ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನ ಸ್ಟಾರ್ ಹೋಟೆಲ್ ಗಳಲ್ಲಿ ಕೊರೊನಾ ಸ್ಫೋಟ; ಜಿಸಿಸಿ ನಿರ್ಬಂಧ

|
Google Oneindia Kannada News

ಚೆನ್ನೈ, ಜನವರಿ 04: ಚೆನ್ನೈನ ಪ್ರತಿಷ್ಠಿತ ಹೋಟೆಲ್ ಗಳ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈಚೆಗಷ್ಟೆ ಐಟಿಸಿ ಗ್ರಾಂಡ್ ಚೋಳಾ ಹೋಟೆಲ್ ನಲ್ಲಿ ಕೊರೊನಾ ಸ್ಫೋಟಗೊಂಡ ಬೆನ್ನಲ್ಲೇ ಮತ್ತೊಂದು ಸ್ಟಾರ್ ಹೋಟೆಲ್ ನಲ್ಲಿ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿವೆ.

ಚೆನ್ನೈನ ಎಂಆರ್ ಸಿ ನಗರದಲ್ಲಿನ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿನ 20 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಹೋಟೆಲ್ ಮೇಲೆ ನಿರ್ಬಂಧಗಳನ್ನು ಹೇರಿದೆ. ಹೋಟೆಲ್ ನ ಶೇ. 10ರಷ್ಟು ಸಿಬ್ಬಂದಿಯಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಮುಂದೆ ಓದಿ...

 114 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು

114 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು

ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ 16ರಿಂದ ಇಲ್ಲಿಯವರೆಗೆ ಚೆನ್ನೈನ ಸ್ಟಾರ್ ಹೋಟೆಲ್ ಗಳಲ್ಲಿನ 1623 ನೌಕರರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 114 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅದೇ ರೀತಿ ಸ್ಟಾರ್ ಹೋಟೆಲ್ ಹೊರತುಪಡಿಸಿ, ಇತರೆ ಹೋಟೆಲ್ ಗಳಲ್ಲಿ ಕೆಲಸ ಮಾಡುವ 2769 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 11 ಮಂದಿಗೆ ಸೋಂಕು ದೃಢಪಟ್ಟಿದೆ.

 ಹೋಟೆಲ್ ನ 125 ಸಿಬ್ಬಂದಿಗೆ ಕೊರೊನಾ ಸೋಂಕು

ಹೋಟೆಲ್ ನ 125 ಸಿಬ್ಬಂದಿಗೆ ಕೊರೊನಾ ಸೋಂಕು

ಡಿಸೆಂಬರ್ 16ರಿಂದ ಜನವರಿ 3ರವರೆಗೂ ಒಟ್ಟು 125 ಹೋಟೆಲ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಜಿಸಿಸಿ ತಿಳಿಸಿದೆ. 2163 ಸಿಬ್ಬಂದಿ ವರದಿ ಇನ್ನೂ ದೊರೆತಿಲ್ಲ. ವರದಿಗಾಗಿ ಹೋಟೆಲ್ ಆಡಳಿತ ಮಂಡಳಿಗಳು ಎದುರು ನೋಡುತ್ತಿವೆ.

 ಗ್ಯ್ರಾಂಡ್ ಚೋಳಾ ಹೋಟೆಲ್ ನಲ್ಲಿ 97 ಪ್ರಕರಣ

ಗ್ಯ್ರಾಂಡ್ ಚೋಳಾ ಹೋಟೆಲ್ ನಲ್ಲಿ 97 ಪ್ರಕರಣ

ಡಿಸೆಂಬರ್ 15ರಿಂದ ಜನವರಿ 3ರವರೆಗೆ ಐಟಿಸಿ ಗ್ರ್ಯಾಂಡ್ ಚೋಳಾ ಹೋಟೆಲ್ ನಲ್ಲಿ 619 ಮಾದರಿಗಳನ್ನು ಪರೀಕ್ಷಿಸಿದ್ದು, 97 ಮಾದರಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹೋಟೆಲ್ ಗಳ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಿಬ್ಬಂದಿಗೆ ಜಿಸಿಸಿ ಕೊರೊನಾ ಪರೀಕ್ಷೆಗಳನ್ನು ನಡೆಸುತ್ತಿದೆ. ಚೆನ್ನೈನಲ್ಲಿ ಉನ್ನತ ಮಟ್ಟದ ರಾಜಕೀಯ ಹಾಗೂ ವ್ಯವಹಾರ ಸಭೆಗಳಿಗೆ ಹೋಟೆಲ್ ಲೀಲಾ ಪ್ಯಾಲೇಸ್ ಪ್ರಮುಖ ತಾಣವಾಗಿದೆ. ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ 232 ಮಂದಿಯನ್ನು ಪರೀಕ್ಷಿಸಿದ್ದು, 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

 ತಮಿಳುನಾಡಿನಲ್ಲಿ 867 ಹೊಸ ಪ್ರಕರಣ

ತಮಿಳುನಾಡಿನಲ್ಲಿ 867 ಹೊಸ ಪ್ರಕರಣ

ತಮಿಳುನಾಡಿನಲ್ಲಿ ಡಿ.3ರ ವರದಿಯಂತೆ 867 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. 8,127 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಹತ್ತು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ರಾಜ್ಯದಲ್ಲಿ ಸೋಂಕಿನಿಂದ ಒಟ್ಟು 12,156 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

English summary
20 staff members of Hotel Leela Palace, in MRC Nagar tested positive for the virus, after which the Greater Chennai Corporation (GCC) ordered the curbs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X