ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರದಲ್ಲಿದ್ದಿದ್ದರೆ 15 ನಿಮಿಷದಲ್ಲಿ ಚೀನಾವನ್ನು ಹೊರ ಹಾಕುತ್ತಿದ್ದೆವು: ರಾಹುಲ್ ಗಾಂಧಿ

|
Google Oneindia Kannada News

ಚಂಡೀಗಡ, ಅಕ್ಟೋಬರ್ 7: ಲಡಾಖ್ ಗಡಿ ಭಾಗದ ಎಲ್‌ಎಸಿಯಲ್ಲಿ ಚೀನಾ ದೇಶದ ಅತಿಕ್ರಮಣದ ಕುರಿತು ಆಡಳಿತಾರೂಢ ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ 15 ನಿಮಿಷದೊಳಗೇ ಚೀನಾವನ್ನು ಹೊರಗೆಸೆಯುತ್ತಿತ್ತು ಎಂದಿದ್ದಾರೆ.

ಖೇಟಿ ಬಚಾವೋ ಯಾತ್ರಾದ ಭಾಗವಾಗಿ ಹರಿಯಾಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಒಬ್ಬ ಹೇಡಿ ಎಂದು ಟೀಕಿಸಿದರು.

'ನಮ್ಮ ದೇಶದ ಭೂಮಿಯನ್ನು ಯಾರೂ ತೆಗೆದುಕೊಳ್ಳಲಾರರು ಎಂದು ಹೇಡಿ ಪ್ರಧಾನಿ ಹೇಳುತ್ತಾರೆ. ಇಂದು ಜಗತ್ತಿನಲ್ಲಿ ಬೇರೊಂದು ದೇಶವು ಆಕ್ರಮಿಸಿದ ಒಂದೇ ಒಂದು ದೇಶವಿದೆ. ಮತ್ತೊಂದು ದೇಶವು ಬಂದು 1,200 ಚದರ ಕಿಮೀ ಭೂಮಿಯನ್ನು ತೆಗೆದುಕೊಂಡು ಹೋಗುತ್ತಿದೆ ಎಂದರೆ ಅದು ಭಾರತ ಮಾತ್ರ.

ಪ್ರಧಾನಿ ಹೇಳುತ್ತಾರೆ ತಾವೊಬ್ಬ ದೇಶಭಕ್ತ ಎಂದು. ಆದರೆ ಇಡೀ ದೇಶಕ್ಕೆ ಗೊತ್ತು, ಚೀನಾದ ಪಡೆಗಳು ನಮ್ಮ ದೇಶದ ಗಡಿ ಒಳಗೆ ಇದೆ ಎಂದು. ಅವರು ಯಾವ ಸೀಮೆ ದೇಶಭಕ್ತ? ನಾವು ಅಧಿಕಾರದಲ್ಲಿ ಇದ್ದಿದ್ದರೆ ಚೀನಾ ಪಡೆಗಳನ್ನು 15 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಗಡಿಯಿಂದ 100 ಕಿ.ಮೀ. ದೂರದಲ್ಲಿ ಎಸೆದುಬಿಡುತ್ತಿದ್ದೆವು' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮುಂದೆ ಓದಿ.

ಯುಪಿಎ ಇದ್ದಾಗ ಧೈರ್ಯ ಇರಲಿಲ್ಲ

ಯುಪಿಎ ಇದ್ದಾಗ ಧೈರ್ಯ ಇರಲಿಲ್ಲ

'ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನಮ್ಮ ದೇಶದ ಒಳಗೆ ಕಾಲಿರಿಸಲು ಚೀನಾಕ್ಕೆ ಸಾಕಷ್ಟು ಶಕ್ತಿ ಇರಲಿಲ್ಲ. ಇಡೀ ದೇಶದಲ್ಲಿ ಯಾವುದಾದರೂ ದೇಶದ ಭೂಮಿಯನ್ನು ಬೇರೆ ದೇಶ ಒಳಗೆ ಹಾಕಿಕೊಂಡಿದೆ ಎಂದರೆ ಅದು ಭಾರತ ಮಾತ್ರ. ಆದರೆ ಅವರು ತಮ್ಮನ್ನು ತಾವು ದೇಶಭಕ್ತರು ಎಂದು ಕರೆದುಕೊಳ್ಳುತ್ತಿದ್ದಾರೆ' ಎಂಬುದಾಗಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.

100 ಕಿ.ಮೀ. ದೂರ ಹೊರಹಾಕುತ್ತಿತ್ತು

100 ಕಿ.ಮೀ. ದೂರ ಹೊರಹಾಕುತ್ತಿತ್ತು

'ಚೀನಾವು ನಮ್ಮ ದೇಶದ ಭೂಮಿಯೊಳಗೆ ನಾಲ್ಕು ತಿಂಗಳ ಹಿಂದೆಯೇ ಬಂದಿದೆ. ಅವರನ್ನು ಹೊರಹಾಕಲು ಎಷ್ಟು ಸಮಯ ಬೇಕಾಗುತ್ತದೆ? ಯುಪಿಎ ಸರ್ಕಾರವು ರಚನೆಯಾಗದೆ ಇರುವ ಸಮಯದವರೆಗೂ ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಮುಂದುವರಿಸುತ್ತದೆ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೊಡನೆ ಅವರನ್ನು ಹೊರ ಹಾಕುತ್ತೇವೆ. ನಮ್ಮ ಸೇನೆಯು ಚೀನಾವನ್ನು 100 ಕಿ.ಮೀ. ದೂರ ಹಾಕಿರುತ್ತಿತ್ತು' ಎಂದಿದ್ದಾರೆ.

ಖಾಲಿ ಸುರಂಗದಲ್ಲಿ ಕೈಬೀಸುತ್ತಾರೆ

ಖಾಲಿ ಸುರಂಗದಲ್ಲಿ ಕೈಬೀಸುತ್ತಾರೆ

'ಪ್ರಧಾನಿಗೆ ನಮ್ಮ ದೇಶದ ಶಕ್ತಿಯ ಬಗ್ಗೆ ಅರಿವೇ ಇಲ್ಲ. ಇದು ರೈತರು ಮತ್ತು ಕಾರ್ಮಿಕರ ದೇಶ. ಆದರೆ ಪ್ರಧಾನಿ ತಮ್ಮ ವರ್ಚಸ್ಸಿನ ಬಗ್ಗೆ ಮಾತ್ರ ಆಲೋಚಿಸುತ್ತಿದ್ದಾರೆ. ಅವರು ಫೋಟೊಗಳನ್ನು ಕ್ಲಿಕ್ ಮಾಡುತ್ತಿದ್ದಾರೆ ಮತ್ತು ಖಾಲಿ ಸುರಂಗದಲ್ಲಿ ಕೈಬೀಸುತ್ತಾ ನಡೆದಿದ್ದನ್ನು ನೀವು ನೋಡಿರಬಹುದು (ಅಟಲ್ ಸುರಂಗದ ವೇಳೆ ನಡೆದಿದ್ದು) ಎಂದು ವ್ಯಂಗ್ಯವಾಡಿದ್ದಾರೆ.

ಐಷಾರಾಮಿ ವಿಮಾನ ಖರೀದಿ

ಐಷಾರಾಮಿ ವಿಮಾನ ಖರೀದಿ

ಪ್ರಧಾನಿ ಮತ್ತು ರಾಷ್ಟ್ರಪತಿಗೆ ಪ್ರತ್ಯೇಕವಾಗಿ ತಯಾರಿಸಿದ ಎರಡು ಐಷಾರಾಮಿ ಬೋಯಿಂಗ್ ವಿಮಾನಗಳ ಖರೀದಿಗೆ ಕೋಟ್ಯಂತರ ರೂಪಾಯಿ ದುಂದು ವೆಚ್ಚ ಮಾಡಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಈ ವಿಮಾನಗಳು ಮೆತ್ತನೆಯ ಆಸನ ಮಾತ್ರವಲ್ಲ, ಅವರ ಅನುಕೂಲಕ್ಕಾಗಿ ಅನೇಕ ಐಷಾರಾಮಿ ಹಾಸಿಗೆಗಳನ್ನು ಸಹ ಹೊಂದಿದೆ ಎಂದು ಟೀಕಿಸಿದ್ದಾರೆ.

ಯೋಧರು ಚಳಿಯಲ್ಲಿ ನಡುಗುತ್ತಿದ್ದಾರೆ

ಯೋಧರು ಚಳಿಯಲ್ಲಿ ನಡುಗುತ್ತಿದ್ದಾರೆ

ಚೀನಾವು ನಮ್ಮ ಗಡಿಯಲ್ಲಿ ಇರುವಾಗ ಮತ್ತು ಸರ್ಕಾರವು ಪೂರ್ವ ಲಡಾಖ್ ಗಡಿಗೆ ಸರ್ಕಾರವು ಶಸ್ತ್ರಾಸ್ತ್ರಗಳು, ಮದ್ದುಗುಂಡು, ತೈಲ, ಆಹಾರ ಹಾಗೂ ಚಳಿಗಾಲಕ್ಕೆ ಅಗತ್ಯವಾದ ಸರಕುಗಳನ್ನು ಪೂರೈಸುತ್ತಿರುವಾಗ ಇಷ್ಟು ದೊಡ್ಡ ಮೊತ್ತದ ಹಣವನ್ನು ವೆಚ್ಚಮಾಡುವುದರ ಅಗತ್ಯವೇನಿತ್ತು? ಪ್ರಧಾನಿ ಏರ್ ಇಂಡಿಯಾ ಒನ್‌ನ ಈ ವಿಮಾನ ಏಕೆ ಬಯಸಿದ್ದರೆಂದರೆ, ಅವರ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರ ಬಳಿಯೂ ಇಂತಹ ವಿಮಾನವಿದೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ 8,000 ಕೋಟಿ ರೂ.ದ ಎರಡು ವಿಮಾನಗಳನ್ನು ಖರೀದಿಸಿದ್ದಾರೆ. ಇನ್ನೊಂದೆಡೆ ಚೀನಾ ನಮ್ಮ ಗಡಿಯಲ್ಲಿದೆ ಮತ್ತು ನಮ್ಮ ಭದ್ರತಾ ಪಡೆಗಳು ನಮ್ಮ ರಕ್ಷಿಸಲು ಚಳಿಯಲ್ಲಿ ನಡುಗುತ್ತಿದ್ದಾರೆ. ಇವರು ಆರಾಮಾಗಿ ವಿಮಾನದಲ್ಲಿ ಓಡಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

English summary
Congress leader Rahul Gandhi said, if UPA was in power we would have thrown out China within 15 minutes from our territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X