ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಆಗಲು ಯಾರು ಅರ್ಹ?: ಸೋನು ಸೂದ್‌ ವಿಡಿಯೋ ಹಂಚಿದ ಪಂಜಾಬ್‌ ಕಾಂಗ್ರೆಸ್‌

|
Google Oneindia Kannada News

ಚಂಡೀಗಢ, ಜನವರಿ 18: ಕಾಂಗ್ರೆಸ್ ಸೋಮವಾರ ಒಂದು ಕಿರು ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ನಟ ಸೋನು ಸೂದ್‌, "ನಿಜವಾದ ಸಿಎಂ" ಹುದ್ದೆಗೆ ಅರ್ಹರು ಯಾರು ಎಂಬ ಬಗ್ಗೆ ಮಾತನಾಡಿದ್ದಾರೆ. ನಿಜವಾಗಿ ಸಿಎಂ ಹುದ್ದೆಗೆ ಅರ್ಹರಾಗಿರುವವರು ತಮ್ಮನ್ನು ತಾವು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಳ್ಳುವವರು ಅಲ್ಲ ಎಂದು ಕೂಡಾ ಸೋನು ಸೂದ್‌ ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ 36 ಸೆಕೆಂಡ್‌ಗಳ ವೀಡಿಯೊವನ್ನು ಪಂಜಾಬ್ ಕಾಂಗ್ರೆಸ್ ಮರುಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಇರುವ ದೃಶ್ಯಗಳನ್ನು ಕೂಡಾ ಸೇರ್ಪಡೆ ಮಾಡಲಾಗಿದೆ.

ಉತ್ತರಾಖಂಡ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ಆರ್ಯ ಬಿಜೆಪಿಗೆ ಸೇರ್ಪಡೆಉತ್ತರಾಖಂಡ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ಆರ್ಯ ಬಿಜೆಪಿಗೆ ಸೇರ್ಪಡೆ

ಇತ್ತೀಚೆಗೆ ನಟ ಸೋನು ಸೂದ್‌ರ ಸಹೋದರಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂದಿನ ಫೆಬ್ರವರಿ 20 ರ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್‌ ಈ ವಿಡಿಯೋವನ್ನು ಹಂಚಿಕೊಂಡಿದೆ. ಅದು ಕೂಡಾ ಮುಖ್ಯವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಕ್ಷದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಊಹಾಪೋಹಗಳ ನಡುವೆ ಈ ವಿಡಿಯೋವನ್ನು ಕಾಂಗ್ರೆಸ್‌ ಹಂಚಿಕೊಂಡಿದೆ.

Punjab Poll: Congress Tweets Actor Sonu Sood’s Video on ‘Who Should Be CM in Punjab

ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾಗಿರುವ ಚನ್ನಿ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಹೇಳಿದ್ದರು. ಹಾಗೆ ಮಾಡುವುದರಿಂದ ಪಕ್ಷಕ್ಕೆ ಚುನಾವಣಾ ಲಾಭವನ್ನು ಗಳಿಸಲು ಅನುಕೂಲ ಮಾಡಿಕೊಟ್ಟಿರುವುದು ಈ ಹಿಂದೆಯೂ ಕಂಡುಬಂದಿದೆ ಎಂಬುವುದನ್ನು ಕೂಡಾ ಗುರುತಿಸಿದ್ದರು. ಆದರೆ, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿಲ್ಲ. ಪಕ್ಷವು "ಸಾಮೂಹಿಕ ನಾಯಕತ್ವ" ಅಡಿಯಲ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಕಾಂಗ್ರೆಸ್‌ ಹೇಳಿದೆ.

ವಿಡಿಯೋದಲ್ಲಿ ಸೋನು ಸೂದ್‌ ಹೇಳುವುದು ಏನು?

ವೀಡಿಯೊದಲ್ಲಿ ಸೋನು ಸೂದ್‌, "ನಿಜವಾದ ಸಿಎಂ (ಮುಖ್ಯಮಂತ್ರಿ) ಅಥವಾ ರಾಜನನ್ನು ಬಲವಂತವಾಗಿ ಕುರ್ಚಿಗೆ ತರಲಾಗುತ್ತದೆ. ಅವರು ಹೋರಾಟ ಮಾಡುವ ಅಗತ್ಯವಿಲ್ಲ ಮತ್ತು ನಾನು ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ನಾನು ಅದಕ್ಕೆ ಅರ್ಹನಾಗಿದ್ದೆ ಎಂದು ಹೇಳುವ ಅಗತ್ಯವಿಲ್ಲ," ಎಂದಿದ್ದಾರೆ. "ಅವನು (ಮುಖ್ಯಮಂತ್ರಿ ಹುದ್ದೆಗೆ ಬರುವ ವ್ಯಕ್ತಿ) ಹಿಂದಿನ ಬೆಂಚರ್ ಆಗಿರಬೇಕು ಮತ್ತು ಅವನನ್ನು ಹಿಂದಿನಿಂದ ಕರೆತಂದು ನೀವು ಇದಕ್ಕೆ ಅರ್ಹರು ಮತ್ತು ನೀವು (ಮುಖ್ಯಮಂತ್ರಿ) ಆಗುತ್ತೀರಿ ಎಂದು ಹೇಳಬೇಕು. ಆ ವ್ಯಕ್ತಿ ಮುಖ್ಯಮಂತ್ರಿ ಆದಾಗ ದೇಶವನ್ನು ಬದಲಾಯಿಸಬಹುದು," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋವನ್ನು ರೀಟ್ವೀಟ್‌ ಮಾಡಿರುವ ಕಾಂಗ್ರೆಸ್‌, "ಪಂಜಾಬ್ ಹೇಳುತ್ತಿದೆ, ಜನರು ಕೈಗೆ (ಕಾಂಗ್ರೆಸ್‌ ಚಿಹ್ನೆ) ಗೆ ಬೆಂಬಲ ನೀಡುತ್ತಾರೆ ಎಂದು," ಉಲ್ಲೇಖ ಮಾಡಿದೆ. ಇನ್ನು ಈ ವಿಡಿಯೋದಲ್ಲಿ ಸೋನು ಸೂದ್‌ ಮಾತಿನ ಬಳಿಕ ಪಂಜಾಬ್‌ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಇರುವ ದೃಶ್ಯಗಳು ಕಾಣಿಸಿಕೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಚನ್ನಿ ಅವರನ್ನು ಪಂಜಾಬ್ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

ನಟ ಸೋನು ಸೂದ್‌ರ ಸಹೋದರಿ ಮಾಳವಿಕಾ ಸೂದ್‌ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಮಾಳವಿಕಾ ಸೂದ್ ಮೋಗಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಚುನಾವಣೆಗೆ ಮುಂಚಿತವಾಗಿ ನಡೆದ ಈ ಬೆಳವಣಿಗೆಯನ್ನು "ಗೇಮ್ ಚೇಂಜರ್" ಎಂದು ಬಣ್ಣಿಸಿದ್ದಾರೆ. ಇನ್ನು ತಾನು ಕಾಂಗ್ರೆಸ್‌ ಸೇರ್ಪಡೆ ಆಗಿರುವ ಬಗ್ಗೆ ಮಾತನಾಡಿದ ಮಾಳವಿಕಾ ಸೂದ್, "ಜನಸೇವೆಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ರಾಜಕೀಯ ಧುಮುಕಿದ್ದೇನೆ," ಎಂದು ತಿಳಿಸಿದ್ದಾರೆ.

Recommended Video

IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ, ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

English summary
Congress tweets actor Sonu Sood’s video on ‘who should be CM in Punjab Ahead of Punjab poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X