ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ದೇಶ ಸ್ವಾತಂತ್ರ್ಯಕ್ಕೆ ಹೋರಾಡುತಿತ್ತು, RSS ಬ್ರಿಟಿಷರ ಚಂಚಾಗಿರಿ ಮಾಡುತ್ತಿತ್ತು

|
Google Oneindia Kannada News

ಭಟಿಂಡಾ (ಪಂಜಾಬ್), ಮೇ 14 (ಎಎನ್ಐ) : ಪೂರ್ವ ಉತ್ತರಪ್ರದೇಶದ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ಗಾಂಧಿ, ಪಂಜಾಬ್ ನಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಾ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ದ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದ ಪ್ರಿಯಾಂಕಾ, ದೇಶದಲ್ಲಿ ಕಳೆದ ಏಳು ದಶಕಗಳಲ್ಲಿ ಏನೂ ಅಭಿವೃದ್ದಿ ಕೆಲಸ ನಡೆದಿಲ್ಲ ಎಂದು ಪ್ರಧಾನಮಂತ್ರಿಯವರು ದೇಶದೆಲ್ಲಡೆ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿಯ ಚುನಾವಣೆ ಬಿಜೆಪಿಗೆ ಸರಿಯಾದ ಪಾಠವನ್ನು ಕಲಿಸಲಿದೆ ಎಂದಿದ್ದಾರೆ.

ನೀವು ಪ್ರೀತಿ ಬಯಸುತ್ತೀರಿ, ನಿಮ್ಮವರು ಮೋದಿಗೆ 'ನೇಣು' ಬಯಸುತ್ತಿದ್ದಾರೆ!ನೀವು ಪ್ರೀತಿ ಬಯಸುತ್ತೀರಿ, ನಿಮ್ಮವರು ಮೋದಿಗೆ 'ನೇಣು' ಬಯಸುತ್ತಿದ್ದಾರೆ!

ಪಂಜಾಬ್ ಸೇರಿದಂತೆ, ಇಡೀ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದರೆ, RSS ಬ್ರಿಟಿಷರ ಚಂಚಾಗಿರಿಯಲ್ಲಿ ತೊಡಗಿತ್ತು ಎಂದು ಟೀಕಿಸಿರುವ ಪ್ರಿಯಾಂಕಾ, ದೇಶಕ್ಕಾಗಿ ಅವರ ಪರಿಶ್ರಮ ಶೂನ್ಯ ಎಂದಿದ್ದಾರೆ.

When the entire Punjab was fighting for countrys independence, RSS people were doing chamchagiri

ವಾರಣಾಸಿ ಸೇರಿದಂತೆ ಕೊನೆಯ ಹಂತದಲ್ಲಿ ಪೂರ್ವ ಉತ್ತರಪ್ರದೇಶದ ಹಲವು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದರೂ, ಪ್ರಿಯಾಂಕಾ ಅಲ್ಲಿ ಪ್ರಚಾರ ನಡೆಸದೇ, ಪಂಜಾಬ್ ನಲ್ಲಿನ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಮಂಗಳವಾರ, ಪ್ರಿಯಾಂಕಾ ಪಕ್ಷದ ಪ್ರಚಾರ ಸಭೆಗೆ ಹೋಗುತ್ತಿದ್ದ ವೇಳೆ, ಮೋದಿಪರ ಘೋಷಣೆ ಎದುರಾದಾಗ, ಕಾರಿನಿಂದ ಇಳಿದು, ಅವರಿಗೆ ಗುಡ್ ಲಕ್ ಹೇಳಿದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಮೇ 19ರ ಕೊನೆಯ ಹಂತದ ಚುನಾವಣೆಯಲ್ಲಿ ವಾರಣಾಸಿ, ಗೋರಖಪುರ ಸೇರಿದಂತೆ, ಪಂಜಾಬಿನ ಹದಿಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

English summary
When the entire Punjab and country was fighting for country's independence, RSS people were doing 'chamchagiri' with British, Priyanka Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X