ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ನಗದು ಮತ್ತು ವಿಮಾನ ಟಿಕೆಟ್‌ಗಳನ್ನು ನೀಡಿದ ರಾಜ್ಯ ಸರ್ಕಾರ

|
Google Oneindia Kannada News

ಚಂಡೀಗಢ ಮಾರ್ಚ್ 04: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಭಾರತೀಯರ ಸುರಕ್ಷಿತ ವಾಪಸಾತಿಗೆ ಸಾಧ್ಯವಿರುವ ಎಲ್ಲವನ್ನೂ ಕಾರ್ಯಗಳನ್ನು ಮಾಡುತ್ತಿವೆ. ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹರಿಯಾಣ ಸರ್ಕಾರವು ಶ್ಲಾಘನೀಯ ಉಪಕ್ರಮವನ್ನು ತೆಗೆದುಕೊಂಡಿದೆ. ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳಿಗಾಗಿ ಹರಿಯಾಣ ಸರ್ಕಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಅನ್ನು ಸ್ಥಾಪಿಸಿದೆ. ಹೆಲ್ಪ್ ಡೆಸ್ಕ್ ನಿನ್ನೆ ಹರಿಯಾಣದ 9 ವಿದ್ಯಾರ್ಥಿಗಳನ್ನು ಅವರ ಮನೆಗೆ ಸುರಕ್ಷಿತವಾಗಿ ಕಳುಹಿಸಿದೆ. ಉಕ್ರೇನ್‌ನಿಂದ ಸ್ವದೇಶಕ್ಕೆ ಹಿಂದಿರುಗಿದ ಎಲ್ಲಾ ವಿದ್ಯಾರ್ಥಿಗಳಿಗೆ ಹರ್ಯಾಣ ಸರ್ಕಾರದಿಂದ ಮುಂಬೈನಿಂದ ದೆಹಲಿಗೆ ತೆರಳಲು ಒಂದು ಸಾವಿರ ರೂಪಾಯಿ ನಗದು ಮತ್ತು ವಿಮಾನ ಟಿಕೆಟ್‌ಗಳನ್ನು ನೀಡಿದೆ. ರಾಜ್ಯ ಸರ್ಕಾರದ ನೆರವಿನ ನಂತರ ವಿದ್ಯಾರ್ಥಿಗಳು ಸಹಾಯ ಕೇಂದ್ರದ ಎಲ್ಲಾ ಸದಸ್ಯರಿಗೆ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಕ್ರೇನ್‌ನಿಂದ ತಾಯ್ನಾಡಿಗೆ ಹಿಂದಿರುಗಲು ಭಾರತೀಯರು ಪಡಬಾರದ ಕಷ್ಟಗಳನ್ನು ಪಡುತ್ತಿದ್ದಾರೆ. ಭಾರತೀರನ್ನು ರೈಲುಗಳಲ್ಲಿ ಬಿಡುತ್ತಿಲ್ಲಾ, ಗಡಿ ತಾಟಲು ಬಿಡುತ್ತಿಲ್ಲ, ಅಧಿಕ ಹಣ ಪಾವತಿಸುವಂತೆ ಕೇಳುತ್ತಿದ್ದಾರೆ, ನಮ್ಮ ಬಳಿ ಹಣವಿಲ್ಲ, ಆಹಾರವಿಲ್ಲ ಎಂಬಿತ್ಯಾದಿ ದೂರುಗಳು ಉಕ್ರೇನ್‌ನಿಂದ ವಿದ್ಯಾರ್ಥಿಗಳು ನೀಡುತ್ತಿದ್ದಾರೆ. ಇಂತಹ ಕಷ್ಟದಲ್ಲಿ ಅಲ್ಲಿಂದ ಭಾರತಕ್ಕೆ ಬಂದ ವಿದ್ಯಾರ್ಥಿಗಳಿಗೆ ಹರಿಯಾಣದ ರಾಜ್ಯ ಸರ್ಕಾರ ನೆರವು ನೀಡಿದೆ.

ಮನೆಗೆ ಮರಳಿದ ಹರಿಯಾಣದ 9 ವಿದ್ಯಾರ್ಥಿಗಳು

ಉಕ್ರೇನ್‌ನಿಂದ ಮುಂಬೈಗೆ ಹಿಂತಿರುಗಿದ ವಿದ್ಯಾರ್ಥಿಗಳಲ್ಲಿ ರೋಹ್ಟಕ್‌ನಿಂದ ಜತಿನ್ ಮತ್ತು ಇಶಾ, ಅಂಬಾಲಾದ ವೈಭವ್, ಹಿಸಾರ್‌ನ ಹಿಮಾಂಶು, ಮಹೇಂದ್ರಗಢದ ಅಜಯ್ ಕುಮಾರ್ ಶರ್ಮಾ, ಫತೇಹಾಬಾದ್‌ನ ಗರಿಮಾ ಅರೋರಾ ಮತ್ತು ಸುಮನ್ ಅರೋರಾ, ಫರಿದಾಬಾದ್‌ನ ವಿಪುಲ್ ಶರ್ಮಾ, ಗುರುಗ್ರಾಮ್‌ನ ಮೀರಜ್ ಅಹ್ಮದ್ ಸೇರಿದ್ದಾರೆ. ಉಕ್ರೇನ್ ವಿವಾದದಿಂದಾಗಿ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹರಿಯಾಣ ಸರ್ಕಾರವು ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ. ವಿದ್ಯಾರ್ಥಿಗಳನ್ನು ಅವರ ಮನೆಗೆ ಕರೆದೊಯ್ಯಲು ಸಹಾಯ ಕೇಂದ್ರ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ. ಇದರೊಂದಿಗೆ ಉಕ್ರೇನ್‌ನಲ್ಲಿ ಸಿಲುಕಿರುವ ಹರಿಯಾಣ ನಿವಾಸಿಗಳು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ರಾಜ್ಯ ಸರ್ಕಾರವು ಸಂಜಯ್ ಜುನ್ ಅವರನ್ನು ರಾಜ್ಯ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನಾಗಿ ಮಾಡಿದೆ. ಇದಲ್ಲದೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ. ಉಕ್ರೇನ್‌ನ ಬಾಲಾ ಚಾವ್ನಿ ಕಚ್ಚಾ ಬಜಾರ್‌ನ ವಿದ್ಯಾರ್ಥಿನಿ ಇಶಿಕಾ ಭೂತಾನಿ ಅವರು ಮನೆಗೆ ಹಿಂದಿರುಗಿದ ನಂತರ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಗೃಹ ಸಚಿವ ಅನಿಲ್ ವಿಜ್ ಅವರು ವಿದ್ಯಾರ್ಥಿನಿ ಇಶಿಕಾ ಅವರಿಗೆ ಸಿಹಿ ತಿನ್ನಿಸುವ ಮೂಲಕ ಸ್ವಾಗತಿಸಿದರು.

 State government giving cash and air tickets to the students of Haryana reaching Mumbai airport from Ukraine

ಉಕ್ರೇನ್ ನಲ್ಲಿ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ

ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ಬಗ್ಗೆ ವಿದ್ಯಾರ್ಥಿನಿ ಇಶಿಕಾ ಅವರಿಂದ ಮಾಹಿತಿ ಪಡೆದರು. ಇದರೊಂದಿಗೆ ಇಶಿಕಾ ಉಕ್ರೇನ್‌ನ ಯಾವ ನಗರದಲ್ಲಿ ಓದುತ್ತಿದ್ದಳು ಎಂಬ ಸಂಪೂರ್ಣ ಮಾಹಿತಿಯೂ ಸಿಕ್ಕಿದೆ. ತನ್ನ ತಾಯ್ನಾಡಿಗೆ ಮರಳಲು ಯಾವ ಗಡಿಯಿಂದ ವಿಮಾನ ಸೌಲಭ್ಯ ಸಿಕ್ಕಿತು? ಎನ್ನುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ಎಲ್ಲ ಜನರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಎಲ್ಲಾ ಜನರು ಸುರಕ್ಷಿತವಾಗಿ ಮರಳಲು ಸಚಿವಾಲಯವು ಅವರಿಗೆ ಸಂಪೂರ್ಣ ಭರವಸೆ ನೀಡಿದೆ. ಇದರೊಂದಿಗೆ ರೊಮೇನಿಯಾ, ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಗಡಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಸ್ಥಳಾಂತರಿಸಲು ಯಾವ ಹೆಲ್ಪ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಕೇಳಲಾಯಿತು. ಹೆಲ್ಪ್ ಡೆಸ್ಕ್ ಮೂಲಕ, ಅಲ್ಲಿ ಸಿಕ್ಕಿಬಿದ್ದಿರುವ ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

Recommended Video

'ಯುದ್ಧ ಬೇಡ' ರಷ್ಯಾ ನಡೆ ವಿರೋಧಿಸಿ ಲೈವ್ ನಲ್ಲೇ ರಾಜೀನಾಮೆ ಕೊಟ್ಟ ರಷ್ಯಾ ಚಾನಲ್ | Oneindia Kannada

English summary
All the students returning home from Ukraine were given one thousand rupees in cash and air tickets from Mumbai to Delhi from the Government of Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X