ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ಉಚಿತವಾಗಿ ಇಡ್ಲಿ ನೀಡುವ 'ರಾಣಿ' ಮಾನವೀಯತೆ!

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 15 : ಜಗತ್ತಿನಲ್ಲಿ ಮಾನವೀಯತೆ ಕಡಿಮೆಯಾಗಿಲ್ಲ ಎಂಬುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ತಮಿಳುನಾಡು 70 ವರ್ಷದ ವೃದ್ಧೆಯೊಬ್ಬರ ಕಾರ್ಯ ಇತರರಿಗೂ ಮಾದರಿಯಾಗಿದೆ.

ತಮಿಳುನಾಡಿನ ರಾಮೇಶ್ವರಂ ಬಳಿಕ ಅಗ್ನಿ ತೀರ್ಥದ ಬಳಿ ರಾಣಿ ಎಂಬ 70 ವರ್ಷದ ವೃದ್ಧೆ ಜೀವನೋಪಾಯಕ್ಕಾಗಿ ಇಡ್ಲಿ ಮಾರಾಟ ಮಾಡುತ್ತಾಳೆ. ರುಚಿ ರುಚಿಯಾದ ಇಡ್ಲಿ ತಿನ್ನಲು ಚಿಕ್ಕ ಹೋಟೆಲ್‌ನಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಾರೆ.

1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್

ಚಿಕ್ಕ ಹೋಟೆಲ್‌ನಲ್ಲಿ ಕಟ್ಟಿಗೆ ಒಲೆಯಲ್ಲಿಯೇ ರಾಣಿ ಈಗಲೂ ಇಡ್ಲಿ ಬೇಯಿಸುತ್ತಾರೆ. ಒಂದು ಪ್ಲೇಟ್ ಬಿಸಿ-ಬಿಸಿ ಇಡ್ಲಿಗೆ 30 ರೂ. ದರವಿದೆ. ರಾಣಿ ನಡೆಸುವ ಚಿಕ್ಕ ಕ್ಯಾಂಟೀನ್‌ನಲ್ಲಿ ಇಡ್ಲಿ, ವಡೆ ಸವಿಯಲು ಹಲವಾರು ಜನರು ಬರುತ್ತಾರೆ.

ಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆ

70 Year Old Women Serves Idli For Poor Free Of Cost

ಕ್ಯಾಂಟೀನ್‌ಗೆ ಬಡವರು ಬಂದರೆ ಉಚಿತವಾಗಿ ರಾಣಿ ಅವರು ಇಡ್ಲಿ ನೀಡಿ ಅವರ ಹೊಟ್ಟೆ ಹಸಿವು ತಣಿಸುತ್ತಾರೆ. ಎಪ್ಪತ್ತು ವರ್ಷದ ಅವರು ಜೀವನೋಪಾಯಕ್ಕಾಗಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಆದರೆ, ಬಡವರಿಗೆ ಉಚಿತವಾಗಿ ಇಡ್ಲಿ ನೀಡಿ ಮಾನವೀಯತೆ ಮೆರೆಯುತ್ತಾರೆ.

ಅಮ್ಮನ ಸಾಕಲು ಹೆಣಗುತ್ತಿದ್ದ ಪುಟ್ಟ ಬಾಲಕಿಗೆ ಸಿಎಂ ನೆರವುಅಮ್ಮನ ಸಾಕಲು ಹೆಣಗುತ್ತಿದ್ದ ಪುಟ್ಟ ಬಾಲಕಿಗೆ ಸಿಎಂ ನೆರವು

"ನಾವು ಒಂದು ಪ್ಲೇಟ್ ಇಡ್ಲಿಗೆ 30 ರೂ. ನಿಗದಿ ಮಾಡಿದ್ದೇವೆ. ಯಾರ ಬಳಿ ಹಣವಿಲ್ಲವೋ ಅವರ ಬಳಿ ನಾವು ಹಣ ನೀಡುವಂತೆ ಒತ್ತಾಯ ಮಾಡುವುದಿಲ್ಲ" ಎಂದು ರಾಣಿ ಎಎನ್‌ಐ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

70 Year Old Women Serves Idli For Poor Free Of Cost

ಈಗಲೂ ಕಟ್ಟಿಗೆ ಒಲೆಯಲ್ಲಿ ಇಡ್ಲಿ ಬೇಯಿಸಿತ್ತಾ ಮಾನವೀಯತೆಯನ್ನು ಪಾಲಿಸುತ್ತಿರುವ ರಾಣಿಗೆ ದಾನಿಗಳು ಅಗತ್ಯ ಸಹಾಯ ಮಾಡಲಿ. ವೃದ್ಧೆಗೆ ಗ್ಯಾಸ್ ವ್ಯವಸ್ಥೆಯನ್ನು ಮಾಡಲಿ ಎಂಬುದು ಜನರ ಹಾರೈಕೆಯಾಗಿದೆ.

English summary
A 70-year-old woman Rani who run an idli shop near Agni Tirtham in Rameswaram Tamil Nadu serves idli in the free of cost to the poor. Rani still use wood as fuel for cooking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X