ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಪಟಾಕಿ ಸ್ಫೋಟ: 3 ಮಂದಿ ಸಾವು

|
Google Oneindia Kannada News

ಚೆನ್ನೈ, ಜೂನ್ 21: ತಮಿಳುನಾಡಿನಲ್ಲಿ ಪಟಾಕಿ ಸ್ಪೋಟಗೊಂಡಿದ್ದು, ಘಟನೆಯಲ್ಲಿ ಐದು ವರ್ಷದ ಮಗು ಸೇರಿ 3 ಮಂದಿ ಮೃತಪಟ್ಟಿರುವ ಘಟನೆ ನಡೆಸಿದೆ.

ತಮಿಳುನಾಡಿನ ಸತ್ತೂರು ಜಿಲ್ಲೆಯ ಥಾಯಿಲ್ ಪಟ್ಟಿಯ ಕಲೈನರ್ ಕಾಲನಿಯಲ್ಲಿರುವ ಮನೆಯಲ್ಲಿ ಪಟಾಕಿ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಪರಿಣಾಮ ಮನೆಯಲ್ಲಿದ್ದ 5 ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಮಂದಿ ಸಾವುತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಮಂದಿ ಸಾವು

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಇದೊಂದು ಅಕ್ರಮ ಪಟಾಕಿ ತಯಾರಿಕಾ ಘಟಕವಾಗಿದ್ದು, ಮನೆಯಲ್ಲೇ ಪಟಾಕಿ ತಯಾರಿಸಲಾಗುತ್ತಿತ್ತು. ಈ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

5 Year Old Among 3 Die In Blast At Illegal Cracker Unit In Tamil Nadu

ಮೃತರನ್ನು 35 ವರ್ಷದ ಸೆಲ್ವಂಮಣಿ, ಅವರ 5 ವರ್ಷದ ಪುತ್ರ ಹಾಗೂ 35 ವರ್ಷದ ಕರ್ಪಾಗಂ ಎಂದು ಗುರುತಿಸಲಾಗಿದೆ. ಅಂತೆಯೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯ ಮತ್ತು ಪ್ರಭಾಕರ್ ಅವರನ್ನು ಸಮೀಪದ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಫೋಟದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮೂರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ. ಸ್ಫೋಟದ ತೀವ್ರತೆಯಿಂದಾಗಿ ಇಡೀ ಮನೆ ಜಖಂಗೊಂಡಿದೆ.
2020ರಲ್ಲಿ ಪಟಾಕಿ ಸ್ಫೋಟ ಸಂಭವಿಸಿ 8 ಮಂದಿ ಮೃತಪಟ್ಟಿದ್ದರು. ತಮಿಳುನಾಡಿನ ಪಟಾಕಿ ತಯಾರಿಕಾ ಘಟಕ ಹೊತ್ತಿ ಉರಿದಿದ್ದು 8 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದರು.

ಚಿಪ್ಪಿಪ್ಪಾರೈ ನಲ್ಲಿ ಘಟನೆ ನಡೆದಿದೆ. ಇದು ಈ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಸಂಭವಿಸಿದ ಎರಡನೇ ಸ್ಫೋಟ ಪ್ರಕರಣವಾಗಿದೆ. ಕಕ್ಕಿವಾದಂಪಟ್ಟಿ ಬಳಿ ಸಂಭವಿಸಿದ್ದ ಮೊದಲ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು.

English summary
Three persons including a five-year-old boy died in a blast at an illegal fire cracker unit at Kalaignar colony of Thayilpatti in Sattur on Monday morning. Local people said that fire broke out during the making of crackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X