• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನನ್ನು ಶೂಟ್ ಮಾಡಿ ಎಂದ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ

|

ಚಂಡಿಗಢ, ಜೂನ್ 06: "ನಿಮಗೆ ನನ್ನಿಂದ ಸಾಕಾಗಿದ್ದರೆ ನನ್ನನ್ನು ಶೂಟ್ ಮಾಡಿ" ಎಂಡು ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವರ್ ಉದ್ವೇಗಕ್ಕೊಳಗಾಗಿ ಕೂಗಾಡಿದ್ದಾರೆ.

'ಹೇಳಿ ಸಿಧು, ಯಾವಾಗ ರಾಜೀನಾಮೆ ಕೊಡ್ತೀರಿ?'

ಲೋಕಸಭೆ ಚುನಾವಣೆಯಲ್ಲಿ ಹರ್ಯಾಣದಲ್ಲಿ ಕಾಂಗ್ರೆಸ್ ನ ಶೂನ್ಯ ಫಲಿತಾಂಶದ ಕುರಿತು ಹರ್ಯಾಣಾ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ನಬಿ ಆಜಾದ್ ಅವರು ಗುರುವಾರ ಸಭೆಯೊಂದನ್ನು ಕರೆದಿದ್ದರು. ಈ ಸಂದರ್ಭದಲ್ಲಿ ಹರ್ಯಾಣ ಮುಖ್ಯಮಂತ್ರಿ ಭುಪಿಂದರ್ ಹೂಡಾ ಅವರು ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಅಶೋಕ್ ತನ್ವರ್ ಅವರೇ ಕಾರಣ. ಅವರೇ ಸೋಲಿನ ಹೊಣೆ ಹೊತ್ತುಕೊಳ್ಳಬೇಕು ಎಂದಿದ್ದರು.

ಫಲಿತಾಂಶಕ್ಕೂ ಮುನ್ನವೇ ರಾಜೀನಾಮೆಯ ಮಾತನಾಡಿದ ಪಂಜಾಬ್ ಸಿಎಂ

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗುಲಾಮ್ ನಬಿ ಆಜಾದ್, ಹರ್ಯಾಣಾ ಕಾಂಗ್ರೆಸ್ ನಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಆಯಕಟ್ಟಿನ ಉದ್ದೆಯಿಂದ ಕೆಳಹುದ್ದೆಯವರೆಗೂ ಎಲ್ಲದರಲ್ಲೂ ಬದಲಾವಣೆ ತರುವ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಉದ್ವೇಗಕ್ಕೊಳಗಾದ ತನ್ವರ್, "ನಿಮಗೆ ನನ್ನ ಕೆಲಸದ ಬಗ್ಗೆ ತೃಪ್ತಿ ಇಲ್ಲದಿದ್ದರೆ ನನಗೆ ಗುಂಡಿಕ್ಕಿ" ಎಂದರು.

ಹರ್ಯಾಣದ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲಿಂಡಿದ್ದರೆ, ಬಿಜೆಪಿ ಎಲ್ಲದರಲ್ಲೂ ಜಯಗಳಿಸಿತ್ತು.

English summary
Haryana Congress chief Ashok Tanwar in a meeting with The Congress's Haryana in-charge Ghulam Nabi Azad shouted and said, Shoot him if Congress is fed up by his performance in Lok Ssabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X