ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ತರಕಾರಿ ಮಾರುಕಟ್ಟೆಯ 150 ಮಂದಿಗೆ ಕೋವಿಡ್ ಪರೀಕ್ಷೆ

|
Google Oneindia Kannada News

ಚೆನ್ನೈ, ಮೇ 20: ಚೆನ್ನೈನ ಎಂಜಿಆರ್ ಮಾರುಕಟ್ಟೆಯಲ್ಲಿ ಇರುವ 150 ತರಕಾರಿ ಮಾರಾಟಗಾರರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಮಾರುಕಟ್ಟೆಯಲ್ಲಿ ಇದ್ದ ಇಬ್ಬರಿಗೆ ಪಾಸಿಟಿವ್ ಬಂದ ಹಿನ್ನಲೆ ಎಲ್ಲರಿಗೂ ಕೋವಿಡ್ ಪರೀಕ್ಷೆ ಆಗಬೇಕಿದೆ.

ಸರ್ಕಾರ ಲಾಕ್‌ಡೌನ್ ಸಡಿಲಿಕೆ ನೀಡಿದೆ. ಎಂಜಿಆರ್ ಮಾರುಕಟ್ಟೆಯಲ್ಲಿ ಕೂಡ ವ್ಯಾಪಾರ ನಡೆಯುತ್ತಿದೆ. ಆದರೆ, ಈ ಮಾರುಕಟ್ಟೆಗೆ ಗ್ರಾಹಕರ ಜೊತೆಗೆ ಕೊರೊನಾ ವೈರಸ್‌ ಕೂಡ ಬಂದಿದೆ. ಮಾರುಕಟ್ಟೆಯಲ್ಲಿ ಇದ್ದ ಇಬ್ಬರಿಗೆ ಸೋಂಕು ತಗುಲಿರುವುದು ದೃಢವಾಗಿದೆ.

Breaking: ಒಂದೇ ದಿನ 5661 ಹೊಸ ಕೇಸ್ ಪತ್ತೆ, 140 ಮಂದಿ ಸಾವುBreaking: ಒಂದೇ ದಿನ 5661 ಹೊಸ ಕೇಸ್ ಪತ್ತೆ, 140 ಮಂದಿ ಸಾವು

ತಮಿಳುನಾಡಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ 11,760ಕ್ಕೆ ಏರಿಕೆ ಕಂಡಿದೆ. ಕೊರೊನಾ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಸ್ಯಾಂಪಲ್ ಟೆಸ್ಟ್‌ ಗಳನ್ನು ಹೆಚ್ಚು ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ ವಿಜಯ ಭಾಸ್ಕರ್ ತಿಳಿಸಿದ್ದಾರೆ.

150 Vegetable Vendors In MGR Market Chennai To Undergo Covid-19 Test

ಸೋಮವಾರ ತಮಿಳುನಾಡಿನಲ್ಲಿ ಮೂರು ಜನರು ಕೊರೊನಾದಿಂದ ಮೃತರಾದರು. ಒಟ್ಟು 81 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ ಒಂದೇ ದಿನ 536 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಇದರಲ್ಲಿ 364 ಕೇಸ್‌ಗಳು ಚೆನ್ನೈದಾಗಿದೆ. ಮಹಾರಾಷ್ಟ್ರದಿಂದ ಹಿಂತಿರುಗಿ ರಾಜ್ಯಕ್ಕೆ ಬರುತ್ತಿರುವವ ಸಂಖ್ಯೆ ಹೆಚ್ಚಾಗಿದ್ದು, ವೈರಸ್‌ ಹರಡುವಿಕೆ ಸಹ ವೇಗವಾಗಿದೆ.

ಕೊರೊನಾ ಕೇಸ್‌ಗಳು ಹೆಚ್ಚಾದರೂ, ತಮಿಳುನಾಡು ಸರ್ಕಾರ ವೈರಸ್‌ ತಪಾಸಣೆಗೆ ಒಳಗಾಗುವವರ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಡಿಎಂಕೆ ಪಕ್ಷದ ನಾಯಕ ಎಂ ಕೆ ಸ್ಟಾಲಿನ್ ಆರೋಪ ಮಾಡಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವರು ಕಡಿಮೆ ಟೆಸ್ಟ್ ಮಾಡಿದ್ದೇವೆ ಎನ್ನುವ ಆರೋಪ ಸುಳ್ಳು, ಸೋಮವಾರ ಒಂದೇ ನಿಜವಾದ 10,583 ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

English summary
Coronavirus in Tamil Nadu: 150 vegetable vendors in MGR market Chennai to undergo COVID-19 testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X