ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಲ್ಲಿ ಮಾಸ್ಕ್ ಧರಿಸದಿದ್ದರೆ 10,000 ರೂ. ದಂಡ!

|
Google Oneindia Kannada News

ಚಂಡೀಘರ್, ಜೂನ್.03: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇದರ ನಡುವೆ ಮದುವೆಯಾದ ನವಜೋಡಿ ಮಾಸ್ಕ್ ಧರಿಸದ್ದಕ್ಕೆ 10,000 ರೂಪಾಯಿ ದಂಡ ವಿಧಿಸಲಾಗಿದೆ.

ತಂದೆ-ತಾಯಿ ವಿರೋಧದ ನಡುವೆ ಮದುವೆಯಾದ ನವದಂಪತಿಯು ಪೋಷಕರಿಂದ ರಕ್ಷಣೆ ನೀಡುವಂತೆ ಪಂಜಾಬ್-ಹರಿಯಾಣ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಹರಿಪಾಲ್ ವರ್ಮಾ ಅರ್ಜಿದಾರರಿಗೆ 10,000 ರೂಪಾಯಿ ದಂಡ ಹಾಕಿದ್ದಾರೆ.

ಮುಖಕ್ಕೆ ಬಂತು ಮಾಸ್ಕ್: ಲಿಪ್ ಸ್ಟಿಕ್ ಬದಲು ಐ-ಮೇಕಪ್ ನತ್ತ ಹೆಂಗಳೆಯರ ಚಿತ್ತ!ಮುಖಕ್ಕೆ ಬಂತು ಮಾಸ್ಕ್: ಲಿಪ್ ಸ್ಟಿಕ್ ಬದಲು ಐ-ಮೇಕಪ್ ನತ್ತ ಹೆಂಗಳೆಯರ ಚಿತ್ತ!

ನವದಂಪತಿ ಸಲ್ಲಿಸಿದ ಅರ್ಜಿಯಲ್ಲಿ ವಿವಾಹದ ಫೋಟೋಗಳನ್ನು ಲಗತ್ತಿಸಲಾಗಿತ್ತು. ಈ ಫೋಟೋದಲ್ಲಿ ದಂಪತಿಯು ಮಾಸ್ಕ್ ಧರಿಸದಿರುವುದನ್ನು ಗಮನಿಸಿದ ಹೈಕೋರ್ಟ್ ನ್ಯಾ.ಹರಿಪಾಲ್ ವರ್ಮಾ, ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸದ ಹಿನ್ನೆಲೆ ದಂಡವನ್ನು ವಿಧಿಸಿದ್ದಾರೆ.

 punjab: Runaway couple fined 10,000 for not wear mask at marriage

15 ದಿನದೊಳಗೆ ದಂಡ ವಸೂಲಿಗೆ ಸೂಚನೆ:

ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸಿದ ನವಜೋಡಿಗೆ 10,000 ದಂಡದ ಮೊತ್ತವನ್ನು ಪಾವತಿಸಲು ಹೈಕೋರ್ಟ್ 15 ದಿನಗಳ ಕಾಲಾವಕಾಶವನ್ನು ನೀಡಿದೆ. ಮುಂದಿನ 15 ದಿನಗಳ ಒಳಗೆ ಹೋಶಿರ್ಪುರ್ ಜಿಲ್ಲಾಧಿಕಾರಿಗೆ ದಂಡದ ಮೊತ್ತವನ್ನು ಪಾವತಿಸಬೇಕು. ಆ ದಂಡದ ಹಣವನ್ನು ಜಿಲ್ಲಾಡಳಿತವರು ಬಡವರಿಗೆ ಉಚಿತವಾಗಿ ಮಾಸ್ಕ್ ವಿತರಿಸುವುದಕ್ಕೆ ವಿನಿಯೋಗಿಸಿಕೊಳ್ಳಬೇಕು ಎಂದು ಕೋರ್ಟ್ ಸೂಚಿಸಿದೆ.

ಪಂಜಾಬ್ ನಲ್ಲಿ ಪ್ರತಿಯೊಬ್ಬರು ಮನೆಗಳಿಂದ ಹೊರಗೆ ಹೊರಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂಬ ನಿಯಮವಿದೆ. ರಾಜ್ಯ ಆರೋಗ್ಯ ಕಾರ್ಯದರ್ಶಿಗಳು ಈ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಈ ಮೊದಲು ನೀಡಲಾಗಿತ್ತು.

English summary
Runaway couple approaches court for protection, but court fined 10,000 for not wear mask at marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X