಯಲೂರ್‌ನಲ್ಲಿ ಆರು ಕೊರೊನಾ ವೈರಸ್‌ ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ತಮಿಳುನಾಡಿನಲ್ಲಿ ಬರೋಬ್ಬರಿ 1821 ಮಂದಿಗೆ ಸೋಂಕು ತಗುಲಿದೆ.

English summary
kundapuram school girl contributed towards the making of a herbal concoction to boost immunity power of her village people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X