ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು: ಸರ್ಕಾರಿ ಆಸ್ಪತ್ರೆ ತಾತ್ಕಾಲಿಕ ಸ್ಥಗಿತ

|
Google Oneindia Kannada News

ತಿರುಪುರ್,ಸೆಪ್ಟೆಂಬರ್ 29: ಸರ್ಕಾರಿ ಆಸ್ಪತ್ರೆಯ 8 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಅವಿನಾಶಿ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಸೋಂಕು ಚಿಕಿತ್ಸೆಗೆ ಮೀಸಲಿಡಲಾಗಿತ್ತು. ಇದೀಗ ಆಸ್ಪತ್ರೆಯನ್ನು ಮುಚ್ಚುವ ಹಿನ್ನಲೆಯಲ್ಲಿ ಆಸ್ಪತ್ರೆಯ ರೋಗಿಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಭಾರತದಲ್ಲಿ ಒಂದೇ ದಿನ 70589 ಮಂದಿಗೆ ಕೊವಿಡ್-19 ಪಾಸಿಟಿವ್ ಭಾರತದಲ್ಲಿ ಒಂದೇ ದಿನ 70589 ಮಂದಿಗೆ ಕೊವಿಡ್-19 ಪಾಸಿಟಿವ್

ತಮಿಳುನಾಡಿನ ತಿರುಪೂರ್ ನಲ್ಲಿರುವ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ 8 ಮಂದಿ ಆರೋಗ್ಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಮುಂಜಾಗ್ರತಾ ಕ್ರಮವಾಗಿ ಮೂರುದಿನಗಳ ಕಾಲ ಇಡೀ ಆಸ್ಪತ್ರೆಯನ್ನು ಮುಚ್ಚಲಾಗಿದೆ.

8 Medical Staffs Test Positive For Coronavirus In Tamil Nadu Government Hospital

ಭಾನುವಾರ ನಿನ್ನೆ ಒಂದೇ ದಿನ ಆಸ್ಪತ್ರೆಯ 8 ಮಂದಿ ಸಿಬ್ಬಂದಿಗಳ ಕೊವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯ ಇತರೆ 33 ಸಿಬ್ಬಂದಿಗಳನ್ನು ಕೊವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಮೂರು ದಿನಗಳ ಕಾಲ ಮುಚ್ಚಿ ಸ್ಯಾನಿಟೈಸೇಷನ್ ಮಾಡಲು ಅಧಿಕಾರಿಗಳು ನಿರ್ಣಯಿಸಿದ್ದಾರೆ.

ಅವಿನಾಶಿ ಆಸ್ಪತ್ರೆಯು ತಿರುಪುರ್ ಸರ್ಕಾರಿ ಆಸ್ಪತ್ರೆಯಿಂದ 25 ಕಿ.ಮೀ ದೂರದಲ್ಲಿದೆ. ಈ ಆಸ್ಪತ್ರೆಗೆ ಕೊವಿಡ್ ಆಸ್ಪತ್ರೆಯಾಗಿರಲಿಲ್ಲ. ಒಟ್ಟು 33 ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ತಾಂಜಾವೂರ್ ಮೆಡಿಕಲ್ ಕಾಲೇಜಿನ ಮೂವರು ಸ್ಟಾಫ್ ನರ್ಸ್‌ಗಳಿಗೆ ಸೋಂಖು ತಗುಲಿದೆ.

English summary
A taluk-level government hospital is being shut for three days this week after eight medical staff at the hospital tested positive for COVID-19 on Sunday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X