ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ನೀರು ಹರಿಯಲು ಬಿಡುವುದಿಲ್ಲ ಎಂದ ಪ್ರಧಾನಿ ಮೋದಿ

|
Google Oneindia Kannada News

Recommended Video

Narendra Modi said that, India would not allow it's water to flow to Pakistan

ಚರ್ಕಿ ದಾದ್ರಿ (ಹರ್ಯಾಣ), ಅಕ್ಟೋಬರ್ 15: "ಭಾರತ ಮತ್ತು ಹರ್ಯಾಣದ ರೈತರಿಗೆ ಸೇರಿದ ನೀರು ಎಪ್ಪತ್ತು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಹರಿದಿದೆ. ಮೋದಿ ಈ ನೀರನ್ನು ನಿಲ್ಲಿಸಲಿದ್ದು (ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು), ನಿಮ್ಮ ಮನೆಗಳಿಗೆ ತರಲಾಗುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿದರು.

ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಮೇಲೆ ಹರ್ಯಾಣ ಹಾಗೂ ರಾಜಸ್ಥಾನ ರೈತರಿಗೆ ಹಕ್ಕಿದೆ. ನೀರನ್ನು ಈ ಹಿಂದಿನ ಸರ್ಕಾರಗಳು ನಿಲ್ಲಿಸಿರಲಿಲ್ಲ. "ನಿಮ್ಮ ಯುದ್ಧವನ್ನು ಮೋದಿ ಮಾಡಲಿರುವುದಾಗಿ" ಅವರು ಹೇಳಿದರು.

ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!

ಈಚೆಗೆ ಮಹಾಬಲಿಪುರಂಗೆ ಅನೌಪಚಾರಿಕ ಭೇಟಿ ನೀಡಿದ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ತಾವು ದಂಗಲ್ ಸಿನಿಮಾ ನೋಡಿದ್ದಾಗಿ ಹೇಳಿದರು. ಅದರಲ್ಲಿ ಭಾರತದ ಹೆಣ್ಣುಮಕ್ಕಳ ಅದ್ಭುತ ಪ್ರದರ್ಶನವನ್ನು ಚೆನ್ನಾಗಿ ಬಿಂಬಿಸಲಾಗಿದೆ ಎಂದು ಸಹ ಹೇಳಿಕೊಂಡಿದ್ದಾಗಿ ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.

We Will Not Allow Water To Flow To Pakistan, Says PM Modi

ಅಮೀರ್ ಖಾನ್ ಸಿನಿಮಾ ದಂಗಲ್ ನಲ್ಲಿ ಬರುವ ಬಬಿತಾ ಪೋಗಟ್ ಪಾತ್ರ ನಿಜ ಜೀವನದ ವ್ಯಕ್ತಿ ಆಗಿದ್ದು, ಅಕ್ಟೋಬರ್ ಇಪ್ಪತ್ತೊಂದನೇ ತಾರೀಕು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ದಾದ್ರಿಯಿಂದ ಸ್ಪರ್ಧಿಸುತ್ತಿದ್ದಾರೆ.

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಹೊಗಳಿದ ಮೋದಿ, ಹರ್ಯಾಣ ಹಳ್ಳಿಗಳ ಬೆಂಬಲ ಇಲ್ಲದೆ ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನ ಯಶಸ್ವಿ ಆಗಲು ಸಾಧ್ಯವಿರಲಿಲ್ಲ ಎಂದರು.

ಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕುಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕು

ನಿಮಗೆ (ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ) ತಾಕತ್ತಿದ್ದರೆ ಮತ್ತೆ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತರುವುದಾಗಿ ಹೇಳಿ ನೋಡೋಣ ಎಂದು ಸವಾಲು ಹಾಕಿದರು.

ಚುನಾವಣೆ ಸಭೆಗಾಗಿ ನಾನು ಹರ್ಯಾಣಕ್ಕೆ ಬಂದಿಲ್ಲ. ಬಿಜೆಪಿ ಪ್ರಚಾರಕ್ಕಾಗಿ ನಾನು ಹರ್ಯಾಣಕ್ಕೆ ಬಂದಿಲ್ಲ. ಹರ್ಯಾಣದಲ್ಲಿ ನಾನು ಮತ ಕೇಳಲ್ಲ. ಹರ್ಯಾಣವೇ ನನ್ನನ್ನು ಕರೆಯಿತು. ಇಲ್ಲಿಗೆ ಬರುವುದನ್ನು ನನ್ನಿಂದ ತಡೆಯಲು ಆಗಲಿಲ್ಲ. ನೀವು ನನಗೆ ಸಾಕಷ್ಟು ಪ್ರೀತಿ ನೀಡಿದ್ದೀರಿ ಎಂದು ಹೇಳಿದರು.

ಅಕ್ಟೋಬರ್ ಇಪ್ಪತ್ತೊಂದನೇ ತಾರೀಕು ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇಪ್ಪತ್ನಾಲ್ಕನೇ ತಾರೀಕು ಫಲಿತಾಂಶ ಹೊರಬೀಳಲಿದೆ.

English summary
Prime Minister Narendra Modi on Tuesday said in Haryana, India would not allow it's water to flow to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X