ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡುವ ವಯಸ್ಸಿನಲ್ಲೇ ದಾಖಲೆ ಬರೆದ 2 ವರ್ಷದ ಕಂದಮ್ಮ

By Vanitha
|
Google Oneindia Kannada News

ಚೆನ್ನೈ, ಅಕ್ಟೋಬರ್, 08 : ಆಡುವ ವಯಸ್ಸಿನಲ್ಲಿಯೇ ಸಾಧನೆ ಮಾಡಿ ಜಗತ್ತಿನ ದೃಷ್ಟಿಯನ್ನು ತನ್ನತ್ತ ತಿರುಗಿಸಿಕೊಳ್ಳುತ್ತಿರುವ ಮಕ್ಕಳ ಸಂಖ್ಯೆ ನಾಡಿನಾದ್ಯಂತ ಅಧಿವಾಗುತ್ತಲೇ ಸಾಗಿದೆ. ಸಾಧನಾ ಹಾದಿಯಲ್ಲಿ ಪುಟ್ಟ ಕಂದಮ್ಮಗಳೂ ಬಹಳ ಚೈತನ್ಯದಿಂದ ಹೆಜ್ಜೆ ಹಾಕುತ್ತಿದ್ದಾರೆ.

ತಮಿಳುನಾಡಿನ ಮೆಮೊರಿ ರೆಕಾರ್ಡ್ ಗೇಮ್ ಷೋದಲ್ಲಿ ಸಾಧನೆ ಮಾಡಿದ ಎರಡು ವರ್ಷದ ಆಲೀಯಾ ಶಾಹುಲ್ ಹಮೀದ್ ಎಂಬ ಪುಟಾಣಿಯ ಹೆಸರು ಭಾರತದ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡಿದೆ. ಆಶ್ಚರ್ಯವಾದರೂ ಇದು ಸತ್ಯ. ಈಕೆಯ ಪೋಷಕರು ಅರಬ್ ನ ಅಬುದಬಿಯಲ್ಲಿ ನೆಲೆಸಿದ್ದಾರೆ.[ಸುಡೊಕು'ದಲ್ಲಿ ಬೆಳ್ಳಿಪದಕ ಗೆದ್ದು, ಮಿಂಚಿದ ಬೆಂಗಳೂರು ಬಾಲಕಿ]

2-year-old girl creates national record; meet the Wonder Kid Aaliyah

ಭಾರತೀಯ ದಾಖಲೆ ಪುಸ್ತಕ ಸಮಿತಿ ಏರ್ಪಡಿಸಿದ್ದ ಮೆಮೊರಿ ರೆಕಾರ್ಡ್ ಗೇಮ್ ಷೋ ಪಾಲ್ಗೊಂಡಿದ್ದ ಆಲಿಯಾ ಒಂದು ನಿಮಿಷದಲ್ಲಿ ಹಲವಾರು ಜಾಮಿಟ್ರಿಕಲ್ ಹಾಗೂ ನಾನ್ ಜಾಮಿಟ್ರಿಕಲ್ ಆಕೃತಿಗಳನ್ನು ಗುರುತಿಸಿದ್ದು, ಈಕೆ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಬರೆದಿದ್ದಾಳೆ.

ಮೆಮೋರಿ ರೆಕಾರ್ಡ್ ಷೋದಲ್ಲಿ ಒಂದು ನಿಮಿಷದಲ್ಲಿ 25 ಜಾಮಿಟ್ರಿಕಲ್ ಹಾಗೂ ನಾನ್ ಜಾಮಿಟ್ರಿಕಲ್ ಆಕೃತಿಯನ್ನು ಆಕೆ ಗುರುತಿಸಬೇಕಿತ್ತು. ಆದರೆ ಆಲಿಯಾ ಸಂಸ್ಥೆ ಹೇಳಿದ್ದಕ್ಕಿಂತ ಹೆಚ್ಚಾಗಿಯೇ ಅಂದರೆ 36 ಆಕೃತಿಯನ್ನು ಗುರುತಿಸಿದ ಈಕೆ ದಾಖಲೆ ಪುಸ್ತಕದಲ್ಲಿ ಮುನ್ನುಡಿ ಬರೆದಿದ್ದಾಳೆ.

ಭಾರತೀಯ ದಾಖಲೆ ಪುಸ್ತಕ ಸಮಿತಿಯು 2004ರಲ್ಲಿ ಆರಂಭವಾಗಿದ್ದು, ಗಿನ್ನೆಸ್ ದಾಖಲೆ ಮಾಡಿದ ಡಾ ಬಿಷಪ್ ರಾಯ್ ಚೌಧರಿ ನೆನಪಿನಾರ್ಥ ಸ್ಥಾಪಿಸಲಾಗಿತ್ತು.

English summary
2-year-old Aliyah, who hails from Tamil Nadu, participated in the Memory Record game she recognise maximum number of Geometrical and Non-Geometrical shapes in a minute.a new record and entering her name into the India Book of Records.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X