• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮೇಶ್ವರದ 9 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾದ ನೌಕಾಪಡೆ

|
Google Oneindia Kannada News

ರಾಮೇಶ್ವರಂ, ಜನವರಿ 10: ಶ್ರೀಲಂಕಾದ ನೌಕಾಪಡೆಯು ರಾಮೇಶ್ವರದ 9 ಮಂದಿ ಮೀನುಗಾರರನ್ನು ಬಂಧಿಸಿದೆ.

ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ರಾಮೇಶ್ವರಂನ ಒಂಬತ್ತು ಮೀನುಗಾರರನ್ನು ಶನಿವಾರ ರಾತ್ರಿ ಕಚ್ಚಾಹೀವು ಬಳಿ ಶ್ರೀಲಂಕಾ ನೌಕಾಪಡೆ ಬಂಧಿಸಿದೆ.

ಐಎಂಬಿಎಲ್ ಅನ್ನು ಅತಿಕ್ರಮಣ ಮಾಡಿಕೊಂಡು ಕಾಟ್ಚತೀವು ಬಳಿ ಮೀನುಗಾರಿಕೆ ನಡೆಸಿದ್ದಕ್ಕಾಗಿ ರಾಮೇಶ್ವರಂನ ಮೀನುಗಾರರನ್ನು ಬಂಧಿಸಲಾಗಿದೆ.

9 Indian Fishermen Arrested By Sri Lankan Navy

ದೋಣಿ ಸಹ ವಶಪಡಿಸಿಕೊಳ್ಳಲಾಗಿದೆ. ಶನಿವಾರ ರಾತ್ರಿ ನಡೆದ ಒಂದು ಪ್ರತ್ಯೇಕ ಘಟನೆಯಲ್ಲಿ, ಕಟ್ಚತೀವು ಬಳಿ ಸುಮಾರು 20 ಯಾಂತ್ರಿಕೃತ ದೋಣಿಗಳಲ್ಲಿ ಲಂಕಾ ನೌಕಾಪಡೆಯ ಸಿಬ್ಬಂದಿ ಮೀನುಗಾರಿಕಾ ಬಲೆಗಳನ್ನು ಬೀಳಿಸಿದ್ದಾರೆಂದು ವರದಿಯಾಗಿದೆ.

ಈ ಬಂಧನವನ್ನು ಖಂಡಿಸಿ ಭಾನುವಾರ ಮಧ್ಯಾಹ್ನ ಮೀನುಗಾರರು ಅನಿರ್ಧಿಷ್ಟಾವದಿ ಮುಷ್ಕರ ಘೋಷಿಸಿದ್ದಾರೆ. ಯಾಂತ್ರಿಕೃತ ದೋಣಿಯ ಮಾಲೀಕರಾದ ಎ ಕಿರುಬಾಯಿ (37) ಎಸ್ ವಾಲನ್ ಕೌಶಿಕ್ (24), ಮೈಕಿಯಾಸ್ (30), ಎ ಕೆನ್ನಿಂಗ್ಸ್ಟನ್ (28), ಆರ್ ಸ್ಯಾಮ್ ಸ್ಟಿಲ್ಲರ್ (20), ಎ ನಿಜಾನ್ (30), ಬ್ರೈಟನ್ (20), ಆರ್ ಕಿಶೋರ್ (27) ಮತ್ತು ಮಾರಿ (45). ಅವರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.

ಡಿಸೆಂಬರ್ 15 ರಂದು 27 ಮಂದಿ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿತ್ತು.

English summary
Nine Indian fishermen have been arrested by the Sri Lankan Navy while fishing in the sea on Saturday, informed Indian Coast Guard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X