ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ರಾಜ್ಯಸಭೆ, ಕಾಂಗ್ರೆಸ್ ಶಾಸಕರು ರೆಸಾರ್ಟ್‌ನಿಂದ ವಾಪಸ್

|
Google Oneindia Kannada News

ಚಂಡೀಗಢ್, ಜೂನ್ 10; ಹರ್ಯಾಣ ರಾಜ್ಯದ 2 ಸ್ಥಾನಗಳು ಸೇರಿದಂತೆ 16 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಶುಕ್ರವಾರ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಅಂತಿಮ ಕ್ಷಣದ ಕಸರತ್ತಿನಲ್ಲಿ ತೊಡಗಿವೆ.

ಶುಕ್ರವಾರ ಬೆಳಗ್ಗೆ ಹರ್ಯಾಣದ ಕಾಂಗ್ರೆಸ್ ಶಾಸಕರು ನವದೆಹಲಿಯ ರೆಸಾರ್ಟ್‌ನಿಂದ ಚಂಡೀಗಢ್‌ಗೆ ಪ್ರಯಾಣ ಆರಂಭಿಸಿದರು. ಜೂನ್ 2ರಿಂದ ರಾಯ್‌ಪುರ್‌ನ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್ ಶಾಸಕರು ಗುರುವಾರ ದೆಹಲಿಗೆ ಆಗಮಿಸಿದ್ದರು.

ರಾಜ್ಯಸಭೆ ಚುನಾವಣೆ ಜಾತ್ಯತೀತತೆಯ ಸಾವು ಬದುಕಿನ ಪ್ರಶ್ನೆ: ಸಿದ್ದು ರಾಜ್ಯಸಭೆ ಚುನಾವಣೆ ಜಾತ್ಯತೀತತೆಯ ಸಾವು ಬದುಕಿನ ಪ್ರಶ್ನೆ: ಸಿದ್ದು

ಹರ್ಯಾಣ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಿಂದ ಅಜಯ್ ಮಾಕನ್, ಬಿಜೆಪಿಯಿಂದ ಕೃಷ್ಣ ಪನ್ವಾರ್ ಅಭ್ಯರ್ಥಿಗಳು. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಾರ್ತೀಕೇಯ ಶರ್ಮಾ ಕಣಕ್ಕಿಳಿದಿದ್ದಾರೆ.

ರಾಜ್ಯಸಭೆ ಚುನಾವಣೆ: ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಗೇಮ್ ಪ್ಲಾನ್..!ರಾಜ್ಯಸಭೆ ಚುನಾವಣೆ: ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಗೇಮ್ ಪ್ಲಾನ್..!

Rajya Sabha Election Haryana Congress MLAs Leaves Delhi

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 31, ಬಿಜೆಪಿ 40, ಜೆಜೆಪಿ 10 ಮತ್ತು ಪಕ್ಷೇತರರಾದ 7 ಶಾಸಕರು ಇದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಕಾಂಗ್ರೆಸ್ ತಮ್ಮ ಶಾಸಕರು, ಕೆಲವು ಪಕ್ಷೇತರ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿತ್ತು.

Oneindia Explainer: ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ? ಮತದಾನ ಸೂತ್ರ ಹೇಗೆ?Oneindia Explainer: ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ? ಮತದಾನ ಸೂತ್ರ ಹೇಗೆ?

ಕೆಲವು ಪಕ್ಷೇತರ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡುತ್ತೇವೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಹರ್ಯಾಣದ 2 ಕ್ಷೇತ್ರಗಳಿಗೆ 3 ಅಭ್ಯರ್ಥಿಗಳು ಕಣದಲ್ಲಿದ್ದು, ಯಾರಿಗೆ ಗೆಲುವು ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Rajya Sabha Election Haryana Congress MLAs Leaves Delhi

Recommended Video

Ganga River | ಗಂಗಾಜಲದ ವಿಶೇಷ ಗುಣಗಳು ಮತ್ತು ಅದರ ಪಾವಿತ್ರ್ಯತೆ ಬಗ್ಗೆ ನಿಮಗೆಷ್ಟು ಗೊತ್ತು? | OneIndia Kannada

ಶುಕ್ರವಾರ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. 57 ಸ್ಥಾನಗಳ ಪೈಕಿ 11 ರಾಜ್ಯಗಳಿಂದ 41 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಸ್ಥಾನಗಳಿಗೆ ಮಾತ್ರ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯ ಬಳಿಕ ಮತ ಎಣಿಕೆ ಆರಂಭವಾಗಲಿದೆ.

ಕರ್ನಾಟಕದ 4 ಸ್ಥಾನಗಳಿಗೆ 6 ಅಭ್ಯರ್ಥಿಗಳು ಕಣದಲ್ಲಿದ್ದು ರಾಜ್ಯಸಭೆಗೆ ಹೋಗುವವರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಎರಡು ಮತ್ತು ಬಿಜೆಪಿ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಸಹ ಶಾಸಕರ ಬಲ ಇಲ್ಲದಿದ್ದರೂ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

English summary
Haryana Congress MLAs leave for Chandigarh from Delhi. They will vote for the Rajya Sabha elections. MLA's reached Delhi from Chhattisgarh's Raipur resort.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X