ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶಕ್ಕೂ ಮುನ್ನವೇ ರಾಜೀನಾಮೆಯ ಮಾತನಾಡಿದ ಪಂಜಾಬ್ ಸಿಎಂ

|
Google Oneindia Kannada News

ಚಂಡೀಗಢ, ಮೇ 17: ಪಂಜಾಬ್ ರಾಜ್ಯದ ಹದಿಮೂರು ಲೋಕಸಭಾ ಕ್ಷೇತ್ರಗಳ ಮತದಾನ, ಕೊನೆಯ ಹಂತದಲ್ಲಿ (ಮೇ 19) ನಡೆಯಲಿದೆ. ಮತದಾನಕ್ಕೂ ಮೊದಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜೀನಾಮೆಯ ಮಾತನಾಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪಂಜಾಬ್ ರಾಜ್ಯದಲ್ಲಿ ಪಕ್ಷ ಯಾವರೀತಿ ಪ್ರದರ್ಶನ ತೋರಲಿದೆ ಇದರ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ಒಂದು ವೇಳೆ, ಪಕ್ಷ ಕಳಪೆ ಸಾಧನೆಯನ್ನು ತೋರಿದರೆ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿಯೂ ಶುರುವಾಯ್ತು ಸಿಧು ರಂಪಾಟ: ಸಿಎಂ ವಿರುದ್ಧ ಗರಂಕಾಂಗ್ರೆಸ್‌ನಲ್ಲಿಯೂ ಶುರುವಾಯ್ತು ಸಿಧು ರಂಪಾಟ: ಸಿಎಂ ವಿರುದ್ಧ ಗರಂ

ಜೊತೆಗೆ, ಸರಕಾರದ ಎಲ್ಲಾ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಪಕ್ಷದ ಸಾಧನೆಯ ಜವಾಬ್ದಾರಿಯನ್ನು ವಹಿಸಿಕೊಳ್ಲಬೇಕಾಗುತ್ತದೆ ಎನ್ನುವ ಮಾತನ್ನೂ ಹೇಳಲು ಅಮರಿಂದರ್ ಸಿಂಗ್ ಮರೆಯಲಿಲ್ಲ.

Will resign if Congress is wiped out from Punjab, says CM Amarinder Singh

ಪಕ್ಷದ ಸೋಲು/ಗೆಲುವಿನ ಜವಾಬ್ದಾರಿಯನ್ನು ಎಲ್ಲರೂ ವಹಿಸಿಕೊಳ್ಳಬೇಕೆಂದು ಹೈಕಮಾಂಡ್ ಹೇಳಿದೆ. ಒಂದು ವೇಳೆ ಪಕ್ಷ ದಯನೀಯವಾಗಿ ಸೋತರೆ, ನಾನು ರಾಜೀನಾಮೆ ನೀಡುತ್ತೇನೆ ಎಂದಿರುವ ಪಂಜಾಬ್ ಸಿಎಂ, ಆದರೆ ಎಲ್ಲಾ ಹದಿಮೂರು ಕ್ಷೇತ್ರಗಳನ್ನು ಗೆದ್ದು ನಮ್ಮ ಪಕ್ಷ ಕ್ಲೀನ್ ಸ್ವೀಪ್ ಮಾಡಲಿದೆ ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.

ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ರಾಹುಲ್ ಗಾಂಧಿ: ವೈರಲ್ ವಿಡಿಯೋ ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ರಾಹುಲ್ ಗಾಂಧಿ: ವೈರಲ್ ವಿಡಿಯೋ

ಅಕಾಲಿದಳ - ಬಿಜೆಪಿಯ ದಶಕಗಳ ಆಡಳಿತದ ನಂತರ ಕಾಂಗ್ರೆಸ್, 2017ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 117ರಲ್ಲಿ 77ಕ್ಷೇತ್ರವನ್ನು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೇರಿತ್ತು.

ಚುನಾವಣೆಗೆ ಎರಡು ದಿನದ ಮುನ್ನ, ರಾಜ್ಯದ ಪ್ರಭಾವಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ದು, ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.

English summary
Will resign if Congress is wiped out from Punjab, says CM Amarinder Singh. He said, he will take responsibility and resign if the Congress does not perform well in the 2019 Lok Sabha elections in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X