ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಲ್ಲ: ಓಡಿಹೋದ ಕೊರೊನಾ ಶಂಕಿತ ವ್ಯಕ್ತಿ

|
Google Oneindia Kannada News

ಚಂಡೀಗಢ, ಮಾರ್ಚ್ 5: ಕೊರೊನಾ ಇದೆ ಎಂದು ದೃಢಪಟ್ಟ ತಕ್ಷಣ ರೋಗಿಯೊಬ್ಬ ಆಸ್ಪತ್ರೆಯಲ್ಲಿ ದಾಖಲಾಗುವುದಿಲ್ಲ ಎಂದು ಹೇಳಿ ಓಡಿ ಹೋಗಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

ಕೊರೊನಾ ವೈರಸ್​ ಸೋಂಕಿತ ಶಂಕಿತ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿ ಓಡಿ ಹೋಗಿದ್ದ ಪ್ರಕರಣ ಪಂಜಾಬ್​ನ ಮೊಗದಲ್ಲಿ ನಡೆದಿದೆ.

ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?

ಬುಧವಾರ ದುಬೈನಿಂದ ಮರಳಿದ್ದ ಈತನಲ್ಲಿ ಶ್ವಾಸಕೋಶ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ನಲ್ಲಿ ದಾಖಲಿಸಲಾಗಿತ್ತು.

ಕೆಲವು ಪರೀಕ್ಷೆಗಳು ಬಾಕಿ ಇರುವಾಗಲೇ ಓಡಿಹೋದ ರೋಗಿ

ಕೆಲವು ಪರೀಕ್ಷೆಗಳು ಬಾಕಿ ಇರುವಾಗಲೇ ಓಡಿಹೋದ ರೋಗಿ

ಕೆಲ ಪರೀಕ್ಷೆಗಳನ್ನ ನಡೆಸಲಾಯಿತು. ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಯಿತು. ಇನ್ನೂ ಕೆಲ ಪರೀಕ್ಷೆಗಳು ನಡೆಸುವುದು ಬಾಕಿ ಇರುವಾಗಲೇ ಈತ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಕೆಲ ಗಂಟೆಗಳ ಬಳಿಕ ಮತ್ತೆ ಬಂದು ವಿವಿಧ ಪರೀಕ್ಷೆಗಳಿಗೆ ಸಹಕರಿಸಿದ್ದಾನೆ.

ಪ್ರತ್ಯೇಕ ವಾರ್ಡ್‌ನಲ್ಲಿ ಅಡ್ಮಿಟ್ ಆಗಲು ಹೆದರಿದ್ದ

ಪ್ರತ್ಯೇಕ ವಾರ್ಡ್‌ನಲ್ಲಿ ಅಡ್ಮಿಟ್ ಆಗಲು ಹೆದರಿದ್ದ

ಪ್ರತ್ಯೇಕ ವಾರ್ಡ್​ನಲ್ಲಿ ಅಡ್ಮಿಟ್ ಆಗಲು ಈತ ಹೆದರಿದ್ದ. ಮಾಧ್ಯಮಗಳು ಈತನ ಫೋಟೋ ಕ್ಲಿಕ್ಕಿಸಲು ಯತ್ನಿಸಿದ್ದೂ ಈತನ ಭಯ ಹೆಚ್ಚಿಸಿತು. ಬಳಿಕ ಆತ ಕಣ್ಮರೆಯಾಗಿದ್ದಾನೆ. ಅದಾದ ಬಳಿಕ ಆಸ್ಪತ್ರೆಯ ವೈದ್ಯರ ತಂಡವೊಂದು ಪೊಲೀಸರ ಸಮೇತ ಈತನ ಮನೆಗೆ ಹೋಗಿ ಕುಟುಂಬದವರೊಂದಿಗೆ ಮಾತನಾಡಿದ್ದಾರೆ.

ಕೊರೊನಾ ಕಂಟಕ: ಭಾರತದ ನಿರ್ಧಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಆತಂಕಕೊರೊನಾ ಕಂಟಕ: ಭಾರತದ ನಿರ್ಧಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಆತಂಕ

ಚಂಡೀಗಢದಲ್ಲಿ ಇಬ್ಬರಲ್ಲಿ ಸೋಂಕು ಪತ್ತೆ

ಚಂಡೀಗಢದಲ್ಲಿ ಇಬ್ಬರಲ್ಲಿ ಸೋಂಕು ಪತ್ತೆ

ಚಂಡೀಗಢದ ಇಬ್ಬರಲ್ಲಿ ಈ ಸೋಂಕಿನ ಶಂಕೆ ವ್ಯಕ್ತವಾಗಿದೆ. ಇವರಲ್ಲಿ ಒಬ್ಬಾತ ಇಂಡೊನೇಷ್ಯಾ, ಸಿಂಗಾಪುರದಿಂದ ಮರಳಿದ್ದ. ಮತ್ತೊಬ್ಬ ಬಾಲಿಯಿಂದ ವಾಪಸ್ಸಾಗಿದ್ದ. ಇವರಿಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕುಟುಂಬದವರ ಬಳಿ ವೈದ್ಯರು ಮಾತನಾಡಿದ್ದಾರೆ

ಕುಟುಂಬದವರ ಬಳಿ ವೈದ್ಯರು ಮಾತನಾಡಿದ್ದಾರೆ

ಬಳಿಕ, ಈತ ಉಳಿದ ಸ್ಯಾಂಪಲ್​ಗಳನ್ನು ನೀಡಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಆಸ್ಪತ್ರೆಗೆ ಬಂದು ವಿಶೇಷ ವಾರ್ಡ್​ನಲ್ಲಿ ಅಡ್ಮಿಟ್ ಆದ ಈತನನ್ನು ಅಬ್ಸರ್ವೇಶನ್​ನಲ್ಲಿಡಲಾಗಿದೆ. ಪ್ರಾರಂಭಿಕ ಮಾಹಿತಿ ಪ್ರಕಾರ ಈತನಿಗೆ ನ್ಯೂಮೋನಿಯಾ ಆಗಿದೆ. ಕೊರೋನಾ ಇದೆಯೋ ಇಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಕೊರೋನಾ ವೈರಸ್ ಪತ್ತೆಗೆ ಈತನ ಕೆಲ ಸ್ಯಾಂಪಲ್​ಗಳನ್ನು ಕಳುಹಿಸಲಾಗಿದ್ದು, ಫಲಿತಾಂಶಕ್ಕಾಗಿ ವೈದ್ಯರು ಎದುರುನೋಡುತ್ತಿದ್ಧಾರೆ.

ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?

English summary
Civil Hospital in Moga witnessed dramatic scenes after a suspected coronavirus patient came for a check-up, but left without giving samples for testing, prompting the Moga Civil Surgeon to write to police to trace him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X