ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತ ಬಾಲಕಿಯಿಂದ ಅಂಡಾಣು ಪಡೆದಿದ್ದ 4 ಆಸ್ಪತ್ರೆಗಳಿಗೆ ಬೀಗ

|
Google Oneindia Kannada News

ಚೆನ್ನೈ, ಜುಲೈ 14: 16 ವರ್ಷದ ಬಾಲಕಿಯೊಬ್ಬರ ಅಂಡಾಣು ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡಿನ ನಾಲ್ಕು ಆಸ್ಪತ್ರೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಗುರುವಾರ (ಜುಲೈ 14) ಆದೇಶಿಸಿದೆ.

ವೈದ್ಯಕೀಯ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ನಿರ್ದೇಶನಾಲಯದ (ಡಿಎಂಎಸ್) ತಂಡವು ಸಲ್ಲಿಸಿದ ಅಂತಿಮ ವರದಿಯನ್ನು ಆಧರಿಸಿ, 4 ನಾಲ್ಕು ಆಸ್ಪತ್ರೆಗಳನ್ನು ತಕ್ಷಣವೇ ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಿಮ್ಮ ಮನೆ ಬಾಗಿಲಿಗೆ ವೈದ್ಯರು; ಕರ್ನಾಟಕ ಸರ್ಕಾರದಿಂದ ಪ್ರಾಯೋಗಿಕ ವೈದ್ಯಕೀಯ ಯೋಜನೆ ನಿಮ್ಮ ಮನೆ ಬಾಗಿಲಿಗೆ ವೈದ್ಯರು; ಕರ್ನಾಟಕ ಸರ್ಕಾರದಿಂದ ಪ್ರಾಯೋಗಿಕ ವೈದ್ಯಕೀಯ ಯೋಜನೆ

ಬಾಲಕಿಯ ತಾಯಿ ಎಂಟು ಬಾರಿ ವಿವಿಧ ಕೃತಕ ಗರ್ಭಧಾರಣೆ ಕೇಂದ್ರಗಳಿಗೆ ಅಂಡಾಣು ದಾನ ಮಾಡುವಂತೆ ಬಾಲಕಿಯನ್ನು ಒತ್ತಾಯಿಸಿದ್ದರು ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಕೇರಳದ ತಿರುವನಂತಪುರಂನಲ್ಲಿ ಒಂದು ಮತ್ತು ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಇನ್ನೆರಡು ಆಸ್ಪತ್ರೆಗಳ ಮೇಲೂ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದ್ದು, ಆಯಾ ರಾಜ್ಯ ಸರ್ಕಾರಗಳಿಗೆ ಆದೇಶ ಕಳುಹಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಹೇಳಿದ್ದಾರೆ.

4 fertility hospitals shut down in Tamil Nadu for Forced To Donate minor girls ova

ಬಲವಂತಪಡಿಸಲಾಗಿದೆ; "21 ರಿಂದ 35 ವರ್ಷ ವಯಸ್ಸಿನ ವಯಸ್ಕ ವಿವಾಹಿತ ಮಹಿಳೆಯರಿಗೆ ಮಾತ್ರ ಅಂಡಾಣು ದಾನ ಮಾಡಲು ಅನುಮತಿ ಇದೆ. ಅದು ಒಮ್ಮೆ ಮಾತ್ರ. ಆದರೆ, ಈ ಪ್ರಕರಣದಲ್ಲಿ ಬಾಲಕಿಯನ್ನು ಎಂಟು ಬಾರಿ ಅಂಡಾಣು ದಾನ ಮಾಡುವಂತೆ ಬಲವಂತಪಡಿಸಲಾಗಿದೆ" ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

"ಅಪ್ರಾಪ್ತ ಬಾಲಕಿಯನ್ನು ವಯಸ್ಕಳೆಂದು ತೋರಿಸಲು ಆಧಾರ್ ಕಾರ್ಡ್ ಅನ್ನು ನಕಲಿ ಮಾಡಲಾಗಿದೆ. ಇಲ್ಲದೆ ಇರುವ ಗಂಡನ ಒಪ್ಪಿಗೆಯನ್ನು ಪಡೆಯಲಾಗಿದೆ" ಎಂದಿರುವ ಆರೋಗ್ಯ ಸಚಿವ, ತನಿಖಾ ಸಮಿತಿಯು ಗುರುತಿಸಿರುವ ಹಲವು ವಿಷಯಗಳನ್ನು ತಿಳಿಸಿದ್ದಾರೆ. ವೈದ್ಯ ವಿಶ್ವನಾಥನ್ ನೇತೃತ್ವದ ಆರು ಸದಸ್ಯರ ಡಿಎಂಎಸ್ ತಂಡವು ಗುರುವಾರ ಸಲ್ಲಿಸಿದ ಅಂತಿಮ ವರದಿ ಸಲ್ಲಿಸಿದೆ.

ಈ ಆಸ್ಪತ್ರೆಗಳು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕಾಯ್ದೆಯನ್ನು (Assisted Reproductive Technology Act) ಉಲ್ಲಂಘಿಸಿವೆ ಎಂದು ಆರೋಪಿಸಲಾಗಿದೆ. ಆಸ್ಪತ್ರೆಗಳು ಅರ್ಹ ಸಲಹೆಗಾರರನ್ನು ಹೊಂದಿಲ್ಲ ಮತ್ತು ಬಾಲಕಿಗೆ ಇದರ ಕಾರ್ಯವಿಧಾನದ ಸಾಧಕ, ಬಾಧಕಗಳ ಕುರಿತು ಯಾವುದೇ ಸಲಹೆಗಳನ್ನು ನೀಡಿಲ್ಲ ಎಂದು ತನಿಖಾ ಸಮಿತಿಯು ಕಂಡುಹಿಡಿದಿದೆ.

4 fertility hospitals shut down in Tamil Nadu for Forced To Donate minor girls ova

ಪ್ರಕರಣವೇನು?; ಈರೋಡ್‌ನಲ್ಲಿನ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಅಂಡಾಣುವನ್ನು ಮಾರಾಟ ಮಾಡುವಂತೆ ಆಕೆಯ ತಾಯಿ ಮತ್ತು ಆಕೆಯ ತಾಯಿಯ ಸಂಗಾತಿ ಬಲವಂತಪಡಿಸಿದ ಭೀಕರ ಪ್ರಕರಣ ಈ ವರ್ಷದ ಜೂನ್‌ನಲ್ಲಿ ಬೆಳಕಿಗೆ ಬಂದಿತ್ತು. ಬಾಲಕಿಗೆ 12 ವರ್ಷವಾಗಿದ್ದಾಗಿನಿಂದ ಸತತ ನಾಲ್ಕು ವರ್ಷಗಳ ಕಾಲ ಆಕೆಯನ್ನು ಅಂಡಾಣು ದಾನ ಮಾಡುವಂತೆ ಒತ್ತಾಯಿಸಲಾಗಿತ್ತು.

ಆಕೆ ವಿವಾಹಿತೆ ಎಂದು ನಕಲಿ ಆಧಾರ್ ಕಾರ್ಡ್ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಬಳಸಿ ತನ್ನ ಅಂಡಾಣುವನ್ನು ದಾನ ಮಾಡಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 2 ರಂದು ಈರೋಡ್ ಪೊಲೀಸರು ತಾಯಿ, ಆಕೆಯ ಸಂಗಾತಿ ಮತ್ತು ಏಜೆಂಟ್ ಆಗಿ ಕಾರ್ಯನಿರ್ವಹಿಸಿದ ತಾಯಿಯ ಸ್ನೇಹಿತನನ್ನು ಬಂಧಿಸಿದ್ದಾರೆ. ಆಧಾರ್ ಕಾರ್ಡ್ ಅನ್ನು ನಕಲಿ ಮಾಡುವಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಜೂನ್ 3ರ ರಾತ್ರಿ ಬಂಧಿಸಲಾಯಿತು.

ಕಳೆದ ನಾಲ್ಕು ವರ್ಷಗಳಲ್ಲಿ ಈರೋಡ್ ಮತ್ತು ನೆರೆಯ ಜಿಲ್ಲೆಗಳ ಫಲವತ್ತತೆ ಆಸ್ಪತ್ರೆಗಳಿಗೆ ಬಾಲಕಿ ತನ್ನ ಅಂಡಾಣುವನ್ನು ಎಂಟು ಬಾರಿ ದಾನ ಮಾಡಿರುವುದು ಕಂಡುಬಂದಿದೆ. ಪ್ರತಿ ಅಂಡಾಣು ದಾನಕ್ಕೆ ತಾಯಿಗೆ 20,000 ರೂ. ಮತ್ತು ಆಕೆಯ ಸ್ನೇಹಿತನಿಗೆ 5,000 ರೂ. ದೊರೆಯುತ್ತಿತ್ತು.

ಇನ್ನು ಬಾಲಕಿಯ ಮೇಲೆ ತಾಯಿಯ ಸಂಗಾತಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಸೇಲಂನಲ್ಲಿರುವ ಬಾಲಕಿಯ ಸಂಬಂಧಿಕರ ಬಳಿ ಈಕೆ ಆಶ್ರಯ ಪಡೆದ ನಂತರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಕುರಿತು ಆಧಾರ್ ಮತ್ತು ಪೋಕ್ಸೊ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.

ಘಟನೆ ಬೆಳಕಿಗೆ ಬಂದ ಬಳಿಕ ಯಾವುದೇ ಫರ್ಟಿಲಿಟಿ ಆಸ್ಪತ್ರೆಗಳು ಇಂತಹ ಕೃತ್ಯದಲ್ಲಿ ತೊಡಗಿದ್ದರೇ 2021 ರ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆಯ ಅಡಿಯಲ್ಲಿ 50 ಲಕ್ಷ ರೂಪಾಯಿ ದಂಡ ಅಥವಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಇನ್ನು, ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆಗಳನ್ನು ಮುಚ್ಚಲು ಎರಡು ವಾರಗಳ ಅವಕಾಶ ನೀಡಲಾಗಿದೆ.

Recommended Video

England ವಿರುದ್ಧ ಹೀನಾಯವಾಗಿ ಸೋತ್ಮೇಲೆ ಟೀಂ‌ ಇಂಡಿಯಾಗೇ ಬಿಗ್ ಶಾಕ್ *Cricket | OneIndia Kannada

English summary
Tamil Nadu health department has ordered action against four private hospitals for forced to donate minor girls ova.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X