• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುದಂಕುಳಂ ಅಣುಶಕ್ತಿ ಸ್ಥಾವರ ಘಟಕದಲ್ಲಿ 164 ಮಂದಿಗೆ ಕೊರೊನಾ ಸೋಂಕು

|

ಚೆನ್ನೈ, ಏಪ್ರಿಲ್ 21: ಕುದಂಕುಳಂ ಅಣುಶಕ್ತಿ ಸ್ಥಾವರ ಘಟಕದಲ್ಲಿ 164 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ಐದು ದಿನಗಳ ಹಿಂದೆ ರಷ್ಯಾದ ನಾಗರಿಕರು ಸೇರಿ 13 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಅದರಲ್ಲಿ 12 ಮಂದಿಯನ್ನು ಅನು ವಿಜಯ್ ಟೌನ್‌ಶಿಪ್‌ನಲ್ಲಿರುವ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಭಾರತದಲ್ಲಿ 13 ಕೋಟಿಗೂ ಅಧಿಕ ಮಂದಿಗೆ ಕೊರೊನಾ ಲಸಿಕೆ!ಭಾರತದಲ್ಲಿ 13 ಕೋಟಿಗೂ ಅಧಿಕ ಮಂದಿಗೆ ಕೊರೊನಾ ಲಸಿಕೆ!

ಇನ್ನೊಬ್ಬರನ್ನು ನಾಗೆರ್‌ಕೋಯಿಲ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಅಣುಸ್ಥಾವರದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ಈಗ 164 ಮಂದಿಗೆ ಸೋಂಕು ತಗುಲಿದೆ.

ಸಾಕಷ್ಟು ಮಂದಿ ಸಿಬ್ಬಂದಿಗೆ ತಿರುನೆಲ್‌ವೇಲಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುನಿಟ್ 3 ಹಾಗೂ ಯುನಿಟ್‌ 4ರಲ್ಲಿ ಕಾರ್ಯ ಸ್ಥಗಿತಗೊಳಿಸಲಾಗಿದೆ. ಮಹೇಂದ್ರಗಿರಿ ಇಸ್ರೋ ಕೇಂದ್ರದಲ್ಲಿ 132 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 2,95,041 ಮಂದಿಗೆ ಕೊರೊನಾ ಸೋಂಕು ತಗುಲಿದೆ. 2023 ಮಂದಿ ಮೃತಪಟ್ಟಿದ್ದಾರೆ, 1,67,457 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟು 1,56,16,130 ಪ್ರಕರಣಗಳಿವೆ, 1,32,76,039 ಮಂದಿ ಗುಣಮುಖರಾಗಿದ್ದಾರೆ, 21,57,538 ಸಕ್ರಿಯ ಪ್ರಕರಣಗಳಿವೆ ಇದುವರೆಗೂ 1,82,553 ಮಂದಿ ಸಾವನ್ನಪ್ಪಿದ್ದಾರೆ.

English summary
Covid 19: 164 people confirmed to have corona infection at Kudankulam nuclear power plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X