ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಎಎಪಿ ಗೆದ್ದಾಗ ವಿಪಕ್ಷ ನಾಯಕರುಗಳು ಮಾಡಿದ್ದೇನು?

|
Google Oneindia Kannada News

ಚಂಡೀಗಢ, ಮಾರ್ಚ್ 12: ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಗೆಲುವನ್ನು ಸಾಧಿಸಿದೆ. ಆದರೆ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಎಎಪಿಯ ಈ ಸಾಧನೆಗೆ ಅಭಿನಂದಿಸಲು ಕೂಡಾ ಹಿಂಜರಿಯುತ್ತಿದ್ದಾರೆ.

ಎಎಪಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ 48 ಗಂಟೆಗಳ ಕಾಲ ಕಳೆದಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಂತಹ ಪ್ರಬಲ ರಾಜ್ಯ ಪಕ್ಷಗಳು ಹಾಗೂ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದೊಂದಿಗೆ ಎಎಪಿ ಪ್ರಬಲವಾಗಿ ಹೋರಾಡಿದೆ. ಆದರೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮತ್ತು ಇತರರು ಸೇರಿದಂತೆ ಪ್ರತಿಪಕ್ಷ ನಾಯಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಅಭಿನಂದನೆ ಕೂಡಾ ತಿಳಿಸಿಲ್ಲ.

 ಪಂಜಾಬ್‌ ನೂತನ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ ಪಂಜಾಬ್‌ ನೂತನ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ

ಈ ನಡುವೆ ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಯ ಪ್ರಬಲ ವ್ಯಕ್ತಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೇಜ್ರಿವಾಲ್‌ಗೆ ಅಭಿನಂದನಾ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಪಂಜಾಬ್‌ನಲ್ಲಿ ಹೊಸ ಪಕ್ಷವೆಂದು ಪರಿಗಣಿಸಲಾದ ಎಎಪಿ ತನ್ನ ವಿಜಯೋತ್ಸವವನ್ನು ಆಚರಿಸುತ್ತಿರುವಾಗ ಯಾವುದೇ ಪಕ್ಷಗಳು ಈ ಬಗ್ಗೆ ಮಾತನಾಡಿಲ್ಲ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆದ್ದಾಗ ಹಲವಾರು ಪಕ್ಷಗಳು ಅವರಿಗೆ ಅಭಿನಂದನೆಯನ್ನು ತಿಳಿಸಿದ್ದರು. ಆದರೆ ಈಗ ವಿರೋಧ ಪಕ್ಷಗಳು ಏನು ಮಾಡುತ್ತಿದೆ ಎಂಬುವುದೇ ಪ್ರಶ್ನೆಯಂತಾಗಿದೆ. ಹಾಗಾದರೆ ಎಎಪಿ ಪಂಜಾಬ್‌ನಲ್ಲಿ ಗೆಲುವು ಸಾಧಿಸಿದಾಗ ವಿರೋಧ ಪಕ್ಷದ ನಾಯಕರುಗಳು ಮಾಡಿದ್ದೇನು ಎಂಬ ಬಗ್ಗೆ ತಿಳಿಯೋಣ, ಮುಂದೆ ಓದಿ...

ಕಾಮೆಡಿಯನ್‌ ಮಾನ್‌ ವಿರೋಧಿಗಳ ವಿರುದ್ಧ ಜೋಕ್‌ಗಳ ಸುರಿಮಳೆ!ಕಾಮೆಡಿಯನ್‌ ಮಾನ್‌ ವಿರೋಧಿಗಳ ವಿರುದ್ಧ ಜೋಕ್‌ಗಳ ಸುರಿಮಳೆ!

 ಮಮತಾ ಬ್ಯಾನರ್ಜಿ ಮಾಡಿದ್ದು ಏನು?

ಮಮತಾ ಬ್ಯಾನರ್ಜಿ ಮಾಡಿದ್ದು ಏನು?

ಏಕಕಾಲಕ್ಕೆ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಸ್ಥಾನವನ್ನು ಪಡೆಯದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವನ್ನು ತಿರಸ್ಕರಿಸಿದೆ. ಯುಪಿಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರ ಮಾಡಿದ ಬ್ಯಾನರ್ಜಿ, ರಾಜ್ಯದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು ಜನರ ಆದೇಶವಲ್ಲ, ಅದು ಚುನಾವಣಾ ಯಂತ್ರಗಳು ಮತ್ತು ಕೇಂದ್ರ ಪಡೆಗಳು ಮತ್ತು ಏಜೆನ್ಸಿಗಳ ಸಹಾಯದಿಂದ ಬಿಜೆಪಿ ಮಾಡಿದ ಕಾರ್ಯ ಎಂದು ಹೇಳಿದೆ. ಆದರೆ ಎಎಪಿ ಬಗ್ಗೆ ಆಗಲಿ, ಅರವಿಂದ್ ಕೇಜ್ರಿವಾಲ್ ಬಗ್ಗೆ ಆಗಲಿ, ಪಂಜಾಬ್‌ನಲ್ಲಿ ಎಎಪಿ ಗೆಲುವಿನ ಬಗ್ಗೆ ಆಗಲಿ ಯಾವುದೇ ಉಲ್ಲೇಖವನ್ನು ಕೂಡಾ ಮಾಡಿಲ್ಲ.

 ಕೆಸಿ ಚಂದ್ರಶೇಖರ್‌ ರಾವ್‌ ಪ್ರತಿಕ್ರಿಯೆ ಏನು?

ಕೆಸಿ ಚಂದ್ರಶೇಖರ್‌ ರಾವ್‌ ಪ್ರತಿಕ್ರಿಯೆ ಏನು?

ಟಿಆರ್‌ಎಸ್ ನಾಯಕ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೂಡ ಕೆ ಸಿ ಚಂದ್ರಶೇಖರ್‌ ರಾವ್‌ ಗೆಲುವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಆ ದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ವಿಚಾರದಲ್ಲಿ ಗಮನಾರ್ಹವಾಗಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಉರುಳಿಸಲು ತೃತೀಯ ರಂಗ ನಿರ್ಮಾಣದ ಬಗ್ಗೆ ಮೊದಲು ಮಾತನಾಡಿದ್ದೆ ಟಿಆರ್‌ಎಸ್ ನಾಯಕ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೂಡ ಕೆ ಸಿ ಚಂದ್ರಶೇಖರ್‌ ರಾವ್‌ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ.

 ಪಿಣರಾಯಿ ವಿಜಯನ್‌ ಮಾಡಿದ್ದು ಏನು?

ಪಿಣರಾಯಿ ವಿಜಯನ್‌ ಮಾಡಿದ್ದು ಏನು?

ಕಳೆದ ವರ್ಷ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಹಾಗೂ ಎಲ್ಲಾ ವಿರೋಧ ಪಕ್ಷಗಳ ನಾಯಕರಿಂದ ಬೆಂಬಲವನ್ನು ಗಳಿಸಿದ, ಅಭಿನಂದನೆಯನ್ನು ಪಡೆದ ಎಡಪಂಥೀಯ ಅನುಭವಿ ನಾಯಕ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡಾ ಪಂಜಾಬ್‌ನಲ್ಲಿ ಎಎಪಿ ಗೆಲುವಿನ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಬದಲಾಗಿ ಕೇರಳದಲ್ಲಿ ಸೇತುವೆ ಉದ್ಘಾಟನೆಯಾಗುತ್ತಿರುವ ಬಗ್ಗೆ ವಿಜಯನ್ ಟ್ವೀಟ್ ಮಾಡಿದ್ದಾರೆ.

 ಎಂಕೆ ಸ್ಟಾಲಿನ್ ಏನು ಮಾಡಿದ್ದು?

ಎಂಕೆ ಸ್ಟಾಲಿನ್ ಏನು ಮಾಡಿದ್ದು?

ಇತರೆ ವಿಪಕ್ಷ ನಾಯಕರಂತೆಯೇ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ, ಚೆನ್ನೈನಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ಮೂರು ದಿನಗಳ ಸಮ್ಮೇಳನವನ್ನು ಎಂಕೆ ಸ್ಟಾಲಿನ್ ಆ ದಿನದಂದು ಉದ್ಘಾಟನೆ ಮಾಡಿದ್ದಾರೆ.

 ಹಾಗಾದರೆ ಎಎಪಿಗೆ ಅಭಿನಂದನೆ ಸಲ್ಲಿಸಿದ್ದು ಯಾರು?

ಹಾಗಾದರೆ ಎಎಪಿಗೆ ಅಭಿನಂದನೆ ಸಲ್ಲಿಸಿದ್ದು ಯಾರು?

ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದಾಗ ಈ ನಾಯಕರ ಮೌನವಾಗಿರಲಿಲ್ಲ. ಬದಲಾಗಿ ಅಭಿನಂದನೆಯ ಸುರಿಮಳೆ ಸುರಿದಿದ್ದರು. ಕೇಜ್ರಿವಾಲ್ ಸೇರಿದಂತೆ ಈ ಎಲ್ಲಾ ನಾಯಕರು ಬ್ಯಾನರ್ಜಿ ಅವರ ಗೆಲುವಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ನಡುವೆ ಎಎಪಿಗೆ ಬೆಂಬಲ ನೀಡಿದ ಏಕೈಕ ವಿರೋಧ ಪಕ್ಷದ ನಾಯಕ ಎನ್‌ಸಿಪಿಯ ಶರದ್ ಪವಾರ್ ಅವರು ಮಾತ್ರ. ಎಎಪಿಯನ್ನು ರಾಷ್ಟ್ರೀಯ ಪಕ್ಷ ಎಂದು ಕರೆದಿರುವ ನಾಯಕ,"ಪಂಜಾಬ್ ದೆಹಲಿಗೆ ಹತ್ತಿರದ ರಾಜ್ಯವಾಗಿದೆ. ಆದ್ದರಿಂದ ದೆಹಲಿಯ ಕೆಲಸದ ಪರಿಣಾಮ ಪಂಜಾಬ್‌ನಲ್ಲಿಯೂ ಕಂಡುಬಂದಿದೆ," ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ ಔಪಚಾರಿಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
What Major Oppn Leaders Were Doing When AAP Won Punjab, Explained Here in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X