ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಸಿಧು ಮೂಸೆವಾಲ ಹತ್ಯೆ, 3ನೇ ಆರೋಪಿ ಬಂಧನ

|
Google Oneindia Kannada News

ಚಂಡೀಗಢ, ಜೂನ್ 06; ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪಂಜಾಬ್ ಪೊಲೀಸರು 3ನೇ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದೇವೇಂದ್ರ ಅಲಿಯಾಸ್ ಕಾಳ ಎಂದು ಗುರುತಿಸಲಾಗಿದೆ. ಹರ್ಯಾಣದ ಫರಿದಾಬಾದ್‌ನಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ಸೇಡಿಗಾಗಿ ಬಹುಮಾನ: ಸಿಧು ಮೂಸೆವಾಲಾ ಹಂತಕರ ಸುಳಿವು ನೀಡಿದರೆ 5 ಲಕ್ಷ! ಸೇಡಿಗಾಗಿ ಬಹುಮಾನ: ಸಿಧು ಮೂಸೆವಾಲಾ ಹಂತಕರ ಸುಳಿವು ನೀಡಿದರೆ 5 ಲಕ್ಷ!

ಸಿಧು ಮೂಸೆವಾಲ ಹತ್ಯೆ ಪ್ರಕರಣದ ಆರೋಪಿಗಳಾದ ಕೇಶವ್ ಮತ್ತು ಚರಣ್‌ಜಿತ್ ಮೇ 16 ಮತ್ತು 17ರಂದು ದೇವೇಂದ್ರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು ಎಂಬುದು ಪೊಲೀಸರು ಶಂಕೆಯಾಗಿದೆ.

Breaking: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯ ಮೊದಲ ಆರೋಪಿ ಬಂಧನ Breaking: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯ ಮೊದಲ ಆರೋಪಿ ಬಂಧನ

Singer Sidhu Moose Wala Murder Police Arrested Third Accused

ಪವನ್ ಮತ್ತು ನಸೀಬ್ ಎಂಬ ಆರೋಪಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಫರಿದಾಬಾದ್‌ನಲ್ಲಿಯೇ ಇಬ್ಬರು ಆರೋಪಿಗಳು ಅಡಗಿದ್ದರು ಮತ್ತು ಪೊಲೀಸರು ಅಲ್ಲಿಂದಲೇ ಅವರನ್ನು ವಶಕ್ಕೆ ಪಡೆದಿದ್ದರು.

 ಸಿಧು ಮೂಸೆವಾಲ ಹತ್ಯೆ ಘಟನೆ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶ ಸಿಧು ಮೂಸೆವಾಲ ಹತ್ಯೆ ಘಟನೆ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶ

Recommended Video

14ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ Rafael Nadal | #Cricket | Oneindia Kannada

ಮೇ 29ರಂದು ಪಂಜಾಬ್‌ನಲ್ಲಿ ಸಿಧು ಮೂಸೆವಾಲ ಹತ್ಯೆ ನಡೆದಿತ್ತು. ಪಂಜಾಬ್ ರಾಜಕೀಯದಲ್ಲಿ ಈ ಹತ್ಯೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹತ್ಯೆ ಪ್ರಕರಣದ ಬಗ್ಗೆ ಪಂಜಾಬ್ ಸರ್ಕಾರ ನ್ಯಾಯಾಂಗ ತನಿಖೆಗೆ ಸಹ ಆದೇಶ ನೀಡಿದೆ.

28 ವರ್ಷದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅಂತ್ಯ ಸಂಸ್ಕಾರ ಮೇ 31ರಂದು ಅವರ ಹುಟ್ಟೂರು ಮೂಸಾದಲ್ಲಿನ ಕೃಷಿ ಭೂಮಿಯಲ್ಲಿ ನಡೆದಿತ್ತು. ಸಿಧು ಪಾರ್ಥಿವ ಶರೀರಿದ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಗುಂಡು ಹಾರಿಸಿ ಸಿಧು ಮೂಸೆ ವಾಲಾ ಹತ್ಯೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ವೇಲೆ ಅವರ ದೇಹದಲ್ಲಿ ಎರಡು ಡಜನ್‌ಗೂ ಅಧಿಕ ಬುಲೆಟ್ ಪತ್ತೆಯಾಗಿತ್ತು. ಅತ್ಯಾಧುನಿಕ ರೈಫಲ್ ಬಳಸಿ ಅವರನ್ನು ಹತ್ಯೆ ಮಾಡಲಾಗಿತ್ತು.

ಈ ವರ್ಷ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಸಿಧು ಮೂಸೆ ವಾಲಾ ಸ್ಪರ್ಧಿಸಿದ್ದರು. ಸಿಧುಗೆ ನೀಡಿದ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಮರುದಿನವೇ ಅವರ ಹತ್ಯೆ ಮಾಡಲಾಗಿತ್ತು.

ಪಂಜಾಬ್ ಸರ್ಕಾರ ಭದ್ರತೆ ವಾಪಸ್ ನೀಡಿರುವ ಬಗ್ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ ವರದಿ ಕೇಳಿದೆ. ಎಷ್ಟು ಜನರ ಭದ್ರತೆ ವಾಪಸ್ ಪಡೆಯಲಾಗಿದೆ, ಅದಕ್ಕೆ ಕಾರಣಗಳೇನು? ಎಂದು ವಿವರವಾದ ವರದಿ ನೀಡುವಂತೆ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

English summary
Punjab police arrested third suspect accused in connection with the Punjab singer Sidhu Moose Wala murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X