ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾಲಾ ವಾಯುನೆಲೆಗೆ ಸುರಕ್ಷಿತವಾಗಿ ಬಂದಿಳಿದ ರಫೇಲ್: ಸೇನೆಯಿಂದ ವಾಟರ್ ಸೆಲ್ಯೂಟ್

|
Google Oneindia Kannada News

ಚಂಡೀಗಡ, ಜುಲೈ 29: ಫ್ರಾನ್ಸ್‌ನಿಂದ ಸುದೀರ್ಘ ಪ್ರಯಾಣ ಮುಗಿಸಿದ ಬಹು ನಿರೀಕ್ಷಿತ ರಫೇಲ್ ಯುದ್ಧ ವಿಮಾನಗಳು ಹರಿಯಾಣದ ಅಂಬಾಲಾ ವಾಯುನೆಲೆಗೆ ಸುರಕ್ಷಿತವಾಗಿ ಬಂದಿಳಿದಿದ್ದು, ವಾಯುನೆಲೆಯಲ್ಲಿ ಟ್ಯಾಂಕರ್‌ಗಳ ಮೂಲಕ ವಾಯು ಸೇನೆಯು ವಾಟರ್ ಸೆಲ್ಯೂಟ್ ಮೂಲಕ ಸ್ವಾಗತಿಸಿದೆ.

Tweet

ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್ ಯುದ್ಧ ವಿಮಾನಗಳು ಸೋಮವಾರ ಫ್ರಾನ್ಸ್‌ನ ಮೆರಿಗ್ನಾಕ್‌ನಿಂದ ಪ್ರಯಾಣ ಆರಂಭಿಸಿ 7,364 ಕಿ.ಮೀ ದೂರವನ್ನು ಕ್ರಮಿಸಿದ ಬಳಿಕ ಭಾರತದ ವಾಯುನೆಲೆಯನ್ನು ತಲುಪಿದೆ. ಒಪ್ಪಂದದ ಪ್ರಕಾರ ಮೊದಲ ಭಾಗವಾಗಿ ಫ್ರಾನ್ಸ್‌ನಿಂದ ಐದು ರಫೇಲ್‌ ವಿಮಾನಗಳು ಭಾರತದ ವಾಯುಸೇನೆಯ ಬಲ ಹೆಚ್ಚಿಸಿವೆ.

ಪೂರ್ವ ಲಾಡಖ್‌ನಿಂದ ಸಂಪೂರ್ಣ ಸೇನೆ ಹಿಂತೆಗೆತಕ್ಕೆ ಭಾರತ-ಚೀನಾ ಸಮ್ಮತಿಪೂರ್ವ ಲಾಡಖ್‌ನಿಂದ ಸಂಪೂರ್ಣ ಸೇನೆ ಹಿಂತೆಗೆತಕ್ಕೆ ಭಾರತ-ಚೀನಾ ಸಮ್ಮತಿ

ಭಾರತದ ವಾಯು ಪ್ರದೇಶವನ್ನು ಪ್ರವೇಶಿಸಿದ ಬಳಿಕ ಐದು ರಫೇಲ್ ಯುದ್ಧ ವಿಮಾನಗಳಿಗೆ ಎರಡು ಸುಕೋಯ್ 30 MKIs ಯುದ್ಧ ವಿಮಾನಗಳು ಆಗಸದಲ್ಲಿ ರಕ್ಷಣೆ ನೀಡಿದವು. ನಂತರ ಪೂರ್ಣ ಪ್ರಯಾಣದ ಬಳಿಕ ಅಂಬಾಲ ವಾಯುನೆಲೆಯನ್ನು ತಲುಪಿದವು. ಈ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಟ್ವಿಟರ್‌ನಲ್ಲಿ ವೀಡಿಯೋ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದರು.

Water Salute To Be Given For Rafale Jets at Ambala Airbase

ಭಾರತವು ಸೆಪ್ಟೆಂಬರ್ 2016 ರಲ್ಲಿ ಫ್ರಾನ್ಸ್‌ನೊಂದಿಗೆ 36 ರಫೇಲ್ ಫೈಟರ್ ಜೆಟ್‌ಗಳಿಗೆ ಸಹಿ ಹಾಕಿತ್ತು. ಈ ಒಪ್ಪಂದದ ಮೌಲ್ಯ ಸುಮಾರು 59,000 ಕೋಟಿಗಳು ಆಗಿದ್ದು, ಒಪ್ಪಂದದ ಪ್ರಕಾರ ಪ್ರತಿ ವರ್ಷ 12 ವಿಮಾನಗಳನ್ನು ಭಾರತಕ್ಕೆ ತಲುಪಿಸಬೇಕಿದೆ. ಮೊದಲ ಭಾಗವಾಗಿ ಇದೀಗ ಐದು ವಿಮಾನಗಳು ಭಾರತದ ವಾಯಸೇನೆಯನ್ನು ಸೇರಿಕೊಂಡಿವೆ.

English summary
After Successfuly landed in the ambala airbase, Water salute given to the five Rafale fighter aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X