ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ: ನವಜೋತ್ ಸಿಂಗ್

|
Google Oneindia Kannada News

ಚಂಡೀಗಢ, ಅಕ್ಟೋಬರ್ 14: ಕಾಂಗ್ರೆಸ್‌ ಹೈಕಮಾಂಡ್‌ಗೆ ನಾನು ಆಭಾರಿಯಾಗಿದ್ದೇನೆ ಆದರೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನವಜೋತ್‌ ಸಿಂಗ್ ಸಿಧು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ತಮ್ಮ ರಾಜಕೀಯ ಜೀವನದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಕುರಿತು ಮಾತನಾಡಿದ ಅವರು ಹೈಕಮಾಂಡ್ ಯಾವಾಗಲೂ ನನಗೆ ಅನುಕೂಲವನ್ನು ಮಾಡಿಕೊಟ್ಟಿದೆ. ನಾನು ಅವರಿಗೆ ಯಾವಾಗಲೂ ಆಭಾರಿಯಾಗಿದ್ದೇನೆ. ಆದರೆ ರಾಜಿ ಮಾಡಿಕೊಂಡು ಮುನ್ನಡೆಯಲು ಸಾಧ್ಯವಿಲ್ಲ, ಈ ದೈತ್ಯಾಕಾರದ ವ್ಯವಸ್ಥೆಯು ನಿಮ್ಮನ್ನು ನುಂಗಿ ಬಿಡುತ್ತದೆ ಎಂದರು.

 ಸಾಂಸ್ಥಿಕ ವಿಚಾರದ ಬಗ್ಗೆ ಚರ್ಚೆ: ಸಿಧು-ವೇಣುಗೋಪಾಲ್‌ ಗುರುವಾರ ಭೇಟಿ ಸಾಂಸ್ಥಿಕ ವಿಚಾರದ ಬಗ್ಗೆ ಚರ್ಚೆ: ಸಿಧು-ವೇಣುಗೋಪಾಲ್‌ ಗುರುವಾರ ಭೇಟಿ

ತನಗೆ ಆದರ ಮತ್ತು ಗೌರವ ನೀಡಿರುವುದಕ್ಕೆ ಹೈಕಮಾಂಡ್​​ಗೆ ಧನ್ಯವಾದ ಸಲ್ಲಿಸಿದ ಸಿಧು ಇದೊಂದು ದೊಡ್ಡ ಹೋರಾಟವಾಗಿದೆ, ವ್ಯವಸ್ಥೆ ಬದಲಾಗಬೇಕಿದೆ. ನನ್ನಂತವರು ಬಂದು ಹೋಗುತ್ತಾರೆ ಎಂದು ಹೇಳಿದರು.

Sidhu Says Grateful to Congress High Command But There Can’t be Any Compromises

ಭ್ರಷ್ಟಾಚಾರದ ಬೇರನ್ನು ಕತ್ತರಿಸುವುದನ್ನು ಬಿಟ್ಟು, ಮೇಲಿನಿಂದ ಹೊಡೆದೋಡಸುವ ನಾಟಕ ನಡೆಯುತ್ತಿದೆ. ಇಂತಹ ಭ್ರಷ್ಟ ವ್ಯವಸ್ಥೆಗಳನ್ನು ವಿರೋಧಿಸುವುದರಲ್ಲಿ ನನಗೆ ಖುಷಿ ಇದೆ. ನಾನು ಎಂದಿಗೂ ರಾಜಿ ಮಾಡಿಲ್ಲ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಮಾತನಾಡಿ, ಅವರು ಕೇಜ್ರಿವಾಲ್ 16,000 ಮೊಹಲ್ಲಾ ಕ್ಲಿನಿಕ್ ಹಾಗೂ ಉದ್ಯೋಗಗಳನ್ನು 25 ಲಕ್ಷಕ್ಕೆ ನೀಡುವುದಾಗಿ ಭರವಸೆ ನೀಡಿದರು.
ನಾವು ಇದನ್ನು ಮಾಡಲು ಸಿದ್ಧ ಆದರೆ ನಮಗೆ ಆದಾಯದ ಕೊರತೆ ಇದೆ. ಪಂಜಾಬ್​​ನಲ್ಲಿ 1 ಲಕ್ಷ ಹುದ್ದೆಗಳು ಖಾಲಿ ಇವೆ ಆದರೆ ಹಣವಿಲ್ಲದ ಕಾರಣ ಅವುಗಳನ್ನು ಭರ್ತಿ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.

ತಮ್ಮ ಸರ್ಕಾರಕ್ಕೆ ಕ್ಯಾಬಿನೆಟ್ ಮಂತ್ರಿಯಾಗಿ ನೀತಿಗಳನ್ನು ಹೇಗೆ ಸೂಚಿಸಿದ್ದಾರೆ ಎಂಬುದನ್ನು ಅವರು ನೆನಪಿಸಿಕೊಂಡರು. "ನಾನು ನೀತಿಗಳನ್ನು ನೀಡುತ್ತಿದ್ದೆ. ನಾನು ಮದ್ಯ ನೀತಿ, ಮರಳು ಗಣಿಗಾರಿಕೆ ನೀತಿ ನೀಡಿದ್ದೇನೆ. ಅಕಾಲಿಗಳಿಗೆ ಸಂಬಂಧಿಸಿದ ಕೇಬಲ್ ನೆಟ್‌ವರ್ಕ್ ಸರ್ಕಾರಿ ಭೂಮಿಯಲ್ಲಿ ಹೇಗೆ ಇದೆ ಎಂದು ನಾನು ಎತ್ತಿದೆ. ವ್ಯಕ್ತಿಗಳು ಶ್ರೀಮಂತರಾಗುತ್ತಾರೆ ಆದರೆ ರಾಜ್ಯವು ನರಳುತ್ತದೆ.

ರಾಜ್ಯಕ್ಕಾಗಿ ಅವರ ದೃಷ್ಟಿಕೋನವನ್ನು ವಿವರಿಸಿದ ಸಿಧು ಪಂಜಾಬ್ ಮಾದರಿಯು ಮೂಲಭೂತವಾಗಿ ಆರ್ಥಿಕವಾಗಿ ಸ್ವಾವಲಂಬನೆಯಾಗಿದೆ ಎಂದು ಹೇಳಿದರು. "ಪಂಜಾಬ್‌ನ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಹಣ.

ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕಿದೆ. ಸಾಲ ತೀರಿಸಲು ನಾವು ಸಾಲ ತೆಗೆದುಕೊಳ್ಳುತ್ತೇವೆ. ಪಿಪಿಎಗಳನ್ನು ರದ್ದುಗೊಳಿಸುವುದು ತಾಂತ್ರಿಕ ಸಮಸ್ಯೆಯಾಗಿರಬಹುದು ಆದರೆ ಕೊನೆಯಲ್ಲಿ ಅದು ಹಣಕಾಸಿನ ಸಮಸ್ಯೆಯಾಗಿದೆ. ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್, ಅಂಬೇಡ್ಕರ್ ಯೋಜನೆ ಪಂಜಾಬ್ ಸರ್ಕಾರವು ಕಳೆದ ವರ್ಷ ಆರಂಭಿಸಿತು ಆದರೆ ಎಂದಿಗೂ ಜಾರಿಗೆ ಬಂದಿಲ್ಲ ಏಕೆಂದರೆ ಹಣವಿಲ್ಲ.

ಎಪಿಎಸ್ ಡಿಯೋಲ್ ಅವರನ್ನು ಎಜಿಯಾಗಿ ಮತ್ತು ಐಪಿಎಸ್ ಸಹೋತಾ ಅವರನ್ನು ಡಿಜಿಪಿಯಾಗಿ ನೇಮಿಸಿದ್ದಕ್ಕಾಗಿ ಪಂಜಾಬ್ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ಸಿಧು ಅವರ ಇತ್ತೀಚಿನ ವಿಡಿಯೋ ಕುತೂಹಲ ಹುಟ್ಟಿಸಿದೆ. ಹೊಸ ಡಿಜಿಪಿಯನ್ನು ನೇಮಕ ಮಾಡಲು ಸರ್ಕಾರ ಯುಪಿಎಸ್‌ಸಿಗೆ ಒಂದು ಪ್ಯಾನಲ್ ಅನ್ನು ಕಳುಹಿಸಿದೆ.

ಸಿಧು ಈ ಎರಡು ವಿಷಯಗಳಿಗೆ ರಾಜೀನಾಮೆ ನೀಡಿದ್ದರು. ಪಕ್ಷವು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿತು ಆದರೆ ಸಿಧು ತಮ್ಮ ರಾಜೀನಾಮೆಯನ್ನು ಹಿಂಪಡೆದಿಲ್ಲ. ಅವರ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂಬ ಊಹಾಪೋಹಕ್ಕೆ ಅವರ ಇತ್ತೀಚಿನ ವಿಡಿಯೊ ಕಾರಣವಾಗಿದೆ.

English summary
Punjab Congress chief Navjot Singh Sidhu Wednesday said he is always grateful to the party high command for "facilitating" him even as he asserted there "can never be compromises". He further said those who understand his 'ishq' (love) for Punjab will never level any accusations against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X