ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮದ್ರಾಸ್ ಐಐಟಿಯಲ್ಲಿ 5ಜಿ ಕರೆ ಪರೀಕ್ಷೆ ಯಶಸ್ವಿ

|
Google Oneindia Kannada News

ಮದ್ರಾಸ್, ಮೇ 19: ಭಾರತದಲ್ಲಿ 5ಜಿ ತಂತ್ರಜ್ಞಾನ ಯಾವಾಗ ಜಾರಿಗೆ ಬರುತ್ತದೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತೆ ಕಾಣುತ್ತಿದೆ. ಮದ್ರಾಸ್ ಐಐಟಿಯಲ್ಲಿ ನಡೆಸಿದ 5ಜಿ ಕರೆಯ ಪರೀಕ್ಷೆಯು ಯಶಸ್ವಿ ಆಗಿರುವ ಬಗ್ಗೆ ಕೇಂದ್ರ ಟೆಲಿಕಾಂ ಸಚಿವರು ಪ್ರಕಟಿಸಿದ್ದಾರೆ.

ಮದ್ರಾಸ್ ಐಐಟಿಯಲ್ಲಿ 5ಜಿ ಕರೆಯನ್ನು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಯಶಸ್ವಿಯಾಗಿ ಪರೀಕ್ಷಿಸಿರುವ ಬಗ್ಗೆ ವಿಡಿಯೋ ಸಂದೇಶವೊಂದನ್ನು ಶೇರ್ ಮಾಡಿದ್ದಾರೆ.

5ಜಿ ಯಾವಾಗ ಶುರು, ತರಂಗಾಂತರಗಳ ಹರಾಜು ಯಾವಾಗ? ಮೋದಿ ಹೇಳಿದ್ದಿಷ್ಟು5ಜಿ ಯಾವಾಗ ಶುರು, ತರಂಗಾಂತರಗಳ ಹರಾಜು ಯಾವಾಗ? ಮೋದಿ ಹೇಳಿದ್ದಿಷ್ಟು

ಭಾರತದಲ್ಲಿ ಸಂಪೂರ್ಣ ಎಂಡ್ ಟು ಎಂಡ್ ನೆಟ್‌ವರ್ಕ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

5G call Successfully tested at Madras IIT

ಭಾರತದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5G ಸ್ಟಾಕ್ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಸಿದ್ಧವಾಗಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದರು. ಆ ಮೂಲಕ ರಾಷ್ಟ್ರದ ವೆಚ್ಚಕ್ಕೆ ತಕ್ಕಂತೆ ಉತ್ತಮ-ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಪರಿಹಾರ ಸೂಚಿಸಿದ್ದರು.

5G call Successfully tested at Madras IIT

ಆರ್ಥಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿರುವ ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವುದು ಹೆಚ್ಚು ನಿರ್ಣಾಯಕವಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ತನ್ನ ಎಲ್ಲಾ ಪ್ರಯತ್ನಗಳನ್ನು ನಿರ್ದೇಶಿಸುತ್ತಿದೆ ಎಂದು ತಿಳಿಸಿದರು.

English summary
5G call successfully tested at Madras IIT. Entire end to end network is designed and developed in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X