ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಭಾರತೀಯ ವಾಯುಪಡೆಯ ಮಿಗ್ 21 ಅಪಘಾತ, ಪೈಲಟ್ ಸಾವು

|
Google Oneindia Kannada News

ಚಂಡೀಘರ್, ಮೇ 21: ಪಂಜಾಬ್‌ನಲ್ಲಿ ಗುರುವಾರ ತಡರಾತ್ರಿ ಭಾರತೀಯ ವಾಯುಪಡೆಯ ಮಿಗ್ 21 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಪೈಲಟ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪಂಜಾಬ್‌ನ ಮೋಗಾ ಎಂಬಲ್ಲಿ ಈ ಘಟನೆ ನಡೆದಿದ್ದು ಭಾರತೀಯ ವಾಯುಸೇನೆ ದುರಂತದ ಬಗ್ಗೆ ಖಚಿತ ಮಾಹಿತಿ ನೀಡಿದೆ.

Recommended Video

MIG 21 Crashed, ಪಂಜಾಬ್ ನಲ್ಲಿ ಭಾರತೀಯ ವಾಯುಪಡೆ ಯುದ್ದ ವಿಮಾನ ಅಪಘಾತಕ್ಕೀಡಾಗಿದೆ! | Oneindia Kannada

"ಭಾರತೀಯ ವಾಯುಸೇನೆಯ ಬೀಸನ್ ಯುದ್ಧ ವಿಮಾನ ಕಳೆದ ರಾತ್ರಿ ಪಶ್ಚಿಮ ವಲಯದಲ್ಲಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೈಲಟ್ ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಭಾರತೀಯ ವಾಯುಸೇನೆ ಸಂತಾಪ ಸೂಚಿಸುತ್ತದೆ ಹಾಗೂ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲಿದೆ" ಎಂದು ಭಾರತೀಯ ವಾಯುಸೇನೆ ದುರಂತದ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ದೈನಂದಿನ ತರಬೇತಿಯನ್ನು ನಡೆಸುತ್ತಿದ್ದಾಗ ವಿಮಾನ ಅಪಘಾತಕ್ಕೆ ಒಳಗಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಎಎನ್‌ಐ ಸುದ್ಧಿಸಂಸ್ಥೆ ವರದಿ ಮಾಡಿದೆ. ಆದರೆ ಈ ವಿಚಾರವಾಗಿ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಇನ್ನು ಘಟನೆಗೆ ಕಾರಣವೇನು ಎಂಬುದರ ಬಗ್ಗೆ ತನಿಖೆಗೆ ಆದೇಶಿಲಾಗಿದೆ.

Punjab: Indian Air Forces MiG-21 crashes, pilot killed

ಇದು ಈ ವರ್ಷ ನಡೆದ ಮಿಗ್ 21 ವಿಮಾನದ ಮೂರನೇ ಅಪಘಾತವಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಮಿಗ್ 21 ಬಿಸನ್ ವಿಮಾನವೊಂದು ಅಪಘಾತವಾದಾಗ ಗ್ರೂಪ್ ಕ್ಯಾಪ್ಟನ್ ಎ ಗುಪ್ತ ಎಂಬವರು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಜನವರಿ ತಿಂಗಳಿನಲ್ಲಿ ರಾಜಸ್ಥಾನದ ಸೂರತ್‌ಗರ್ ಎಂಬಲ್ಲಿ ಅಪಘಾತ ನಡೆದಿದ್ದು ಆ ಸಂದರ್ಭದಲ್ಲಿ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಬೇರ್ಪಟ್ಟಿದ್ದರು.

English summary
Indian Air Force (IAF) MiG-21 fighter aircraft crashed near Moga in Punjab, killing the pilot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X