ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಕರ್ತವ್ಯದಲ್ಲಿ ಹಲ್ಲೆಗೊಳಗಾಗಿದ್ದ ಪಂಜಾಬ್‌ ಪೊಲೀಸ್‌ಗೆ ಬಡ್ತಿ

|
Google Oneindia Kannada News

ಚಂಡೀಗಢ, ಏಪ್ರಿಲ್ 16 : ಲಾಕ್‌ಡೌನ್‌ ವೇಳೆ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು, ಅನಗತ್ಯವಾಗಿ ರಸ್ತೆಗೆ ಬಂದವರ ಬಳಿ ಪಾಸ್‌ ಕೇಳಿದ್ದಕ್ಕೆ, ದುಷ್ಕರ್ಮಿಗಳ ಗುಂಪು ಪೊಲೀಸರ ಕೈ ಕಟ್ ಮಾಡಿದ್ದ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿತ್ತು.

ಈ ಘಟನೆಯಲ್ಲಿ ಎಎಸ್‌ಐ ಹರ್ಜಿತ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರಿಗೆ ಸೂಕ್ತವಾದ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಇದೀಗ, ಹಲ್ಲೆಗೊಳಗಾಗಿದ್ದ ಎಎಸ್‌ಐಗೆ ಈಗ ರಾಜ್ಯ ಸರ್ಕಾರ ಬಡ್ತಿ ಘೋಷಿಸಿದೆ.

ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್

ಲಾಕ್‌ಡೌನ್‌ ವೇಳೆ ಧೈರ್ಯದಿಂದ ಕಾರ್ಯನಿರ್ವಹಿಸಿದ್ದನ್ನು ಗುರುತಿಸಿ ಅಸಿಸ್ಟಂಟ್ ಸಬ್‌ ಇನ್ಸ್ ಪೆಕ್ಟರ್ ಸ್ಥಾನದಿಂದ ಸಬ್ ಇನ್ಸ್ ಪೆಕ್ಟರ್ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಕಚೇರಿ ಪ್ರಕಟ ಮಾಡಿದೆ.

ಈ ಘಟನೆಯಲ್ಲಿ ಎಎಸ್‌ಐ ಹರ್ಜಿತ್ ಸಿಂಗ್ ಜೊತೆ ಸಹಾಯಕವಾಗಿ ಕಾರ್ಯನಿರ್ವಹಿಸಿದ್ದ ಮೂವರು ಪೊಲೀಸರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಶ್ಲಾಘಿಸಿದ್ದು, ಬಹುಮಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.

Punjab Police Harjeet Singh Promoted To Sub Inspector

ಘಟನೆ ವಿವರ:

ಪಂಜಾಬಿನ ಪಟಿಯಾಲ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಕರ್ಫ್ಯೂ ಪಾಸ್ ಪರಿಶೀಲಿಸುತ್ತಿದ್ದ ಸಹಾಯಕ ಸನ್ ಇನ್ಸ್ ಪೆಕ್ಟರ್(ಎಎಸ್ಐ) ಹರ್ಜೀತ್ ಸಿಂಗ್ ಅವರು ನಿಹಾಂಗ್ ಗಳನ್ನು ಪಾಸ್ ತೋರಿಸುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ನಿಹಾಂಗ್ ಗುಂಪು ತಮ್ಮ ಬಳಿ ಇದ್ದ ಕತ್ತಿಯಿಂದ ಇನ್ಸ್ ಪೆಕ್ಟರ್ ಕೈ ಕತ್ತರಿಸಿದ್ದರು.

English summary
Assistant Sub Inspector Harjeet Singh, whose hand was chopped off fighting off an attack, has been promoted to the rank of Sub-Inspector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X