ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಪ್ರಯಾಣಿಕರಿಗೆ ಕೋವಿಡ್ -19 ಸೋಂಕು; 51 ಜನರಿಗೆ ಕ್ವಾರಂಟೈನ್

|
Google Oneindia Kannada News

ಚೆನ್ನೈ, ಮೇ 28 : ಚೆನ್ನೈ-ಸೇಲಂ ನಡುವೆ ಸಂಚಾರ ನಡೆಸಿದ್ದ ಐವರು ಪ್ರಯಾಣಿಕರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಕೇಂದ್ರ ಸರ್ಕಾರ ಮೇ 25ರಿಂದ ದೇಶಿಯ ವಿಮಾನ ಸೇವೆಯನ್ನು ಆರಂಭಿಸಿದೆ.

ತಮಿಳುನಾಡಿನ ಚೆನ್ನೈನಿಂದ ಸೇಲಂಗೆ ಬುಧವಾರ ಸಂಚಾರ ನಡೆಸಿದ ಐವರು ಪ್ರಯಾಣಿಕರಿಗೆ ಸೋಂಕು ತಗುಲಿದೆ. ವಿಮಾನದಲ್ಲಿ ಪ್ರಯಾಣಿಸಿದ್ದ ಇತರ 51 ಜನರನ್ನು ಪತ್ತೆ ಮಾಡಲಾಗಿದ್ದು, ಕ್ವಾರಂಟೈನ್‌ನಲ್ಲಿಡಲಾಗಿದೆ.

5 ರಾಜ್ಯಗಳ ವಿಮಾನ, ರೈಲು, ವಾಹನಕ್ಕೆ ನಿರ್ಬಂಧ ಹೇರಿದ ಕರ್ನಾಟಕ5 ರಾಜ್ಯಗಳ ವಿಮಾನ, ರೈಲು, ವಾಹನಕ್ಕೆ ನಿರ್ಬಂಧ ಹೇರಿದ ಕರ್ನಾಟಕ

ಸೋಮವಾರ ಚೆನ್ನೈ-ಕೊಯಮತ್ತೂರು ನಡುವೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನದಲ್ಲಿ ಸಂಚಾರ ನಡೆಸಿದ್ದ ಪ್ರಯಾಣಿಕನಿಗೆ ಸೋಂಕು ಕಾಣಿಸಿಕೊಂಡಿತ್ತು. ತಕ್ಷಣ ವಿಮಾನದ ಸಿಬ್ಬಂದಿಗಳನ್ನು 14 ದಿನಗಳ ಕ್ವಾರಂಟೈನ್‌ಗೆ ಕಳಿಸಲಾಗಿತ್ತು.

ಬೆಂಗಳೂರು-ಮಧುರೈಗೆ ಪ್ರಯಾಣಿಕನಿಗೆ ಕೋವಿಡ್ -19 ಸೋಂಕು ಬೆಂಗಳೂರು-ಮಧುರೈಗೆ ಪ್ರಯಾಣಿಕನಿಗೆ ಕೋವಿಡ್ -19 ಸೋಂಕು

 5 Tested Positive For COVID 19 51 Passengers Sent For Quarantine

ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಲಾಕ್ ಡೌನ್ ಜಾರಿಯಲ್ಲಿದ್ದರೂ ಸೋಮವಾರ ದೇಶಿಯ ವಿಮಾನ ಹಾರಾಟ ಆರಂಭವಾಗಿತ್ತು.

ಕೊವಿಡ್ 19 ಸೋಂಕು: ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆಸ್ಪತ್ರೆಗೆ ಕೊವಿಡ್ 19 ಸೋಂಕು: ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆಸ್ಪತ್ರೆಗೆ

ವಿಮಾನ ಸಂಚಾರ ಆರಂಭವಾದ ಬಳಿಕ 24 ವರ್ಷದ ಪ್ರಯಾಣಿಕನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರು-ಮಧುರೈ ನಡುವೆ ಬುಧವಾರ ಸಂಚಾರ ನಡೆಸಿದ ಪ್ರಯಾಣಿಕನಿಗೂ ಸೋಂಕು ತಗುಲಿದೆ.

ವಿಮಾನದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ. ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡಿರಬೇಕು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ.

English summary
51 passengers sent to quarantine after five passengers Chennai to Salem flight tested positive for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X