ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಪಟಾಕಿ ಕಾರ್ಖಾನೆಯ ಅಗ್ನಿ ಅವಘಡದಲ್ಲಿ 11 ಮಂದಿ ಸಾವು

|
Google Oneindia Kannada News

ಚೆನ್ನೈ, ಫೆಬ್ರವರಿ.12: ತಮಿಳುನಾಡು ವೆಂಬಕೊಟ್ಟಯ್ ನ ಕೊಟ್ಟೈಪಟ್ಟಿ ಸಮೀಪದ ಅಚಂಕುಲಂ ಗ್ರಾಮದ ಪಟಾಕಿ ತಯಾರಿಕೆ ಘಟಕದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ಅವಘಡದಲ್ಲಿ 11 ಹೆಚ್ಚು ಮಂದಿ ಮೃತಪಟ್ಟಿದ್ದು, 22 ಕಾರ್ಮಿಕರು ಗಾಯಗೊಂಡಿದ್ದಾರೆ.

ಪಟಾಕಿ ತಯಾರಿಕೆ ಘಟಕ ದುರಂತದಲ್ಲಿ ಮೃತಪಟ್ಟ 11 ಕಾರ್ಮಿಕರ ಪೈಕಿ 9 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಕಾರ್ಮಿಕರು ಸತ್ತೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂಪೂರ್ಣವಾಗಿ ಸುಟ್ಟಿರುವ ಮೃತದೇಹಗಳ ಗುರುತು ಪತ್ತೆ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವರ ಶಾಪ: ಉತ್ತರಾಖಂಡ್ ವಿಕೋಪಕ್ಕೆ ಕಾರಣವೇ ದೇವರ ಶಾಪ: ಉತ್ತರಾಖಂಡ್ ವಿಕೋಪಕ್ಕೆ ಕಾರಣವೇ "ದೇವಿ"ಯ ಕೋಪ!?

5 ಅಗ್ನಿಶಾಮಕ ದಳ ವಾಹನಗಳು ಪಟಾಕಿ ಕಾರ್ಖಾನೆ ಇರುವ ವಿರುಧುನಗರ್, ವೆಂಬಕೊಟ್ಟಯ್ ಮತ್ತು ಸತ್ತೂರ್ ಪ್ರದೇಶಗಳಿಗೆ ಧಾವಿಸಿದ್ದು, 30ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

11 killed In Explosion In Fireworks Factory In Tamil Nadu

ಪಟಾಕಿ ಕಾರ್ಖಾನೆಯಲ್ಲಿ 50 ಸಿಬ್ಬಂದಿ:

ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪಟಾಕಿ ತಯಾರಿಕೆ ಘಟಕದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎಂದು ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಗಣೇಶನ್ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಕಣ್ಣನ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿರ್ದಿಷ್ಟ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

English summary
11 killed In Explosion In Fireworks Factory In Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X