ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಚ್ಚಿನ '20 ರೂಪಾಯಿ ಡಾಕ್ಟರ್' ಶರೀರದ ಮುಂದೆ ಕಣ್ಣೀರಿಟ್ಟರು ಜನ

|
Google Oneindia Kannada News

ಚೆನ್ನೈ, ಅಕ್ಟೋಬರ್ 4: ರೋಗಿಗಳಿಂದ ಕೇವಲ ಐದು ರೂಪಾಯಿ ಸೇವಾ ಶುಲ್ಕ ಪಡೆಯುವ ಮಂಡ್ಯದ ವೈದ್ಯ ಡಾ.ಎಚ್‌.ಸಿ. ಶಂಕರೇಗೌಡ ಅವರು 'ಐದು ರೂಪಾಯಿ ಡಾಕ್ಟ್ರು' ಎಂದೇ ಬಹುಪ್ರಸಿದ್ಧಿ ಗಳಿಸಿದವರು. ಅವರಂತೆಯೇ ನೆರೆಯ ತಮಿಳುನಾಡಿನ ಚೆನ್ನೈನಲ್ಲಿ '20 ರೂಪಾಯಿ ಡಾಕ್ಟರ್' ಜಗನ್ ಮೋಹನ್ ಕೂಡ ಹೆಸರುವಾಸಿ.

ದಿನಬೆಳಗಾದರೆ ಸಾಕು, ಚೆನ್ನೈನ ಆರ್‌.ಕೆ. ಮಠ ರಸ್ತೆಯಲ್ಲಿರುವ ಡಾ. ಎ. ಜಗನ್ ಮೋಹನ್ ಅವರ ಮನೆ ಮತ್ತು ಕ್ಲಿನಿಕ್ ಮುಂದೆ ರೋಗಿಗಳು ಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತಿರುತ್ತಿದ್ದರು. ಬುಧವಾರ ಬೆಳಿಗ್ಗೆಯೂ ಆ ರಸ್ತೆಯ ತುಂಬಾ ಜನದಟ್ಟಣೆ.

ಉಕ್ಕಿ ಬರುತ್ತಿದ್ದ ಕಣ್ಣೀರ ಕೋಡಿಯನ್ನು ತಡೆಯಲಾಗದೆ ಬಿಕ್ಕುತ್ತಲೇ ತಮ್ಮ ಪ್ರೀತಿಯ '20 ರೂಪಾಯಿ ಡಾಕ್ಟರ್' ಅವರನ್ನು ನೋಡಲು ಜನರು ಸಾಲುಗಟ್ಟಿ ನಿಂತಿದ್ದರು. ಒಂದು ಬಟ್ಟೆ ಅಂಗಡಿ ಮತ್ತು ಸೂಪರ್ ಮಾರ್ಕೆಟ್ ಒಂದರ ನಡುವಿನ ಮನೆಯ ಮುಂದೆ ಜಗನ್ ಮೋಹನ್ ಅವರ ಮೃತದೇಹ ತಣ್ಣನೆ ಮಲಗಿತ್ತು.

ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ

ಸುರಿಯುತ್ತಿದ್ದ ಮಳೆಯ ಹನಿಯ ಜೊತೆಗೆ ಅವರ ಅಭಿಮಾನಿಗಳ ಕಣ್ಣೀರು ಕರಗಿ ಹೋಗುತ್ತಿತ್ತು. ಸುದ್ದಿ ಕೇಳಿ ದೂರ ಊರುಗಳಿಂದ ಬಂದಿದ್ದ ಜನರು ಮಳೆಯನ್ನೂ ಲೆಕ್ಕಿಸದೆ ತಮ್ಮ ಪ್ರೀತಿಯ ವೈದ್ಯರಿಗೆ ಅಂತಿಮ ವಿದಾಯ ಹೇಳಿದರು. ಜನರ ಅಭಿಮಾನ, ಪ್ರೀತಿಗೆ ಪಾತ್ರರಾಗಿದ್ದ ವೈದ್ಯರ ಅಗಲುವಿಕೆಗೆ ವರುಣನೂ ಅಶ್ರುತರ್ಪಣ ನೀಡಿದ.

ಮಂಗಳವಾರ ನಿಧನ

ಬಡ ಜನರಿಗೆ ಯಾವ ಆಸ್ಪತ್ರೆಯೂ ನೀಡದ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದ ಡಾ. ಜಗನ್ ಮೋಹನ್ ಅವರೆಂದರೆ ಜನರಿಗೆ ಅಚ್ಚುಮೆಚ್ಚು. ಬಡ ರೋಗಿಗಳಿಗೆ ಅನುಕೂಲವಾಗುವಂತೆ ಚಿಕಿತ್ಸೆ ನೀಡುತ್ತಿದ್ದ ಅವರು ತೆಗೆದುಕೊಳ್ಳುತ್ತಿದ್ದ ಗರಿಷ್ಠ 20 ರೂಪಾಯಿ ಮಾತ್ರ. 78 ವರ್ಷ ವಯಸ್ಸಿನ ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದರು.

ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗನನ್ನು ಅವರು ಅಗಲಿದ್ದಾರೆ.

ಬೆಳಗಾವಿಯ ದಿವಾನನ ಮಗಳು, ಬೆಂಗಳೂರಿನ ಬಿಸಿಲ ಝಳದಲ್ಲಿ ಕರಗಿದ ನೈಜ ಕತೆ!ಬೆಳಗಾವಿಯ ದಿವಾನನ ಮಗಳು, ಬೆಂಗಳೂರಿನ ಬಿಸಿಲ ಝಳದಲ್ಲಿ ಕರಗಿದ ನೈಜ ಕತೆ!

Array

ಬಡವರಿಗಾಗಿ ಸೇವೆ

1940ರಲ್ಲಿ ಜನರಿದ ಡಾ. ಜಗನ್ ಅವರು, 1970ರ ದಶಕದ ಆರಂಭದಲ್ಲಿ ಕ್ಲಿನಿಕ್ ತೆರೆದರು. ವೈದ್ಯ ಸೇವೆ ಆರಂಭಿಸಿದ ಸಂದರ್ಭದಲ್ಲಿ ಅವರು ಬಡ ರೋಗಿಗಳಿಂದ ತೆಗೆದುಕೊಳ್ಳುತ್ತಿದ್ದ ಶುಲ್ಕ ಒಂದು ರೂಪಾಯಿ ಮಾತ್ರ. ಸಮಾಜದ ಅತಿ ಬಡ ವರ್ಗದ ಜನರೇ ಅವರ ಮುಖ್ಯ ರೋಗಿಗಳಾಗಿದ್ದರು. ಒಂದು ರೂಪಾಯಿ ಕೂಡ ಕೊಡಲು ಸಾಮರ್ಥ್ಯ ಇಲ್ಲದವರಿಗೆ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು. ಜನರು ತಮ್ಮ ಕೈಯಲ್ಲಿದ್ದಷ್ಟು ಹಣ ಕೊಡುತ್ತಿದ್ದರು. ಎಷ್ಟು ಕೊಡುತ್ತಿದ್ದರೋ ಅವರು ಅಷ್ಟನ್ನೇ ತೆಗೆದುಕೊಳ್ಳುತ್ತಿದ್ದರು.

ಹೊಟ್ಟೆಯಿಲ್ಲದೆ ಬದುಕಬೇಕಾದ ಅಬ್ಬಾಸ್ ಆಸೆಯಿಂದ ಕೇಳಿದ್ದು ಬಿರಿಯಾನಿಹೊಟ್ಟೆಯಿಲ್ಲದೆ ಬದುಕಬೇಕಾದ ಅಬ್ಬಾಸ್ ಆಸೆಯಿಂದ ಕೇಳಿದ್ದು ಬಿರಿಯಾನಿ

1 ರಿಂದ 20 ರೂ.ವರೆಗೆ

1 ರಿಂದ 20 ರೂ.ವರೆಗೆ

ಕ್ರಮೇಣ ಅವರ ಸೇವಾ ಶುಲ್ಕ 2, 3, 5, 10 ಹೀಗೆ ಸ್ವಲ್ಪವೇ ಏರಿಕೆಯಾಗಿ 20 ರೂಪಾಯಿಗೆ ತಲುಪಿತ್ತು. ವಯಸ್ಸಾದರೂ ಕಳೆದ ಎರಡು ವಾರದವರೆಗೂ ಅವರು ರೋಗಿಗಳ ತಪಾಸಣೆ ನಡೆಸುವುದನ್ನು ಮುಂದುವರಿಸಿದ್ದರು. ದುಡ್ಡಿಲ್ಲದಿದ್ದರೆ, 'ಈಗ ಹೋಗು, ಆಮೇಲೆ ಹಣ ಕೊಟ್ಟರಾಯಿತು' ಎನ್ನುತ್ತಿದ್ದರು. 'ಈಗಿನ ಜನರು ಅವರನ್ನು 20 ರೂಪಾಯಿ ಡಾಕ್ಟರ್ ಎಂದು ಕರೆಯುತ್ತಿದ್ದರು. ಆದರೆ ನಮಗೆ ಅವರು 'ಎರಡು ರೂಪಾಯಿ ಡಾಕ್ಟರ್'. ಇನ್ನು ಮುಂದೆ ನಮ್ಮ ಪಾಡೇನು' ಎಂದು ಕಣ್ಣೀರಿಟ್ಟರು 67 ವರ್ಷದ ವೃದ್ಧೆ ಸೆಲ್ವಿ ಅಮ್ಮಾ.

ಸಾವು ಮತ್ತು ಗ್ರಾಹಕ ಬಾಗಿಲು ತಟ್ಟಿ ಬರಲ್ಲ, ಸಿದ್ಧವಾಗಿಯೇ ಇರಿ!ಸಾವು ಮತ್ತು ಗ್ರಾಹಕ ಬಾಗಿಲು ತಟ್ಟಿ ಬರಲ್ಲ, ಸಿದ್ಧವಾಗಿಯೇ ಇರಿ!

ಸಮಯವನ್ನೂ ನೋಡುತ್ತಿರಲಿಲ್ಲ

'ಒಮ್ಮೆ ನನ್ನ ಮಗನಿಗೆ ತೀವ್ರ ಹೊಟ್ಟೆ ನೋವು ಬಂದಿತ್ತು. ಅವನ ಕಿಡ್ನಿಯಲ್ಲಿ ಕಲ್ಲುಗಳಿದ್ದವು. ನೋವು ತಡೆದುಕೊಳ್ಳುವುದು ಅಸಾಧ್ಯವಾಗಿತ್ತು. ಅದು ನಸುಕಿನ ಮೂರು ಗಂಟೆ ಸಮಯ. ನನಗೀಗಲೂ ನೆನಪಿದೆ. ಅವರ ಮನೆ ಬೆಲ್ ಮಾಡಿದಾಗ ಅವರು ಸ್ಪಂದಿಸಿದರು. ನನ್ನ ಮಗನಿಗೆ ಮಾತ್ರೆಗಳನ್ನು ಮತ್ತು ಇಂಜೆಕ್ಷನ್ ನೀಡಿದರು. ನಮ್ಮಿಂದ ಹಣವನ್ನೇ ತೆಗೆದುಕೊಳ್ಳಲಿಲ್ಲ. ನನ್ನ ಮಗನ ಆರೋಗ್ಯ ಸುಧಾರಿಸಿತು. ಅವರದು ಅದೃಷ್ಟದ ಕೈಗುಣ' ಎಂದು ಸೆಲ್ವಿ ನೆನಪಿಸಿಕೊಂಡರು.

English summary
A doctor who was famous for only 20 Rs fee, was passed away in Chennai on Tuesday night. Dr. Jagan Mohan served his career for poor people of the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X