ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ನಾಯಕತ್ವ ಬದಲಾವಣೆ?: ಇಂದು ಕಾಂಗ್ರೆಸ್‌ ಶಾಸಕರ ಸಭೆ

|
Google Oneindia Kannada News

ಚಂಡೀಗಢ, ಸೆಪ್ಟೆಂಬರ್‌ 18: ಪಂಜಾಬ್‌ನ ಕಾಂಗ್ರೆಸ್‌ ಘಟಕದಲ್ಲಿ ನಾಯಕತ್ವದ ವಿಚಾರದಲ್ಲಿ ವೈಮನಸ್ಸು ಸರಿಯಾಗುವಂತೆ ಕಾಣುತ್ತಿಲ್ಲ. ಪಂಜಾಬ್‌ನ ಈ ಕಾಂಗ್ರೆಸ್‌ನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆ ಕಾಂಗ್ರೆಸ್‌ ಪಕ್ಷವು ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಸಭೆಯನ್ನು ಕರೆದಿದೆ. ಆದರೆ ಕಾಂಗ್ರೆಸ್‌ ಪಕ್ಷವು ರಾತ್ರೋರಾತ್ರಿ ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

ಇನ್ನು ಕಾಂಗ್ರೆಸ್‌ನ ಹೈಕಮಾಂಡ್‌ಗೆ ತಕ್ಷಣವೇ ಪಂಜಾಬ್‌ ಕಾಂಗ್ರೆಸ್‌ನ ಪಕ್ಷದ ಸಭೆಯನ್ನು ನಡೆಸುವಂತೆ ಹೆಚ್ಚಿನ ಸಂಖ್ಯೆಯ ಶಾಸಕರುಗಳು ಒತ್ತಾಯ ಮಾಡಲಾಗಿದ್ದ ಹಿನ್ನೆಲೆ ಪಂಜಾಬ್‌ನಲ್ಲಿ ದಿಢೀರ್‌ ಆಗಿ ಕಾಂಗ್ರೆಸ್‌ ತನ್ನ ಪಕ್ಷದ ಸಭೆಯನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ. ಸೆಪ್ಟೆಂಬರ್‍ 18 ರ ಸಂಜೆ ಸುಮಾರು 5 ಗಂಟೆಗೆ ಶಾಸಕರುಗಳ ಸಭೆಯನ್ನು ಕರೆಯಲಾಗಿದೆ ಎಂದು ವರದಿ ಆಗಿದೆ.

 ಕಾಂಗ್ರೆಸ್‌ಗೆ ಮತ್ತೆ ಬಂಡಾಯಗಾರರ ಕಾಟ: ಎಚ್ಚರ ತಪ್ಪಿದರೆ 'ಕೈ' ಜಾರೀತು ಆಡಳಿತ ಕಾಂಗ್ರೆಸ್‌ಗೆ ಮತ್ತೆ ಬಂಡಾಯಗಾರರ ಕಾಟ: ಎಚ್ಚರ ತಪ್ಪಿದರೆ 'ಕೈ' ಜಾರೀತು ಆಡಳಿತ

ಈ ಬಗ್ಗೆ ಶುಕ್ರವಾರ ರಾತ್ರಿ ಸುಮಾರು 11:30 ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪಂಜಾಬ್‌ನ ಉಸ್ತುವಾರಿ ಹರೀಶ್ ರಾವತ್‌, "ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯನ್ನು ಸೇರುವಂತೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ನಿರ್ದೇಶನ ನೀಡಿದೆ. ಕಾಂಗ್ರೆಸ್‌ನ ಎಲ್ಲಾ ಶಾಸಕರುಗಳು ಈ ಸಭೆಗೆ ಹಾಜರಾಗಬೇಕಾಗಿ ವಿನಂತಿ," ಎಂದು ತಿಳಿಸಿದ್ದಾರೆ.

Punjab Headed For Leadership Change?: Congress Calls Key Meeting Of Punjab MLAs

ಈ ಟ್ವೀಟ್‌ ಅನ್ನು ಕಾಂಗ್ರೆಸ್‌ ಪಂಜಾಬ್‌ನ ಉಸ್ತುವಾರಿ ಹರೀಶ್ ರಾವತ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಹಾಗೂ ಪಂಜಾಬ್‌ ಕಾಂಗ್ರೆಸ್‌ನ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧುಗೆ ಟ್ಯಾಗ್‌ ಮಾಡಿದ್ದಾರೆ. ಇನ್ನು ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಿರುವ ಪಂಜಾಬ್‌ ಕಾಂಗ್ರೆಸ್‌ನ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು, ಕಾಂಗ್ರೆಸ್‌ ಪಂಜಾಬ್‌ನ ಉಸ್ತುವಾರಿ ಹರೀಶ್ ರಾವತ್‌ರ ಈ ಟ್ವೀಟ್‌ ಅನ್ನು ರೀ ಟ್ವೀಟ್‌ ಮಾಡಿದ್ದಾರೆ. ಹಾಗೆಯೇ ಮತ್ತೆ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿ, ಸಭೆಯನ್ನು ಕರಿಯಲಾಗಿದೆ ಎಂದು ತಿಳಿಸಿದ್ದಾರೆ.

 ಛತ್ತೀಸ್‌ಗಢ ರಾಜಕೀಯ ಬಿಕ್ಕಟ್ಟು: ಭೂಪೇಶ್‌ಗೂ ಮುನ್ನ ದೆಹಲಿಯತ್ತ ಶಾಸಕರ ದೌಡು ಛತ್ತೀಸ್‌ಗಢ ರಾಜಕೀಯ ಬಿಕ್ಕಟ್ಟು: ಭೂಪೇಶ್‌ಗೂ ಮುನ್ನ ದೆಹಲಿಯತ್ತ ಶಾಸಕರ ದೌಡು

"ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ನಿರ್ದೇಶನದಂತೆ ಪಂಜಾಬ್‌ ಕಾಂಗ್ರೆಸ್‌ ಪಕ್ಷದ ಸಭೆಯು ಚಂಡೀಗಢದಲ್ಲಿರುವ ಪಂಜಾಬ್‌ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಸೆಪ್ಟೆಂಬರ್‍ 18 ರಂದು ಸಂಜೆ 5 ಗಂಟೆಗೆ ನಡೆಯಲಿದೆ," ಎಂದು ತಿಳಿಸಿದ್ದಾರೆ. ಇನ್ನು ಈ ಪಂಜಾಬ್‌ ಕಾಂಗ್ರೆಸ್‌ ಸಮಿತಿಯ ಸಭೆಯಲ್ಲಿ ಕಾಂಗ್ರೆಸ್‌ ಕೇಂದ್ರ ಸಮಿತಿಯಿಂದ ಹರೀಶ್‌ ಔಧರಿ ಹಾಗೂ ಅಜಯ್‌ ಮಕೇನ್‌ ಹಾಜರಾಗಲಿದ್ದಾರೆ. ಆದರೆ ಈ ಬಗ್ಗೆ ಈವರೆಗೂ ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್‌ ತನ್ನ ನಿವಾಸದಲ್ಲೇ ತಮ್ಮ ಪರವಾಗಿರುವ ಶಾಸಕರ ಸಭೆಯನ್ನು ಸಂಜೆಯ ಕಾಂಗ್ರೆಸ್‌ ಸಭೆಗೂ ಮುನ್ನ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ವಿರುದ್ದವಾಗಿ ಕಳೆದ ತಿಂಗಳು ನಾಲ್ಕು ಸಚಿವರುಗಳು ಹಾಗೂ ಸುಮಾರು ಹನ್ನೆರಡಕ್ಕೂ ಅಧಿಕ ಶಾಸಕರುಗಳು ಬಂಡಾಯ ಎದಿದ್ದರು. ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಬಗ್ಗೆ ಯಾವುದೇ ನಂಬಿಕೆ ನಮಗೆ ಇಲ್ಲ ಎಂದು ಈ ಶಾಸಕರು, ಸಚಿವರುಗಳು ಹೇಳಿಕೊಂಡಿದ್ದರು. ಈ ಹಿನ್ನೆಲೆ ಕಾಂಗ್ರೆಸ್‌ನ ಈ ಬಿಕ್ಕಟ್ಟನ್ನು ಸರಿಪಡಿಸುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ಈಗಲೂ ಈ ಸಮಸ್ಯೆ ಸರಿಯಾಗಿಲ್ಲ. ಈ ನಡುವೆ ಕಾಂಗ್ರೆಸ್‌ ರಾಜ್ಯದ ನಾಯಕತ್ವದಲ್ಲಿ ಬದಲಾವಣೆ ಮಾಡಲಿದೆಯೇ ಎಂಬ ವದಂತಿಗಳು ಕೂಡಾ ಹರಡುತ್ತಿದೆ.

ಇನ್ನು ಬಗ್ಗೆ ಕಾಂಗ್ರೆಸ್‌ ಮುಖಂಡರು ಪ್ರತಿಕ್ರಿಯೆ ನೀಡಿ, "ಪಂಜಾಬ್‌ ಮೂಲವಾಗಿ ದೈರ್ಯವಂತರ ರಾಜ್ಯ. ಪಂಜಾಬ್‌ನಲ್ಲಿ ಜನರು ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುತ್ತಾರೆ, ಇದು ನಮಗೆ ಅವರು ಜಗಳವಾಡುತ್ತಿದ್ದಾರೆ ಎಂಬಂತೆ ಕಾಣುತ್ತದೆ. ಆದರೆ ನಿಜವಾಗಿಯೂ ಅಲ್ಲಿ ಏನೂ ಇಲ್ಲ. ಯಾವುದೇ ಸಮಸ್ಯೆಗೂ ಅವರು ಪರಿಹಾರವನ್ನು ಕಂಡು ಕೊಳ್ಳುತ್ತಾರೆ. ಪಂಜಾಬ್‌ ಕಾಂಗ್ರೆಸ್‌ ಎಲ್ಲಾ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳುತ್ತಿದೆ," ಎಂದು ತಿಳಿಸಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Punjab Headed For Leadership Change?: Congress Calls Key Meeting Of Punjab MLAs. There is fresh sparking in the Punjab unit of the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X