ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣ ಜತೆ ನೀರು ಹಂಚಿಕೆಯಾದರೆ ಪಂಜಾಬ್ ಸುಟ್ಟು ಹೋಗುತ್ತದೆ: ಅಮರಿಂದರ್ ಎಚ್ಚರಿಕೆ

|
Google Oneindia Kannada News

ಚಂಡೀಗಡ, ಆಗಸ್ಟ್ 19: ಹರಿಯಾಣ ಮತ್ತು ಪಂಜಾಬ್ ನಡುವೆ ನದಿ ನೀರಿನ ಹಂಚಿಕೆಯ ವಿವಾದ ಭುಗಿಲೆದ್ದಿದೆ. ಸಟ್ಲೆಜ್-ಯಮುನಾ ಸಂಪರ್ಕ (ಎಸ್‌ವೈಎಲ್) ಕಾಲುವೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಹರಿಯಾಣದೊಂದಿಗೆ ನೀರು ಹಂಚಿಕೊಳ್ಳುವಂತೆ ಸೂಚಿಸಿದರೆ ಪಂಜಾಬ್ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಜತೆಗೆ ಮಂಗಳವಾರ ಸಭೆ ನಡೆಸಿದ ಅಮರಿಂದರ್ ಸಿಂಗ್, ಎಸ್‌ವೈಎಲ್ ಒಂದು ಭಾವನಾತ್ಮಕ ವಿಚಾರವಾಗಿದ್ದು, ಇದು ರಾಷ್ಟ್ರೀಯ ಭದ್ರತೆಯನ್ನು ಹದಗೆಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್‌ನಲ್ಲಿ ಕಳ್ಳಭಟ್ಟಿ ಸೇವಿಸಿ 38 ಜನರು ಸಾವು, ತನಿಖೆಗೆ ಆದೇಶಪಂಜಾಬ್‌ನಲ್ಲಿ ಕಳ್ಳಭಟ್ಟಿ ಸೇವಿಸಿ 38 ಜನರು ಸಾವು, ತನಿಖೆಗೆ ಆದೇಶ

ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದಂತೆ ಈ ಸಭೆ ನಡೆದಿದೆ. ಹಲವು ದಶಕಗಳಿಂದ ಬಾಕಿ ಉಳಿದಿರುವ ಎಚ್‌ವೈಎಲ್ ಕಾಲುವೆಯನ್ನು ಪೂರ್ಣಗೊಳಿಸುವ ವಿಚಾರವಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸುವಂತೆ ಕಳೆದ ತಿಂಗಳು ಸೂಚಿಸಿತ್ತು. ಹರಿಯಾಣ ಮತ್ತು ರಾಜಸ್ಥಾನಗಳೊಂದಿಗೆ ನೀರು ಹಂಚಿಕೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಪಂಜಾಬ್, ಈ ವಿಚಾರವಾಗಿ ಚರ್ಚಿಸಲು ಏನೂ ಉಳಿದಿಲ್ಲ ಎಂದಿದೆ. ಮುಂದೆ ಓದಿ.

ಕರ್ನಾಟಕ ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ ಎಷ್ಟಿದೆ? ಕರ್ನಾಟಕ ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ ಎಷ್ಟಿದೆ?

ಯೋಜನೆ ನಡೆಯಬೇಕಷ್ಟೇ

ಯೋಜನೆ ನಡೆಯಬೇಕಷ್ಟೇ

ಈ ವಿವಾದಕ್ಕೆ ಸಂಬಂಧಿಸಿದಂತೆ ಸೌಹಾರ್ದಯುತ ಪರಿಹಾರ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ ಖಟ್ಟರ್, ಎಸ್‌ವೈಎಲ್ ಕುರಿತಾದ ನಮ್ಮ ನಿಲುವನ್ನು ಕಾಪಾಡಿಕೊಂಡಿದ್ದೇವೆ. ಈ ಯೋಜನೆ ನಿರ್ಮಾಣವಾಗಬೇಕಿದೆ. ಇದನ್ನೇ ಸುಪ್ರೀಂಕೋರ್ಟ್ ಕೂಡ ಹೇಳಿದೆ ಎಂದಿದ್ದಾರೆ.

ಪಂಜಾಬ್ ಭಾಗದಲ್ಲಿ ನಡೆಯದ ಕಾಮಗಾರಿ

ಪಂಜಾಬ್ ಭಾಗದಲ್ಲಿ ನಡೆಯದ ಕಾಮಗಾರಿ

ಎಸ್‌ವೈಎಲ್ ಯೋಜನೆ ಪಂಜಾಬ್ ಮತ್ತು ಹರಿಯಾಣ ನಡುವೆ ಸುದೀರ್ಘ ಸಮಯದಿಂದ ವಿವಾದವಾಗಿಯೇ ಉಳಿದಿದೆ. 1982ರಲ್ಲಿಯೇ ಈ ಯೋಜನೆ ಆರಂಭವಾಗಿತ್ತು. ಆದರೆ ಪಂಜಾಬ್ ಭಾಗದ ನಿರ್ಮಾಣ ನನೆಗುದಿಗೆ ಬಿದ್ದಿದೆ.

ನಮ್ಮ ಪಾಲಿನ ನೀರು ನೀಡಿ

ನಮ್ಮ ಪಾಲಿನ ನೀರು ನೀಡಿ

ರಾವಿ-ಬಿಯಾಸ್ ನದಿ ನೀರಿನ ಹಂಚಿಕೆ ಪ್ರಮಾಣವನ್ನು ಮರುಮೌಲ್ಯಮಾಪನ ಮಾಡಬೇಕು ಎಂದು ಪಂಜಾಬ್ ಪಟ್ಟು ಹಿಡಿದಿದ್ದರೆ, ಎಸ್‌ವೈಎಲ್ ಕಾಲುವೆ ಪೂರ್ಣಗೊಳಿಸಿ ತಮ್ಮ ಪಾಲಿನ 3.5 ಮಿಲಿಯನ್ ಎಕರೆ ಅಡಿ (ಎಂಎಎಫ್) ನೀರನ್ನು ನೀಡುವಂತೆ ಹರಿಯಾಣ ವಾದಿಸುತ್ತಿದೆ.

ಮೊದಲು ಕಾಲುವೆ ಪೂರ್ಣಗೊಳ್ಳಲಿ

ಮೊದಲು ಕಾಲುವೆ ಪೂರ್ಣಗೊಳ್ಳಲಿ

1966ರಲ್ಲಿ ಹರಿಯಾಣ ಪ್ರತ್ಯೇಕ ರಾಜ್ಯವಾಗಿ ವಿಭಜನೆಯಾಗುವಾಗ 60:40ರ ಆಸ್ತಿ ಹಂಚಿಕೆಯಲ್ಲಿ ತನಗೆ ಸೂಕ್ತ ಪಾಲು ಸಿಕ್ಕಿರಲಿಲ್ಲ. ಹೀಗಾಗಿ ಯಮುನಾ ನದಿ ನೀರಿನಲ್ಲಿ ತನಗೂ ಹಕ್ಕಿದೆ ಎಂದು ಅಮರಿಂದರ್ ಸಿಂಗ್ ಪ್ರತಿಪಾದಿಸಿದ್ದಾರೆ. ಎಸ್‌ವೈಎಲ್ ಯೋಜನೆ ಮೊದಲು ಪೂರ್ಣಗೊಳ್ಳಲಿ. ಬಳಿಕ ನೀರು ಹಂಚಿಕೆ ಚರ್ಚೆಗಳನ್ನು ಮುಂದುವರಿಸಿ ಅಂತಿಮ ಸೂತ್ರವನ್ನು ಕಂಡುಕೊಳ್ಳಬಹುದು ಎಂದು ಸಚಿವ ಶೆಖಾವತ್ ಸಲಹೆ ನೀಡಿದ್ದಾರೆ.

English summary
CM Amarinder Singh said, Punjab will burn if asked to share water with Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X