ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆ: ಚುನಾವಣಾ ಅಧಿಕಾರಿಗಳಿಂದ ಮಾರ್ಗಸೂಚಿ ಬಿಡುಗಡೆ

|
Google Oneindia Kannada News

ಚಂಡೀಗಢ, ಫೆಬ್ರವರಿ 17: ಪಂಜಾಬ್‌ ವಿಧಾನಸಭೆ ಚುಣಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ನಡುವೆ ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಎಸ್ ಕರುಣಾ ರಾಜು ಬುಧವಾರ ಪಂಜಾಬ್‌ನಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಎಸ್ ಕರುಣಾ ರಾಜು, "ಮತಗಟ್ಟೆ ರಚನೆ ಪ್ರಮಾಣ ಪತ್ರ, ವಾಸ, ಊಟ, ತಿಂಡಿ ಹಾಗೂ ಸೂಕ್ಷ್ಮ ಪರಿಕರಗಳ ನಿಯೋಜನೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ," ಎಂದು ತಿಳಿಸಿದ್ದಾರೆ.

 'ಭಿಯಾಗಳು': ಪ್ರಿಯಾಂಕ ಗಾಂಧಿ ಸಮ್ಮುಖದಲ್ಲಿ ಸಿಎಂ ಚನ್ನಿ ವಿವಾದಾತ್ಮಕ ಹೇಳಿಕೆ 'ಭಿಯಾಗಳು': ಪ್ರಿಯಾಂಕ ಗಾಂಧಿ ಸಮ್ಮುಖದಲ್ಲಿ ಸಿಎಂ ಚನ್ನಿ ವಿವಾದಾತ್ಮಕ ಹೇಳಿಕೆ

"ಹಾಗೆಯೇ, ವೀಕ್ಷಕರು, ವಿಡಿಯೋ ಕ್ಯಾಮೆರಾಗಳು, ಸ್ಟಿಲ್ ಕ್ಯಾಮೆರಾಗಳು, ಮತದಾನ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಮೊದಲಾದ ವ್ಯವಸ್ಥೆ ಮಾಡುವಂತೆಯೂ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಚುನಾವಣಾ ಸಿಬ್ಬಂದಿ, ಸೆಕ್ಟರ್ ಅಧಿಕಾರಿಗಳು, ಇವಿಎಂ ನಿರ್ವಹಣೆ, ಎಫ್‌ಎಸ್‌ಟಿಗಳು, ಎಸ್‌ಎಸ್‌ಟಿ, ವಿಎಸ್‌ಟಿಗಳು, ಎಫ್‌ಎಸ್‌ಟಿ ನಂತಹ ಎಲ್ಲಾ ಚುನಾವಣಾ ವೆಚ್ಚ ಮಾನಿಟರಿಂಗ್ ತಂಡವನ್ನು ಬಲಪಡಿಸುವ ಜೊತೆಗೆ ಅವರಿಗೆ ತರಬೇತಿ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ತಿಳಿಸಲಾಗಿದೆ.

Punjab Poll: Punjab Election Officer Issues SOPs for 72 Hours Before Polling Day

ಎಫ್‌ಎಸ್, ಎಸ್‌ಎಸ್‌ಟಿಗಳು, ಬೂತ್ ಮಟ್ಟದ ಜಾಗೃತಿ ಗುಂಪಿನಿಂದ ನೆರವು, ವೆಚ್ಚದ ಮೇಲ್ವಿಚಾರಣೆಗೆ ವಿಶೇಷ ಗಮನ ಹರಿಸುವ ಪ್ರದೇಶ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆ ಅನುಷ್ಠಾನದ ಮೂಲಕ ನಿಗಾ ಮತ್ತು ಕಣ್ಗಾವಲು ತೀವ್ರಗೊಳಿಸುವಂತೆ ಹೇಳಿದ್ದಾರೆ.

ವಾಹನ ಅನುಮತಿಗಾಗಿ ಅವರಿಗೆ ನಿರ್ದೇಶನ ನೀಡುವುದರ ಜೊತೆಗೆ ಎಲ್ಲಾ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಖಾತರಿಪಡಿಸಬೇಕು. ಮತದಾರರ ಶಿಕ್ಷಣ ಶಿಬಿರಗಳನ್ನು ಆಯೋಜಿಸಬೇಕು ಎಂದು ಕೂಡಾ ತಿಳಿಸಿದ್ದಾರೆ.

ದೇಶದಲ್ಲಿ ವಿಧಾನಸಭೆ ಚುನಾವಣೆ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14ರಂದು ವಿಧಾನಸಭೆ ಚುನಾವಣೆಯ ಎರಡು ಹಂತಗಳಮತದಾನ ಪ್ರಕ್ರಿಯೆ ನಡೆದಿದೆ. ಇನ್ನು 20, 23 ಮತ್ತು ಮಾರ್ಚ್ 3, 7 ರಂದು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಚ ರಾಜ್ಯಗಳಲ್ಲಿ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಶಿರೋಮಣಿ ಅಕಾಲಿದಳವು ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. (ಒನ್‌ಇಂಡಿಯಾ ಸುದ್ದಿ)

Recommended Video

MP Supriya Sule gave a bashing reply to Tejasvi Surya in Parliament | Oneindia Kannada

English summary
Punjab Poll: Punjab Election Officer issues SOPs for 72 hours before polling day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X