ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಚಂಡೀಗಢ ವಿವಿ ವಿಡಿಯೋ ವೈರಲ್; ಶಿಮ್ಲಾದಲ್ಲಿ ಯುವಕನ ಬಂಧನ

|
Google Oneindia Kannada News

ಶಿಮ್ಲಾ, ಸೆ.19: ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಆಕ್ಷೇಪಾರ್ಹ ವಿಡಿಯೋಗಳನ್ನು ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಪೊಲೀಸರು ಶಿಮ್ಲಾದಲ್ಲಿ 23 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ಶಿಮ್ಲಾ ಜಿಲ್ಲೆಯ ರೋಹ್ರು ಮೂಲದವನಾಗಿದ್ದು, ಆತನ ಊರಿನಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.

ಇದೇ ಪ್ರಕರಣದಲ್ಲಿ ಶಿಮ್ಲಾದಿಂದ 31 ವರ್ಷದ ಯುವಕನನ್ನು ಪಂಜಾಬ್ ಪೊಲೀಸರು ಪರಿಶೀಲನೆಗಾಗಿ ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆಗೆ ಕಾರಣವಾದ ವಿಡಿಯೋಗಳನ್ನು ಚಿತ್ರೀಕರಿಸಿದ ಹುಡುಗಿಯೂ ಶಿಮ್ಲಾ ಜಿಲ್ಲೆಯ ರೋಹ್ರುಗೆ ಸೇರಿದವರಾಗಿದ್ದಾರೆ.

Breaking: ಚಂಡೀಗಢ ವಿವಿ ವಿದ್ಯಾರ್ಥಿನಿಯರ ವಿಡಿಯೋ ವೈರಲ್, ಉನ್ನತ ತನಿಖೆಗೆ ಸಿಎಂ ಆದೇಶBreaking: ಚಂಡೀಗಢ ವಿವಿ ವಿದ್ಯಾರ್ಥಿನಿಯರ ವಿಡಿಯೋ ವೈರಲ್, ಉನ್ನತ ತನಿಖೆಗೆ ಸಿಎಂ ಆದೇಶ

ಪ್ರಕರಣದಲ್ಲಿ ಬೇಕಾಗಿರುವ ಯುವಕನನ್ನು ಬಂಧಿಸುವಂತೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಅವರಿಂದ ಮನವಿ ಸ್ವೀಕರಿಸಲಾಗಿತ್ತು ಎಂದು ಹಿಮಾಚಲ ಪ್ರದೇಶ ಡಿಜಿಪಿ ಸಂಜಯ್ ಕುಂದು ಹೇಳಿದ್ದಾರೆ. ಆರೋಪಿಯ ವಿವರಗಳನ್ನು ಸಂಗ್ರಹಿಸಿದ ನಂತರ, ಪೊಲೀಸ್ ತಂಡವು ಅಂತಿಮವಾಗಿ ಆರೋಪಿ ಯುವಕನನ್ನು ರೋಹ್ರುದಿಂದ ಬಂಧಿಸಿದೆ ಎಂದು ಡಿಸಿಪಿ ಸಂಜಯ್ ಕುಂದು ಹೇಳಿದ್ದಾರೆ.

Chandigarh University viral video: Shimla youth arrested

ಬಂಧನದ ನಂತರ ಪೊಲೀಸರು ಯುವಕನನ್ನು ರೋಹ್ರು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಮೊಹಾಲಿಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ಪಂಜಾಬ್‌ನ ಪೊಲೀಸ್ ತಂಡಕ್ಕೆ ಆರೋಪಿಯನ್ನು ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಹಿಮಾಚಲ ಪೊಲೀಸರ ಪಾತ್ರ ಬಹಳ ಸೀಮಿತವಾಗಿದೆ ಎಂದು ಹೇಳಿದ್ದು, ಪಂಜಾಬ್ ಪೊಲೀಸರು ಮುಂದಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗಿದೆ. ಶಿಮ್ಲಾ ಎಸ್ಪಿ ಅವರು ಮೊಹಾಲಿ ಎಸ್ಪಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Chandigarh University viral video: Shimla youth arrested

ಹಿಮಾಚಲ ಪ್ರದೇಶ ಪೊಲೀಸರು ಪಂಜಾಬ್ ಪೊಲೀಸರ ಮನವಿಗೆ ಸೂಕ್ಷ್ಮತೆ ಮತ್ತು ವೃತ್ತಿಪರತೆಯಿಂದ ಪ್ರತಿಕ್ರಿಯಿಸಿದ್ದಾರೆ. ನಾವು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಶಿಮ್ಲಾ ಎಸ್ಪಿ ಡಾ ಮೋನಿಕಾ ಮತ್ತು ಅವರ ತಂಡವನ್ನು ಅಭಿನಂದಿಸುತ್ತಾ ಡಿಸಿಪಿ ಸಂಜಯ್ ಕುಂದು ಹೇಳಿದರು.

English summary
Himachal Pradesh police arrested a 23-year-old youth In connection with Chandigarh University viral video case. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X