• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್ ಗಡಿಯಲ್ಲಿ ಇಬ್ಬರು ಒಳನುಸುಳುಕೋರರನ್ನು ಹೊಡೆದುರುಳಿಸಿದ ಸೇನೆ

|

ಚಂಡೀಗಢ, ಡಿಸೆಂಬರ್ 17: ಪಂಜಾಬ್ ಗಡಿಯಲ್ಲಿ ಇಬ್ಬರು ಒಳನುಸುಳುಕೋರರನ್ನು ಹೊಡೆದುರುಳಿಸುವಲ್ಲಿ ಗಡಿ ಭದ್ರತಾ ಪಡೆ ಪೊಲೀಸರು ಯಶಸ್ವಿಯಾಗಿದ್ದರು.

ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಈ ಉಗ್ರರು ಸಕ್ರಿಯವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ, ಸದ್ಯ ಸ್ಥಳದಲ್ಲಿ ಶೋಧಕಾರ್ಯ ಮುಂದುವರಿದಿದೆ.

ಗಡಿಯಲ್ಲಿ ಪಾಕ್‌ನಿಂದ ಕದನವಿರಾಮ ಉಲ್ಲಂಘನೆ: ಪಾಕ್ ಸೇನೆಯ ಇಬ್ಬರ ಹತ್ಯೆ

ಇಂದು ನಸುಕಿನ ಜಾವ ಚಂಡೀಗಢ ಸಮೀಪ ಅತ್ತಾರಿ ಗಡಿಭಾಗದಲ್ಲಿ ಇಬ್ಬರು ಒಳನುಸುಳಿ ದಂಧೆ ನಡೆಸಲು ಹೊಂಚುಹಾಕುತ್ತಿದ್ದರು.

ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಗಡಿ ಭದ್ರತಾ ಪಡೆ ಪೊಲೀಸರು ಇಬ್ಬರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರವಷ್ಟೇ ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನವು ಕದನವಿರಾಮ ಉಲ್ಲಂಘನೆ ಮಾಡಿ ಶೆಲ್ ದಾಳಿ ನಡೆಸಿದ್ದು, ಘಟನೆಯಲ್ಲಿ ಪಾಕಿಸ್ತಾನ ಸೇನೆಯ ಇಬ್ಬರನ್ನು ಹತ್ಯೆ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿದ್ದರು. ಭಾರತೀಯ ಸೇನಾಪಡೆಯು ಇಬ್ಬರು ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಡಿಸೆಂಬರ್ 13 ರಂದೂ ಕೂಡ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ಮುಗ್ದ ನಾಗರೀಕರನ್ನು ಗುರುಯಾಗಿರಿಸಿಕೊಂಡು ದಾಳಿ ನಡೆಸಿತ್ತು.

ಈ ವೇಳೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿತ್ತು ಎಂದು ಲೆಫ್ಟಿನೆಂಟ್ ಜನರಲ್ ಸತೀಂದರ್ ಕುಮಾರ್ ಸೈನಿಯವರು ಮಂಗಳವಾರ ರಾತ್ರಿ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ದಾಳಿಗೆ ತಕ್ಕ ಉತ್ತರ ನೀಡಿ ಇಬ್ಬರು ಪಾಕಿಸ್ತಾನ ಸೇನೆಯ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾಪಡೆ ಮಾಹಿತಿ ನೀಡಿದೆ.

English summary
New Delhi The Border Security Force (BSF) gunned down two terrorists along the India-Pakistan International Border in Punjab in the early hours Of Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X