ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಭವನದಲ್ಲಿ 84 ಜನರಿಗೆ ಕೊರೊನಾ ವೈರಸ್ ದೃಢ

|
Google Oneindia Kannada News

ಚೆನ್ನೈ, ಜುಲೈ 23: ತಮಿಳುನಾಡಿನ ರಾಜ್ಯಪಾಲರ ರಾಜಭವನದಲ್ಲಿ 84 ಜನರಿಗೆ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ. ತಮಿಳುನಾಡಿನಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜಭವನದಲ್ಲಿ ಸಾಮೂಹಿಕ ಪರೀಕ್ಷೆ ಮಾಡಲಾಗಿದೆ. ಈ ವೇಳೆ 84 ಜನರಿಗೆ ಕೊವಿಡ್ ದೃಢವಾಗಿದೆ ಎಂದು ತಿಳಿದು ಬಂದಿದೆ.

Recommended Video

ಹೊಸ Oneplus ವಿಶೇಷತೆಗಳು Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಈ ಕುರಿತು ರಾಜಭವನದಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದ್ದು, ''ಒಟ್ಟು 147 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಲಾಗಿತ್ತು. ಅದರಲ್ಲಿ 84 ಜನರಿಗೆ ಸೋಂಕು ದೃಢವಾಗಿದೆ. ಇನ್ನು ಕೆಲವರಿಗೆ ಸೋಂಕಿನ ಲಕ್ಷಣ ಕಂಡು ಬಂದಿದೆ'' ಎಂದು ತಿಳಿಸಿದೆ.

ಮುಂಬೈ ಮೀರಿಸಿದ ಬೆಂಗಳೂರು: ಅತಿ ಹೆಚ್ಚು ಸಕ್ರಿಯ ಕೇಸ್ ಹೊಂದಿರುವ ನಗರ?ಮುಂಬೈ ಮೀರಿಸಿದ ಬೆಂಗಳೂರು: ಅತಿ ಹೆಚ್ಚು ಸಕ್ರಿಯ ಕೇಸ್ ಹೊಂದಿರುವ ನಗರ?

ರಾಜಭವನದಲ್ಲಿ ಸೋಂಕು ತಗುಲಿರುವ ಎಲ್ಲರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಸಿಬ್ಬಂದಿ ಎಲ್ಲರೂ ರಾಜಭವನದ ಹೊರಗೆ ಕೆಲಸ ನಿರ್ವಹಿಸಿದವರು. ಇವರೆಲ್ಲರೂ ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

84 COVID 19 Positive Cases Found in Tamil Nadu Raj Bhavan

ರಾಜಭವನದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಇಡೀ ರಾಜ್ಯಪಾಲರ ಭವನದಲ್ಲಿ ಆರೋಗ್ಯ ಅಧಿಕಾರಿಗಳು ಔಷಧಿ ಸಿಂಪಡಣೆ ಮಾಡಿದ್ದಾರೆ.

ಪ್ರಸ್ತುತ, ತಮಿಳುನಾಡಿನಲ್ಲಿ ಒಟ್ಟು 1,86,492 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 1,31,583 ಜನರು ಚೇತರಿಕೆ ಕಂಡಿದ್ದು, ಇನ್ನು 51,765 ಕೇಸ್‌ಗಳು ಸಕ್ರಿಯವಾಗಿದೆ. ಈವರೆಗೂ 3,144 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

English summary
84 people in Tamil Nadu's Raj Bhavan have tested positive for Covid19 out of a total of 147 people who were tested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X