ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್ಟಿಗರ ಗಮನ ಸೆಳೆದ 200 ವರ್ಷ ಹಳೆಯದಾದ ಹಲಸಿನ ಮರ; ವಿಡಿಯೋ ನೋಡಿ

|
Google Oneindia Kannada News

ಚೆನ್ನೈ, ಸೆ. 26; ಭಾರತವು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ. ವೈವಿದ್ಯತೆಗೆ ಹೆಸರಾದ ದೇಶದಲ್ಲಿ ವಿವಿಧ ಋತುಗಳಲ್ಲಿ ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳು ದೊರೆಯುತ್ತವೆ. ಕೆಲವೊಮ್ಮೆ ಒಂದೊಂದು ಹಣ್ಣು, ಮರ, ತರಕಾರಿ ನಮ್ಮನ್ನು ವಿಸ್ಮಯಕ್ಕೂ ದೂಡುತ್ತದೆ.

ಹೌದು, ಹೀಗೆ ನೆಟ್ಟಿಗರನ್ನು ವಿಸ್ಮಯಕ್ಕೆ ದೂಡಿರುವುದು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪುರಾತನವಾದ ಹಲಸಿನ ಮರ. ಮರದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ.

ಕರಾವಳಿಯ ದೈವಾರಾಧ್ಯನಿಗೆ ಸರ್ಕಾರದ ಅಧಿಕೃತ ವೆಬ್ ಸೈಟ್‌ನಲ್ಲೇ ಅವಮಾನ; ಭುಗಿಲೆದ್ದ ಆಕ್ರೋಶಕರಾವಳಿಯ ದೈವಾರಾಧ್ಯನಿಗೆ ಸರ್ಕಾರದ ಅಧಿಕೃತ ವೆಬ್ ಸೈಟ್‌ನಲ್ಲೇ ಅವಮಾನ; ಭುಗಿಲೆದ್ದ ಆಕ್ರೋಶ

ಮೂರು ದಿನಗಳ ಹಿಂದೆ ಅಪರ್ಣಾ ಕಾರ್ತಿಕೇಯನ್ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ "ಆಯಿರಂಕಾಚಿ ಸುತ್ತಮುತ್ತ: ಈ ಹಲಸಿನ ಮರವು 200 ವರ್ಷಗಳಷ್ಟು ಹಳೆಯದು ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಯ ವಿಐಪಿಯಾಗಿದೆ. ಮರದ ಮುಂದೆ ನಿಲ್ಲುವುದು ಒಂದು ಗೌರವ" ಎಂದು ಬರೆದುಕೊಂಡಿದ್ದರು.

200-Year-Old Jackfruit Tree In Tamil Nadu gaining traction on Internet

ಈ 200 ವರ್ಷಗಳಷ್ಟು ಹಳೆಯ ಮರದಿಂದ ಹಲವಾರು ಹಲಸುಗಳು ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮರ ತುಂಬಾ ವಿಶಾಲವಾದ ಕಾಂಡವನ್ನು ಹೊಂದಿದ್ದು, ಹಲವಾರು ದೊಡ್ಡ ದೊಡ್ಡ ಕೊಂಬೆಗಳನ್ನು ಹೊಂದಿದೆ.

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಪ್ರಕಾರ, ಆಯಿರಂಕಾಚಿ ವಿಶಾಲವಾದ, ಎತ್ತರದ ಮತ್ತು ಫಲಭರಿತವಾದ ಪಾಲಾ ಮರಮ್ (ಹಲಸು) ಮರವಾಗಿದೆ. ಇದು ಎಷ್ಟು ದೊಡ್ಡದಾಗಿದೆ ಎಂದರೆ ಅದರ ಸುತ್ತಲೂ ನಡೆಯಲು 25 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದರ ಹಳೆಯ ಕಾಂಡವು ಸುಮಾರು ನೂರು ಹಸಿರು ಹಲಸಿನ ಹಣ್ಣುಗಳಿಂದ ಮುಚ್ಚಲ್ಪಟ್ಟಿದೆ.

ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ, 13,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಮಂದಿ ಇಷ್ಟಪಟ್ಟಿದ್ದಾರೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಹಲವಾರು ಬಳಕೆದಾರರು ಪ್ರಾಚೀನ ಮರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

200-Year-Old Jackfruit Tree In Tamil Nadu gaining traction on Internet

ಕೆಲವರು ಮರದ ಹಣ್ಣಿನ ರುಚಿ ನೋಡುವುದು ಕೂಡ ಒಂದು ಆಶೀರ್ವಾದ ಎಂದು ಬರೆದಿದ್ದಾರೆ.

ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಹಣ್ಣುಗಳಿಗೆ ನೆಲೆಯಾಗಿದೆ. ಇದನ್ನು ಸಾಮಾನ್ಯವಾಗಿ "ಜಾಕ್" ಎಂದು ಕರೆಯಲಾಗುತ್ತದೆ. ಈ ಹೆಸರು ಜಾಕಾದ ಪೋರ್ಚುಗೀಸ್ ರೂಪಾಂತರವಾಗಿದೆ. ಇದು ಮಲಯಾಳಂ ಪದ "ಚಕ್ಕ" ದಿಂದ ಬಂದಿದೆ. ಆರ್ಟೊಕಾರ್ಪಸ್ ಹೆಟೆರೊಫಿಲ್ಲಸ್ ಇದರ ಸುದೀರ್ಘ ವೈಜ್ಞಾನಿಕ ಹೆಸರು ಎಂದು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಹೇಳಿದೆ.

English summary
200-Year-Old Jackfruit Tree in Tamil Nadu's Cuddalore district gaining traction on social media. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X