ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತ ಯುವಕನ ಬಟ್ಟೆ ಬಿಚ್ಚಿ ಹಲ್ಲೆ, ವಿಡಿಯೋ ಮಾಡಿದ್ದ ಇಬ್ಬರ ಬಂಧನ

|
Google Oneindia Kannada News

ಹರಿಯಾಣ, ಜೂನ್ 26: ಸೋನಿಪತ್ ಜಿಲ್ಲೆಯ ಬಜನ ಕಲ್ಯಾಣ್ ಹಳ್ಳಿಯ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದ ಇಬ್ಬರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ತಿಂಗಳ ಹಿಂದೆ ಹಲ್ಲೆ ನಡೆದಿತ್ತು. ಕೆಲವು ವರದಿಗಳ ಪ್ರಕಾರ: ಮೇಲ್ಜಾತಿಯವರು ಬಳಸುವ ನೀರನ್ನು ಈತ ತನ್ನ ರಾಸುಗಳನ್ನು ತೊಳೆಯುವುದಕ್ಕೆ ಉಪಯೋಗಿಸಿದ್ದರಿಂದ ಥಳಿಸಲಾಗಿದೆ.

ಆದರೆ, ಪೊಲೀಸರ ಈ ಮಾತನ್ನು ನಿರಾಕರಿಸಿದ್ದಾರೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ಕರೆದಾಗ, ಆ ಯುವಕ ನಿರಾಕರಿಸಿದ್ದಾನೆ. ಆ ಕಾರಣಕ್ಕೆ ಹಳ್ಳಿಯ ಮೋಹಿತ್ ಹಾಗೂ ಜಿತೇಂದ್ರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ದೂರು ದಾಖಲಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಅಂದ ಹಾಗೆ ದಲಿತ ಯುವಕನ ಮೇಲಿನ ಹಲ್ಲೆ ವಿಡಿಯೋ ಹದಿನೈದು ದಿನದ ಹಿಂದೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ದಲಿತನ ಬೆತ್ತಲೆ ಮೆರವಣಿಗೆ ಪ್ರಕರಣ: ಇಬ್ಬರು ಪೊಲೀಸರ ಅಮಾನತುದಲಿತನ ಬೆತ್ತಲೆ ಮೆರವಣಿಗೆ ಪ್ರಕರಣ: ಇಬ್ಬರು ಪೊಲೀಸರ ಅಮಾನತು

ನಮಗೆ ಯಾವುದೇ ದೂರು ಬಾರದ ಕಾರಣಕ್ಕೆ ತನಿಖೆ ನಡೆಸುವುದಕ್ಕೆ ತಡವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸಂತ್ರಸ್ತನ ತಂದೆ ದೂರು ನೀಡಿದ್ದರಿಂದ ಕ್ರಮ ತೆಗೆದುಕೊಂಡಿದ್ದಾಗಿ ಮಾಧ್ಯಮಗಳಿಗೆ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಇನ್ನು ಹಲ್ಲೆಗೊಳಗಾದ ಯುವಕ ಸದ್ಯಕ್ಕೆ ದೆಹಲಿಯಲ್ಲಿದ್ದು, ಆತ ಹಿಂತಿರುಗುವುದನ್ನೇ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Video: Two arrested in Dalit youth assault case in Haryana

"ನನ್ನ ಮಗ ಅವರ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ನಿರಾಕರಿಸಿದಾಗ ತಮ್ಮ ಜಮೀನಿನ ಸಮೀಪದ ಕೋಣೆಯೊಂದರಲ್ಲಿ ನಾಲ್ಕು ತಾಸು ಕೂಡಿ ಹಾಕಿಕೊಂಡಿದ್ದರು. ಮೋಹಿತ್ ಹಾಗೂ ಜಿತೇಂದ್ರ ಸೇರಿ ನನ್ನ ಮಗನ ಬಟ್ಟೆ ತೆಗೆಯಲು ಹೇಳಿ, ಆ ನಂತರ ಅವನನ್ನು ತಳಿಸುವ ವಿಡಿಯೋವನ್ನು ಮೊಬೈಲ್ ನಲ್ಲಿ ಮಾಡಿಕೊಂಡಿದ್ದಾರೆ. ಇದನ್ನು ಬೇರೆಯವರ ಬಳಿ ಹೇಳಿದರೆ ಸರಿಯಾದ ಶಾಸ್ತಿ ಮಾಡುವುದಾಗಿ ಬೆದರಿಸಿದ್ದಾರೆ. ಅವರಿಂದ ಮತ್ತಷ್ಟು ದಾಳಿ ಆಗಬಹುದು ಎಂದು ಹೆದರಿ ನನ್ನ ಮಗ ದೆಹಲಿಯಲ್ಲಿ ಇದ್ದಾನೆ" ಎಂದಿದ್ದಾರೆ.

ಈ ಘಟನೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಪ್ರಮೋದ್ ಮಧ್ವರಾಜ್, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಇಂಥ ಕ್ರೂರ ಘಟನೆಗಳನ್ನು ತಡೆಯಬೇಕು ಎಂದಿದ್ದಾರೆ.

English summary
Mohith and Jitendra, two arrested in Dalit youth assault case in Haryana. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X