ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಸ್ಫೋಟಕ ಪತ್ತೆ: ಪಂಜಾಬ್‌ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್

|
Google Oneindia Kannada News

ಚಂಡೀಗಢ, ಡಿಸೆಂಬರ್‌ 03: ಪಂಜಾಬ್‌ನ ದೀನಾನಗರದಿಂದ ಪೊಲೀಸರು ಒಂದು ಕಿಲೋಗ್ರಾಂ ಆರ್‌ಡಿಎಕ್ಸ್ ಅನ್ನು ವಶಪಡಿಸಿಕೊಂಡ ಎರಡು ದಿನಗಳ ನಂತರ, ಗುರುದಾಸ್‌ಪುರ ಜಿಲ್ಲೆಯಲ್ಲಿ ಟಿಫಿನ್ ಬಾಂಬ್ ಮತ್ತು ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಪ್ರಾಯೋಜಿತ ಎರಡು ಭಯೋತ್ಪಾದನಾ ಘಟಕಗಳನ್ನು ಗುರುದಾಸ್‌ಪುರದಲ್ಲಿ ವಶಕ್ಕೆ ಪಡೆಯಲಾಗಿತ್ತು ಎಂದು ಕೂಡಾ ಶುಕ್ರವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ ಸೇಲಂಪುರ ಅರಾಯನ್ ಗ್ರಾಮದ ಬಳಿಯ ಟಿ-ಪಾಯಿಂಟ್‌ನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಠಾಣಾಧಿಕಾರಿ ಸದರ್ ಗುರುದಾಸ್‌ಪುರ್‌ ಅವರಿಗೆ ರಸ್ತೆ ಬದಿಯ ಪೊದೆಗಳಲ್ಲಿ ಅನುಮಾನಾಸ್ಪದ ಗೋಣಿಚೀಲವು ಲಭಿಸಿದೆ. ಪರಿಶೀಲನೆ ನಡೆಸಿದಾಗ ಅದರಲ್ಲಿ ಸ್ಪೋಟಕಗಳು ಪತ್ತೆಯಾಗಿದೆ ಎಂದು ಕೂಡಾ ಮಾಹಿತಿ ಲಭ್ಯವಾಗಿದೆ.

Punjabs Border Districts On High Alert After Another Set Of Explosives Found

ರಸ್ತೆ ಬದಿಯ ಪೊದೆಗಳಲ್ಲಿ ಅನುಮಾನಾಸ್ಪದ ಗೋಣಿಚೀಲ ಅನುಮಾನಾಸ್ಪದ ಗೋಣಿಚೀಲ ಲಭ್ಯವಾದ ಬಳಿಕ ಅದನ್ನು ಪರಿಶೀಲನೆ ನಡೆಸಿದಾಗ ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಅದರಲ್ಲಿ ಟಿಫಿನ್ ಬಾಂಬ್ ಅನ್ನು ಬಚ್ಚಿಟ್ಟಿರುವುದು ಕಂಡುಬಂದಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ತಿಳಿಸಿದ್ದಾರೆ. ಸ್ಫೋಟಕಗಳನ್ನು ಇರುವುದು ತಿಳಿಯುತ್ತಿದ್ದಂತೆ ಬಾಂಬ್ ಪತ್ತೆ ಮತ್ತು ವಿಲೇವಾರಿ ತಂಡಗಳಿಗೆ ತಿಳಿಸಲಾಗಿದೆ ಎಂದು ಕೂಡಾ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಹೇಳಿದರು.

ಗಡಿ ಜಿಲ್ಲೆಯಿಂದ ಆರ್‌ಡಿಎಕ್ಸ್, ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಪಿಸ್ತೂಲ್‌ಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಈಗ ಸ್ಪೋಟಕಗಳು ಲಭ್ಯವಾದ ಹಿನ್ನೆಲಯಿಂದಾಗಿ ಪಂಜಾಬ್ ಪೊಲೀಸರು, ವಿಶೇಷವಾಗಿ ಗಡಿ ಜಿಲ್ಲಾ ಪೊಲೀಸ್ ಪಡೆಗಳು ಕಟ್ಟೆಚ್ಚರದಲ್ಲಿದ್ದಾರೆ. ಉಪಮುಖ್ಯಮಂತ್ರಿ ಸುಖಿಂದರ್ ಸಿಂಗ್ ರಾಂಧವಾ ಅವರ ನಿರ್ದೇಶನದ ಮೇರೆಗೆ ರಾತ್ರಿ ವೇಳೆ ಅಧಿಕ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಡಿಜಿಪಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ತಿಳಿಸಿದರು. ಇನ್ನು ಗಡಿ ಜಿಲ್ಲೆಗಳಲ್ಲಿ ರಾತ್ರಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಲು ಹಲವಾರು ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಬಿಎಸ್‌ಎಫ್‌ ಡ್ರೋನ್‌ ಮೇಲೆ ಗುಂಡಿನ ದಾಳಿ

ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಅಮೃತಸರ ಸೆಕ್ಟರ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ತನ್ನ ಸೈನಿಕರು ಡ್ರೋನ್‌ನ ಮೇಲೆ ಗುಂಡು ಹಾರಿಸಿ ಅದನ್ನು ಹಿಂತಿರುಗುವಂತೆ ಮಾಡಿದ್ದಾರೆ ಎಂದು ಭಾರತದ ಗಡಿ ಭದ್ರತಾ ಪಡೆ ಬುಧವಾರ ತಿಳಿಸಿದೆ. ಅಧಿಕೃತ ಹೇಳಿಕೆಯಲ್ಲಿ, ನವೆಂಬರ್ 30 ಮತ್ತು ಡಿಸೆಂಬರ್ 1 ರ ಮಧ್ಯರಾತ್ರಿಯಲ್ಲಿ ಡ್ರೋನ್ ಶಬ್ದ ಕೇಳಿಸಿತು. ಆ ಡ್ರೋನ್‌ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ಬರುತ್ತಿತ್ತು. ಕೂಡಲೇ ನಮ್ಮ ಸಿಬ್ಬಂದಿಗಳು ಗುಂಡು ಹಾರಿಸಿದ್ದಾರೆ ಎಂದು ಬಿಎಸ್‌ಎಫ್ ತಿಳಿಸಿದೆ.

"ಡ್ರೋನ್ ಮೂಲಕ ಕಳ್ಳಸಾಗಣೆ ಮಾಡುವ ಎಎನ್‌ಇಗಳ (ರಾಷ್ಟ್ರ-ವಿರೋಧಿ ಅಂಶಗಳು) ಕಾರ್ಯಾಚರಣೆಯನ್ನು ಶಂಕೆ ಮಾಡಲಾಗಿದೆ. "ಇದಲ್ಲದೆ, 10 ಸೆಕೆಂಡುಗಳ ನಂತರ ಪಾಕ್ ಪ್ರದೇಶಕ್ಕೆ ಡ್ರೋನ್ ಹಿಂತಿರುಗಿದ ಶಬ್ದವು ಸೈನಿಕರಿಗೆ ಕೇಳಿಸಿದೆ," ಎಂದು ಕೂಡಾ ಬಿಎಸ್‌ಎಫ್ ಹೇಳಿದೆ. "ತಕ್ಷಣ, ಆಳ ಪ್ರದೇಶವನ್ನು ಸುತ್ತುವರಿಯಲಾಯಿತು, ಪೋಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಎಲ್ಲಾ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಡಿತಗೊಳಿಸಲಾಯಿತು. ಪ್ರದೇಶದಲ್ಲಿ ವ್ಯಾಪಕ ಹುಡುಕಾಟ ನಡೆಸಿದಾಗ, ದಾರವು ಇದ್ದ ಒಂದು ಕಪ್ಪು ಬಣ್ಣದ ಚೀಲ ಲಭಿಸಿದೆ," ಎಂದು ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Recommended Video

Mirage 2000 Fighter Jet : ಇನ್ನೂ ಏನ್ ಏನ್ ಕಳ್ಳತನ ಮಾಡ್ತಾರೋ! | Oneindia Kannada

English summary
Punjab's Border Districts On High Alert After Another Set Of Explosives Found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X