ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಪೊಲೀಸ್ ಕಾನ್ ಸ್ಟೇಬಲ್ ಗೆ 2 ಕೋಟಿ ರುಪಾಯಿ ಲಾಟರಿ ಬಹುಮಾನ

|
Google Oneindia Kannada News

ಚಂಡೀಗಢ, ಜೂನ್ 23: ಪಂಜಾಬ್ ನ ಪೊಲೀಸ್ ಕಾನ್ ಸ್ಟೇಬಲ್ ಅಶೋಕ್ ಕುಮಾರ್ ಅವರು ಅಲ್ಲಿನ ರಾಜ್ಯ ಸರಕಾರದ ಹೊಸ ವರ್ಷದ ಲೊಹ್ರಿ ಬಂಪರ್ ಡ್ರಾ ತಮ್ಮದಾಗಿಸಿಕೊಂಡಿದ್ದು, ಎರಡು ಕೋಟಿ ಬಂಪರ್ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಭಾನುವಾರದಂದು ಈ ಲಾಟರಿ ಬಹುಮಾನದ ಘೋಷಣೆ ಆಗಿದೆ.

ಮೂವತ್ತು ವರ್ಷದ ಅಶೋಕ್ ಕುಮಾರ್ ಹೋಶಿಯಾರ್ ಪುರ್ ಜಿಲ್ಲೆಯ ಮೋಟಿಯಾನ್ ಹಳ್ಳಿಯವರು. ಎಂದಾದರೂ ಒಂದು ದಿನ ತಾನು ಕೋಟ್ಯಧಿಪತಿ ಆಗಬಹುದು ಎಂಬ ಕಲ್ಪನೆ ಕೂಡ ಇರಲಿಲ್ಲ ಎಂದು ಆತ ಹೇಳಿದ್ದಾರೆ. ಇನ್ನೂ ಆಸಕ್ತಿಕರ ವಿಷಯ ಏನೆಂದರೆ, ಆ ಲಾಟರಿಯನ್ನು ಎಲ್ಲಿಟಿದ್ದೇನೆ ಎಂಬ ಸಂಗತಿಯನ್ನೇ ಅವರು ಮರೆತು ಬಿಟ್ಟಿದ್ದರು.

ಒಂಬತ್ತು ವರ್ಷದ ಹುಡುಗಿಗೆ 6.93 ಕೋಟಿ ರೂಪಾಯಿ ಲಾಟರಿ!ಒಂಬತ್ತು ವರ್ಷದ ಹುಡುಗಿಗೆ 6.93 ಕೋಟಿ ರೂಪಾಯಿ ಲಾಟರಿ!

ಆ ನಂತರ ಪೊಲೀಸ್ ಠಾಣೆಯಲ್ಲಿನ ಡೆಸ್ಕ್ ಡ್ರಾವರ್ ನಲ್ಲಿ ಲಾಟರಿ ಟಿಕೆಟ್ ಪತ್ತೆಯಾಗಿದೆ. ಈ ಬಂಪರ್ ಬಹುಮಾನದ ಲಾಟರಿ ಮೊತ್ತದಿಂದ ಬದುಕೇ ಬದಲಾಗಿದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

Ashok Kumar

ಲಾಟರಿ ಇಲಾಖೆಯ ವಕ್ತಾರರು ಮಾತನಾಡಿ, ಪಂಜಾಬ್ ರಾಜ್ಯ ಸಾವನ್ ಬಂಪರ್ 2019 ಮಾರಾಟ ಇನ್ನೂ ನಡೆಯುತ್ತಿದೆ. ಜುಲೈ 8ನೇ ತಾರೀಕು ಡ್ರಾ ಆಗಲಿದೆ. ಮೊದಲ ಬಹುಮಾನ 3 ಕೋಟಿ ರುಪಾಯಿಯು ಇಬ್ಬರು ವಿಜಯಶಾಲಿಗಳಿಗೆ 1.5 ಕೋಟಿ ಹಾಗೂ 1.5 ಕೋಟಿ ಹಂಚಲಾಗುತ್ತದೆ ಎಂದಿದ್ದಾರೆ.

ಎರಡನೇ ಬಹುಮಾನವಾಗಿ ತಲಾ 10 ಲಕ್ಷ ರುಪಾಯಿಗಳನ್ನು ತಲಾ 5 ಮಂದಿಗೆ, ಮೂರನೇ ಬಹುಮಾನ ತಲಾ 2.5 ಲಕ್ಷ ರುಪಾಯಿಯನ್ನು 20 ವಿಜಯಿಗಳಿಗೆ ವಿತರಿಸಲಾಗುವುದು.

English summary
Punjab police constable Aashok Kumar won state lottery bumper prize of 2 crore, which announced on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X