ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ ಲಾಕ್ ಮಾರ್ಗಸೂಚಿ ಪ್ರಕಟ; ರಾತ್ರಿ ಕರ್ಫ್ಯೂ ಮುಂದುವರಿಕೆ

|
Google Oneindia Kannada News

ಚಂಡೀಗಢ್, ಜುಲೈ 31 : ಪಂಜಾಬ್ ಸರ್ಕಾರ ಅನ್ ಲಾಕ್ 3.0 ಮಾರ್ಗಸೂಚಿ ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 15,456. ಸಕ್ರಿಯ ಪ್ರಕರಣಗಳು 4,577.

ಶುಕ್ರವಾರ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅನ್ ಲಾಕ್ ಮಾರ್ಗಸೂಚಿ 3.0ಕ್ಕೆ ಅಂತಿಮ ಸಹಿ ಹಾಕಿದ್ದಾರೆ. ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಜಿಮ್, ಯೋಗ ತರಬೇತಿ ಕೇಂದ್ರಗಳನ್ನು ಆಗಸ್ಟ್ 5ರಿಂದ ತೆರೆಯಲು ಅನುಮತಿ ನೀಡಲಾಗಿದೆ.

ಪಂಜಾಬ್ ನಲ್ಲಿ ಪ್ರತಿನಿತ್ಯ 20,000 ಜನರಿಗೆ ಕೊವಿಡ್-19 ತಪಾಸಣೆ ಪಂಜಾಬ್ ನಲ್ಲಿ ಪ್ರತಿನಿತ್ಯ 20,000 ಜನರಿಗೆ ಕೊವಿಡ್-19 ತಪಾಸಣೆ

ಅನ್ ಲಾಕ್ 3.0 ಮಾರ್ಗಸೂಚಿಯಲ್ಲಿ ಪಂಜಾಬ್ ಸರ್ಕಾರ ಕೆಲವು ಬದಲಾವಣೆ ತಂದಿದೆ. ರಾಜ್ಯದಲ್ಲಿ 31ರ ತನಕ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಗೃಹ ಇಲಾಖೆ ರಾತ್ರಿ ಕರ್ಫ್ಯೂವನ್ನು ತೆಗೆದುಹಾಕಿತ್ತು.

ದೇಗುಲಗಳಲ್ಲಿ ಪ್ರಸಾದ ವಿತರಣೆ: ಗ್ರೀನ್ ಸಿಗ್ನಲ್ ಕೊಟ್ಟ ಪಂಜಾಬ್ ಸರ್ಕಾರದೇಗುಲಗಳಲ್ಲಿ ಪ್ರಸಾದ ವಿತರಣೆ: ಗ್ರೀನ್ ಸಿಗ್ನಲ್ ಕೊಟ್ಟ ಪಂಜಾಬ್ ಸರ್ಕಾರ

Punjab Unlock 3 Guidelines Night Curfew To Continue

ಕೆಲವು ವಿಚಾರಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತೀರ್ಮಾನ ಕೈಗೊಳ್ಳಲು ಸ್ವತಂತ್ರ್ಯ ನೀಡಿತ್ತು. ಆದರೆ, ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಹಾಕುವಂತಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿತ್ತು. ಈ ಹಿನ್ನಲೆಯಲ್ಲಿ ಪಂಜಾಬ್ ರಾತ್ರಿ ಕರ್ಫ್ಯೂ ಜಾರಿಗೆ ತಂದಿದೆ.

ಶಾಲೆ, ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಿಸಿದ ಅಸ್ಸಾಂ, ಪಂಜಾಬ್ಶಾಲೆ, ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಿಸಿದ ಅಸ್ಸಾಂ, ಪಂಜಾಬ್

ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಪಂಜಾಬ್‌ನಲ್ಲಿ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯ ತನಕ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆದರೆ, ಅಗತ್ಯ ಸೇವೆಗಳ ವಾಹನ ಸಂಚಾರಕ್ಕೆ ಈ ಕರ್ಫ್ಯೂ ಅನ್ವಯವಾಗುವುದಿಲ್ಲ.

ಪಂಜಾಬ್‌ನಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 15,456. ಇದುವರೆಗೂ ರಾಜ್ಯದಲ್ಲಿ 370 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

English summary
Punjab Government issued unlock 3.0 guidelines. Night curfew will continue in state from 11 pm to 5 am. Gyms and yoga institutes to open on 5th August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X