ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

|
Google Oneindia Kannada News

ಚಂಡೀಗಢ, ಜನವರಿ 27: ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 27 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ವಿಜಯ್ ಸಂಪ್ಲಾರನ್ನು ಬಿಜೆಪಿ ಫಗ್ವಾರಾದಲ್ಲಿ ಕಣಕ್ಕಿಳಿಸಲು ನಿರ್ಧಾರ ಮಾಡಿದೆ.

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಇಬ್ಬರು ಹಾಲಿ ಕಾಂಗ್ರೆಸ್ ಶಾಸಕರಾದ ಫತೇ ಜಂಗ್ ಬಾಜ್ವಾ ಮತ್ತು ಹರ್ಜೋತ್ ಕಮಲ್‌ಗೆ ಕೂಡಾ ಬಿಜೆಪಿ ಟಿಕೆಟ್‌ ನೀಡಿದೆ. ಫತೇ ಜಂಗ್ ಬಾಜ್ವಾ ಬಟಾಲಾದಲ್ಲಿ ಹಾಗೂ ಹರ್ಜೋತ್ ಕಮಲ್‌ ಮೋಗಾ ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಹರ್ಜೋತ್ ಕಮಲ್‌ ಮೋಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದರು. ಬಾಜ್ವಾ ಖಾಡಿಯನ್ ಶಾಸಕರಾಗಿದ್ದಾರೆ. ಆದರೆ ಈ ಬಾರಿ ಬಿಜೆಪಿಯಿಂದ ಬಟಾಲಾದಲ್ಲಿ ಸ್ಫರ್ಧಿಸಲಿದ್ದಾರೆ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪರತಾಪ್ ಸಿಂಗ್ ಬಾಜ್ವಾ ಅವರ ಸಹೋದರ ಫತೇ ಜಂಗ್ ಬಾಜ್ವಾ ಆಗಿದ್ದಾರೆ.

ಯುಪಿ: 89 ಅಭ್ಯರ್ಥಿಗಳ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆಯುಪಿ: 89 ಅಭ್ಯರ್ಥಿಗಳ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ

ಆನಂದಪುರ ಸಾಹಿಬ್‌ನಿಂದ ತಮ್ಮ ಪುತ್ರ ಅರವಿಂದ್ ಮಿತ್ತಲ್‌ಗೆ ಟಿಕೆಟ್ ಬಯಸಿದ್ದ ಮಾಜಿ ಸಚಿವ ಮದನ್ ಮೋಹನ್ ಮಿತ್ತಲ್ ಸೇರಿದಂತೆ ಕೆಲವು ಹಿರಿಯ ಬಿಜೆಪಿ ಮುಖಂಡರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಬದಲಾಗಿ, ಪಕ್ಷವು ಕೆಳಮಟ್ಟದ ಅಭ್ಯರ್ಥಿ ಪರ್ಮಿಂದರ್ ಶರ್ಮಾರನ್ನು ಈ ಸ್ಥಾನದಿಂದ ಕಣಕ್ಕಿಳಿಸಿದೆ.

Punjab Poll: BJP Releases Second List of 27 Candidates

ಪಕ್ಷದ ಸಕ್ರಿಯ ಸಿಖ್ ಅಭ್ಯರ್ಥಿಯಾದ ಹರ್ಜಿತ್ ಗ್ರೆವಾಲ್‌ರಿಗೆ ರಾಜಪುರ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಲಾಗಿದೆ. ಅಲ್ಲಿ ಪಕ್ಷವು ಹಿಂದಿನ ಎರಡು ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ್ ಕುಮಾರ್ ಜಗ್ಗರಿಗೆ ಟಿಕೆಟ್‌ ನೀಡಿದೆ. ಬುಧವಾರ ಸಂಜೆಯಷ್ಟೇ ಜಗ್ಗ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಬಿಜೆಪಿಯು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಮತ್ತು ಮಾಜಿ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಇಕ್ಬಾಲ್ ಸಿಂಗ್ ಲಾಲ್ಪುರರಿಗೆ ರೋಪರ್‌ ಕ್ಷೇತ್ರದ ಟಿಕೆಟ್‌ ನೀಡಿದೆ.

ಬಿಜೆಪಿಯ 27 ಅಭ್ಯರ್ಥಿಗಳು ಯಾರು?

ಭೋವಾ ಕ್ಷೇತ್ರದಿಂದ ಸೀಮಾ ಕುಮಾರಿ, ಗುರುದಾಸ್‌ಪುರ ಕ್ಷೇತ್ರದಿಂದ ಪರ್ಮಿಂದರ್ ಸಿಂಗ್ ಗಿಲ್, ಡೇರಾ ಬಾಬಾ ನಾನಕ್‌ನಲ್ಲಿ ಕುಲದೀಪ್ ಸಿಂಗ್ ಕಹ್ಲೋನ್, ಮಜಿತಾದಲ್ಲಿ ಪರ್ದೀಪ್ ಸಿಂಗ್ ಭುಲ್ಲರ್, ಅಮೃತಸರ ಪಶ್ಚಿಮದಲ್ಲಿ ಕುಮಾರ್ ಅಮಿತ್ ವಾಲ್ಮೀಕಿ, ಅಟ್ಟಾರಿಯಲ್ಲಿ ಬಲ್ವಿಂದರ್ ಕೌರ್, ಶಾಕೋಟ್‌ನಲ್ಲಿ ನರೇಂದ್ರಪಾಲ್ ಸಿಂಗ್ಬ್ ಚನ್ನಿ, ಕರ್ತಾರ್‌ಪುರದಲ್ಲಿ ಸುರಿಂದರ್ ಮಾಹೆ, ಜಲಂಧರ್ ಕಂಟೋನ್ಮೆಂಟ್‌ನಿಂದ ಸರಬ್ಜಿತ್ ಸಿಂಗ್ ಮಕ್ಕರ್, ಚಮ್ಕೌರ್ ಸಾಹಿಬ್‌ನಲ್ಲಿ ದರ್ಶನ್ ಸಿಂಗ್ ಶಿವಜೋತ್ ಬಿಜೆಪಿ ಅಭ್ಯರ್ಥಿಗಳಾಗಿ ಸ್ಫರ್ಧಿಸಲಿದ್ದಾರೆ.

ಮೊಹಾಲಿದಲ್ಲಿ ಸಂಜೀವ್ ವಶಿಷ್ಟ್, ಸಮ್ರಾಲಾದಲ್ಲಿ ರಜನೀತ್ ಸಿಂಗ್ ಗೆಹ್ಲೆವಾಲ್, ಲೂಧಿಯಾನ ಉತ್ತರದಲ್ಲಿ ಪರ್ವೀನ್ ಬನ್ಸಾಲ್, ಗುರು ಹರ್ ಸಹಾಯ್‌ನಲ್ಲಿ ಗುರ್‌ಪರ್ವೇಜ್‌ ಸಿಂಗ್ ಸಂಧು, ಬಲ್ಲುವಾನಾದಲ್ಲಿ ವಂದನಾ ಸಾಂಗ್ವಾನ್, ಲಂಬಿಯಲ್ಲಿ ರಾಕೇಶ್ ಧಿಂಗ್ರಾ, ಮೌರ್‌ನಲ್ಲಿ ದಯಾಲ್ ಸಿಂಗ್ ಸೋಧಿ, ಬರ್ನಾಲಾದಲ್ಲಿ ಧೀರಜ್ ಕುಮಾರ್, ಧುರಿಯಲ್ಲಿ ರಣದೀಪ್ ಸಿಂಗ್ ಡಿಯೋಲ್, ನಭಾದಲ್ಲಿ ಗುರುಪ್ರೀತ್ ಸಿಂಗ್ ಶಹಪುರ್ ಮತ್ತು ಘನ್ನೌರ್‌ನಲ್ಲಿ ವಿಕಾಸ್ ಶರ್ಮಾ ಬಿಜೆಪಿ ಕಣಕ್ಕೆ ಇಳಿಸಿದೆ.

 Breaking News: ಪಂಜಾಬ್‌ನಲ್ಲಿ 65 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ Breaking News: ಪಂಜಾಬ್‌ನಲ್ಲಿ 65 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ

ಬಿಜೆಪಿಯಿಂದ ಒಟ್ಟು 65 ಮಂದಿ ಸ್ಫರ್ಧೆ

ಕಾಂಗ್ರೆಸ್‌ ತೊರೆದು ತನ್ನದೇ ಆದ ಪಕ್ಷವನ್ನು ಸ್ಥಾಪನೆ ಮಾಡಿಕೊಂಡ ಅಮರಿಂದರ್ ಸಿಂಗ್‌ರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಎಸ್‌ಎಡಿ-ಸಂಯುಕ್ತ ಜೊತೆ ಬಿಜೆಪಿ ಮೈತ್ರಿಯನ್ನು ಮಾಡಿಕೊಂಡಿದೆ. ಬಿಜೆಪಿ 65 ಸ್ಥಾನಗಳಲ್ಲಿ, ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮತ್ತು ಎಸ್‌ಎಡಿ-ಸಂಯುಕ್ತ್ 15 ಸ್ಥಾನಗಳಲ್ಲಿ ಚುನಾವಣೆ ಎದುರಿಸಲಿದೆ. ಬಿಜೆಪಿ 65 ಸ್ಥಾನಗಳ ಪೈಕಿ ಮೊದಲ ಪಟ್ಟಿಯಲ್ಲಿ 34 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈಗ ಮತ್ತೆ ಬಿಜೆಪಿ ತನ್ನ 27 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದುವರೆಗೆ ಬಿಜೆಪಿ ತನ್ನ 65 ಅಭ್ಯರ್ಥಿಗಳ ಪೈಕಿ 61 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇನ್ನೂ ನಾಲ್ವರ ಹೆಸರನ್ನು ಬಿಜೆಪಿ ಪ್ರಕಟ ಮಾಡಬೇಕಿದೆ. (ಒನ್‌ಇಂಡಿಯಾ ಸುದ್ದಿ)

English summary
Punjab Poll: BJP releases second list of 27 candidates. Here's detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X