ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಚುನಾವಣೆ: ಕ್ಯಾಪ್ಟನ್‌ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

|
Google Oneindia Kannada News

ಚಂಡೀಗಢ, ಜನವರಿ 23: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಪಂಜಾಬ್ ಲೋಕ ಕಾಂಗ್ರೆಸ್‌ನ 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದಾರೆ. "ನಾವು ಮೊದಲ ಪಟ್ಟಿಯಲ್ಲಿ 22 ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದೇವೆ," ಎಂದು ಅಮರಿಂದರ್ ಸಿಂಗ್‌ ಹೇಳಿದ್ದಾರೆ.

"ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. 22 ಅಭ್ಯರ್ಥಿಗಳನ್ನು ನಾವು ಈಗ ಬಿಡುಗಡೆ ಮಾಡಿದ್ದೇವೆ. ಮಜಾದಿಂದ 2 ಅಭ್ಯರ್ಥಿಗಳು, ದೋಬಾದಿಂದ 3 ಮತ್ತು ಮಾಲ್ವಾ ಪ್ರದೇಶದಿಂದ 17 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಎರಡನೇ ಪಟ್ಟಿಯನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ," ಎಂದು ತಿಳಿಸಿದ್ದಾರೆ.

 ಪಂಜಾಬಿ ಗಾಯಕರು ಕಣಕ್ಕೆ: ಮತದಾರರ ಓಲೈಕೆಗೆ ಯತ್ನ ಪಂಜಾಬಿ ಗಾಯಕರು ಕಣಕ್ಕೆ: ಮತದಾರರ ಓಲೈಕೆಗೆ ಯತ್ನ

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಎಸ್‌ಎಡಿ (ಸಂಯುಕ್ತ) ಜೊತೆಗಿನ ಮೈತ್ರಿಯ ಭಾಗವಾಗಿ ಪಂಜಾಬ್ ಲೋಕ ಕಾಂಗ್ರೆಸ್ ಪ್ರಸ್ತುತ ರಾಜ್ಯದಲ್ಲಿನ 117 ಸ್ಥಾನಗಳಲ್ಲಿ 37 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಪಕ್ಷಕ್ಕೆ ಇನ್ನೂ ಐದು ಸ್ಥಾನಗಳ ಕುರಿತು ಚರ್ಚೆಗಳು ನಡೆಯುತ್ತಿದೆ. ಪಂಜಾಬ್ ಲೋಕ ಕಾಂಗ್ರೆಸ್‌ನ 37 ಸ್ಥಾನಗಳಲ್ಲಿ ಗರಿಷ್ಠ 26 ಸ್ಥಾನಗಳು ಮಾಲ್ವಾ ಪ್ರದೇಶದಲ್ಲಿ ಬರುತ್ತದೆ. ಕ್ಯಾಪ್ಟನ್‌ ಅಮರಿಂದರ್ ಏಕಾಂಗಿಯಾಗಿ 2007ರಲ್ಲಿ ಕಾಂಗ್ರೆಸ್‌ಗೆ ಗೇಮ್‌ ಚೇಂಜರ್‌ ಆಗಿದ್ದರು.

Punjab Poll: Former CM Amarinder’s Party Announces First List of 22 Candidates

ಕಾಂಗ್ರೆಸ್‌ನಲ್ಲಿ ವೈಮನಸ್ಸು ಉಂಟಾಗಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮರಿಂದರ್‌ ಸಿಂಗ್‌ ಬಳಿಕ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈಗ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

 ಪಂಜಾಬ್‌ನಲ್ಲಿ ಎಎಪಿ ವೇಗವಾಗಿ ಮುನ್ನಡೆಯುತ್ತಿದೆ ಎಂದ ಕಾಂಗ್ರೆಸ್‌ ಸಮೀಕ್ಷೆ! ಪಂಜಾಬ್‌ನಲ್ಲಿ ಎಎಪಿ ವೇಗವಾಗಿ ಮುನ್ನಡೆಯುತ್ತಿದೆ ಎಂದ ಕಾಂಗ್ರೆಸ್‌ ಸಮೀಕ್ಷೆ!

ಅಮರಿಂದರ್‌ ಪಕ್ಷದ ಪಟ್ಟಿಯಲ್ಲಿ ಯಾರಿದ್ದಾರೆ?

ಅಮರಿಂದರ್‌ ಪಕ್ಷದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಪಿಎಲ್‌ಸಿ ನಾಯಕ, "ಈ ಎಲ್ಲಾ ಅಭ್ಯರ್ಥಿಗಳು ಪ್ರಬಲ ರಾಜಕೀಯ ಅರ್ಹತೆಗಳನ್ನು ಹೊಂದಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಚಿರಪರಿಚಿತ ಮುಖಗಳು," ಎಂದು ಹೇಳಿದ್ದಾರೆ. ಈ ಮೊದಲ ಪಟ್ಟಿಯಲ್ಲಿ ಒಬ್ಬ ಮಹಿಳೆ ಇದ್ದಾರೆ. ಮಾಜಿ ಎಸ್‌ಎಡಿ ಶಾಸಕಿ ಮತ್ತು ದಿವಂಗತ ಡಿಜಿಪಿ ಇಝಾರ್ ಆಲಂ ಖಾನ್‌ರ ಪತ್ನಿ ಫರ್ಜಾನಾ ಆಲಂ ಖಾನ್ ಮಾಲ್ವಾ ಪ್ರದೇಶದ ಮಲೇರ್‌ಕೋಟ್ಲಾದಿಂದ ಸ್ಪರ್ಧಿಸಲಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ತವರು ಕ್ಷೇತ್ರವಾದ ಪಟಿಯಾಲ ಅರ್ಬನ್‌ನಿಂದ ಸ್ಪರ್ಧಿಸುವ ನಿರ್ಧಾರವನ್ನು ಶನಿವಾರವೇ ಘೋಷಿಸಿದ್ದಾರೆ.

ಮೊದಲ ಪಟ್ಟಿಯಲ್ಲಿ ಇತರ ಎಂಟು ಜಾಟ್ ಸಿಖ್‌ಗಳಿದ್ದಾರೆ. ನಾಲ್ವರು ಎಸ್‌ಸಿ ಸಮುದಾಯಕ್ಕೆ, ಮೂವರು ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದರೆ. ಐವರು ಹಿಂದೂ ಸಮುದಾಯವರು ಕೂಡಾ ಇದ್ದಾರೆ. ಈ ಪೈಕಿ ಮೂವರು ಪಂಡಿತರು ಮತ್ತು ಇಬ್ಬರು ಅಗರ್‌ವಾಲ್‌ಗಳು ಆಗಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಮತ್ತು ಫರ್ಜಾನಾ ಆಲಂ ಜೊತೆಗೆ ಮಾಲ್ವಾ ಪ್ರದೇಶದ ಇನ್ನೊಬ್ಬ ಪ್ರಮುಖ ಅಭ್ಯರ್ಥಿ ಎಂಸಿ ಪಟಿಯಾಲದ ಪ್ರಸ್ತುತ ಮೇಯರ್, ಸಂಜೀವ್ ಶರ್ಮಾ ಅಲಿಯಾಸ್ ಬಿಟ್ಟು ಶರ್ಮಾ ಕೂಡಾ ಸ್ಪರ್ಧಿಸಲಿದ್ದಾರೆ. ಇವರು ಹಲವಾರು ವರ್ಷಗಳಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಶರ್ಮಾ ಪಟಿಯಾಲ ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ.

ಮಾಜಿ ಪಿಪಿಸಿಸಿ ಕಾರ್ಯದರ್ಶಿ, ಮಾಜಿ ಅಧ್ಯಕ್ಷ ಸಹಕಾರಿ ಬ್ಯಾಂಕ್ ಪಂಜಾಬ್ ಮತ್ತು ಪಿಎಲ್‌ಸಿ ಪ್ರಧಾನ ಕಾರ್ಯದರ್ಶಿ ಕಮಲದೀಪ್ ಸೈನಿ ಖರಾರ್‌ನ ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿದೆ. ಲೂಧಿಯಾನದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಮತ್ತು ಪ್ರಸ್ತುತ ಪಿಎಲ್‌ಸಿ ಜಿಲ್ಲಾ ಅಧ್ಯಕ್ಷರಾಗಿರುವ ಜಗಮೋಹನ್ ಶರ್ಮಾ ಲೂಧಿಯಾನ ಪೂರ್ವದಲ್ಲಿ ಸ್ಪರ್ಧಿಸಲಿದ್ದಾರೆ. ಲುಧಿಯಾನ ಸೌತ್‌ನಲ್ಲಿ ಎಸ್‌ಎಡಿ ಸರ್ಕಾರದ ಮಾಜಿ ಸಹಕಾರ ಸಚಿವರ ಪುತ್ರ ಸತೀಂದರ್‌ಪಾಲ್ ಸಿಂಗ್ ತಾಜ್‌ಪುರಿ ಪಿಎಲ್‌ಸಿ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದಾರೆ. ಮಾನ್ಸಾದಿಂದ ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಮಾಜಿ ಶಾಸಕ ಮತ್ತು ಲೂಧಿಯಾನದ ಮಾಜಿ ಉಪ ಮೇಯರ್ ಪ್ರೇಮ್ ಮಿತ್ತಲ್ ಆಟಮ್‌ನಗರದಿಂದ ಸ್ಪರ್ಧಿಸಲಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Punjab Elections 2022: Former CM Amarinder Singh's party announces first list of 22 candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X