ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಟ್ಟ ಹದಗೆಟ್ಟ ವೆಂಟಿಲೇಟರ್‌ಗಳನ್ನು ಕೊಟ್ಟಿತಾ ಕೇಂದ್ರ ಸರ್ಕಾರ!?

|
Google Oneindia Kannada News

ಚಂಡೀಘರ್, ಮೇ 12: ಕಳೆದ 2020ರಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಪಂಜಾಬಿನಲ್ಲಿ ಬಳಕೆಗೆ ಅಗತ್ಯವಿರುವ ವೆಂಟಿಲೇಟರ್‌ಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿ ಅಡಿಯಲ್ಲಿ ಒದಗಿಸಲಾಗಿತ್ತು. ಇಂದು ಅದೇ ವೆಂಟಿಲೇಟರ್ ಅಳವಡಿಸಿದ ಕೆಲವೇ ಗಂಟೆಗಳಲ್ಲಿ ನಿಷ್ಪ್ರಯೋಜಕವಾಗುತ್ತಿವೆ.

ಫರಿದಕೋಟ್ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಸರಬರಾಜು ಮಾಡಿದ 80 ವೆಂಟಿಲೇಟರ್ ಪೈಕಿ 71 ವೆಂಟಿಲೇಟರ್‌ಗಳಲ್ಲಿ ದೋಷ ಕಂಡು ಬಂದಿದೆ. ಈ ವೆಂಟಿಲೇಟರ್‌ಗಳನ್ನು ಆಗ್ವಾ ಹೆಲ್ತ್‌ಕೇರ್ ಪಿಎಂ-ಕೇರ್ಸ್ ಫಂಡ್ ಅಡಿಯಲ್ಲಿ ಪಂಜಾಬ್‌ಗೆ ಒದಗಿಸಲಾಗಿತ್ತು.

ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ

ಕೇಂದ್ರ ಸರ್ಕಾರವು ಕಳುಹಿಸಿದ ಈ ವೆಂಟಿಲೇಟರ್‌ಗಳು ಅಳವಡಿಸಿ ಕಾರ್ಯಾರಂಭ ಮಾಡಿದ ಒಂದೆರೆಡು ಗಂಟೆಗಳಲ್ಲೇ ಕೆಟ್ಟು ಹೋಗುತ್ತಿವೆ. ದಿಢೀರನೇ ಕೈಕೊಡುವ ಕೇಂದ್ರ ಸರ್ಕಾರದ ವೆಂಟಿಲೇಟರ್‌ಗಳನ್ನು ನೆಚ್ಚಿಕೊಂಡು ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.

"ದುರಸ್ತಿ ಆಗುವ ವೆಂಟಿಲೇಟರ್‌ಗಳನ್ನು ಬಳಸುವುದಿಲ್ಲ"

" ಕೇಂದ್ರ ಸರ್ಕಾರವು ಕಳುಹಿಸಿ ಕೊಟ್ಟಿರುವ ವೆಂಟಿಲೇಟರ್‌ಗಳ ಗುಣಮಟ್ಟ ತೀರಾ ಕೆಳಮಟ್ಟದಲ್ಲಿದೆ. ಈ ವೆಂಟಿಲೇಟರ್‌ಗಳ ಏಕಾಏಕಿ ಸ್ಥಗಿತಗೊಳ್ಳುವ ಅಪಾಯ ಹೆಚ್ಚಾಗಿರುವ ಹಿನ್ನೆಲೆ ಪೂರ್ಣ ದುರಸ್ತಿ ಆಗುವವರೆಗೂ ಅವುಗಳನ್ನು ಚಿಕಿತ್ಸೆಗೆ ಬಳಸಲು ಆಗುವುದುಲಿಲ್ಲ" ಎಂದು ಬಾಬಾ ಫರೀದ್ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ರಾಜ್ ಬಹದ್ದೂರ್ ಹೇಳಿದ್ದಾರೆ.

10 ಹೊಸ ವೆಂಟಿಲೇಟರ್ ನೀಡುವ ಭರವಸೆ

10 ಹೊಸ ವೆಂಟಿಲೇಟರ್ ನೀಡುವ ಭರವಸೆ

ಫರಿದಕೋಟ್ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿನ 39 ವೆಂಟಿಲೇಟರ್‌ಗಳ ಪೈಕಿ 32 ವೆಂಟಿಲೇಟರ್‌ಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಆದ್ಯತೆ ಮೇರೆಗೆ ಆಸ್ಪತ್ರೆಯಲ್ಲಿ ಅಗತ್ಯ ಬಳಕೆಗಾಗಿ 10 ಹೊಸ ವೆಂಟಿಲೇಟರ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪಂಜಾಬ್ ಸರ್ಕಾರವೇ ತಿಳಿಸಿದೆ.

ವೆಂಟಿಲೇಟರ್‌ಗಳ ದುರಸ್ತಿಗೆ ಪಂಜಾಬ್ ಸರ್ಕಾರದ ಕ್ರಮ

ವೆಂಟಿಲೇಟರ್‌ಗಳ ದುರಸ್ತಿಗೆ ಪಂಜಾಬ್ ಸರ್ಕಾರದ ಕ್ರಮ

ವೆಂಟಿಲೇಟರ್ ವ್ಯವಸ್ಥೆಯಿಲ್ಲದ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ರೋಗಿಗಳನ್ನು ದಾಖಲಿಸಿದರೆ ಪರಿಸ್ಥಿತಿ ಕಷ್ಟಕರವಾಗಲಿದೆ. ಈ ಹಿನ್ನೆಲೆ ವೆಂಟಿಲೇಟರ್‌ಗಳನ್ನು ದುರಸ್ಥಿಗೊಳಿಸುವುದಕ್ಕಾಗಿ ಇಂಜಿನಿಯರ್ ಹಾಗೂ ತಂತ್ರಜ್ಞರನ್ನು ನೇಮಕಗೊಳಿಸಲಾಗಿದೆ ಎಂದು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿನಿ ಮಹಾಜನ್ ತಿಳಿಸಿದ್ದಾರೆ.

250 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದ್ದ ಕೇಂದ್ರ

250 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದ್ದ ಕೇಂದ್ರ

ಭಾರತದ ಕೇಂದ್ರ ಸರ್ಕಾರದ ಕಳೆದ ವರ್ಷ 25 ಕೋಟಿ ರೂಪಾಯಿ ಮೌಲ್ಯದ 250 ವೆಂಟಿಲೇಟರ್‌ಗಳನ್ನು ಪಂಜಾಬಿಗೆ ಕಳುಹಿಸಿ ಕೊಡಲಾಗಿತ್ತು. ಈ ವೆಂಟಿಲೇಟರ್‌ಗಳಲ್ಲಿ ಕೆಲವು ಸಲಕರಣೆಗಳನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಟ್ಟಿಟ್ಟಿದ್ದರೆ, ಬಳಕೆಗೆ ಬಂದ ವೆಂಟಿಲೇಟರ್‌ಗಳು ದುರಸ್ತಿಗೆ ಬಂದಿವೆ.

English summary
Ventilators Provided To Punjab Under The PM Cares Fund Last Year Have Not Been In Use After They Developed Snags Within A Couple Of Hours Of Installation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X