ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ 1 ರಿಂದ 10ರವರೆಗೆ ಪಂಜಾಬಿಯಲ್ಲೇ ಶಿಕ್ಷಣ ಕಡ್ಡಾಯ

|
Google Oneindia Kannada News

ಚಂಡೀಗಢ, ನವೆಂಬರ್ 12: ಪಂಜಾಬ್‌ನಲ್ಲಿ ಒಂದರಿಂದ 10ನೇ ತರಗತಿವರೆಗೂ ಪಂಜಾಬಿ ಭಾಷೆಯಲ್ಲೇ ವ್ಯಾಸಂಗ ಮಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಪಂಜಾಬ್ ಸಂಪುಟವು ಎರಡು ಮಹತ್ವದ ಮಸೂದೆಗಳನ್ನು ಒಳಗೊಂಡಂತೆ 15 ಮಸೂದೆಗಳನ್ನು ಶುಕ್ರವಾರ ಅಂಗೀಕರಿಸಿದೆ.

ರಾಜ್ಯದಲ್ಲಿ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೇ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಮಸೂದೆಗಳಿಗೆ ಹಸಿರು ನಿಶಾನೆ ತೋರಿದೆ. 'ಪಂಜಾಬಿ ಮತ್ತು ಇತರ ಭಾಷೆಗಳ ಶಿಕ್ಷಣ (ತಿದ್ದುಪಡಿ) ಮಸೂದೆ, 2021' ಮತ್ತು 'ಪಂಜಾಬ್ ರಾಜ್ಯ ಭಾಷೆ (ತಿದ್ದುಪಡಿ) ಮಸೂದೆ 2021 ಅನ್ನು ಪಂಜಾಬ್ ಸರ್ಕಾರ ಅಂಗೀಕರಿಸಿದೆ. ಪಂಜಾಬಿ ಬೋಧಿಸುವಲ್ಲಿ ನಿರಾಕರಿಸಿದರೆ ಅಂಥ ಶಾಲೆಗಳಿಗೆ 2 ಲಕ್ಷ ರೂಪಾಯಿ ದಂಡ ವಿಧಿಸುವುದಕ್ಕೆ ನಿರ್ಧರಿಸಲಾಗಿದೆ.

"ಮಾತೃಭಾಷೆಯನ್ನು ಉತ್ತೇಜಿಸಲು, ಪಂಜಾಬಿನಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪಂಜಾಬಿಯನ್ನು ಕಡ್ಡಾಯ ವಿಷಯವನ್ನಾಗಿ ಮಾಡಲಾಗಿದೆ. ಈ ನಿಯಮ ಉಲ್ಲಂಘನೆಗಾಗಿ ಶಾಲೆಗಳಿಗೆ 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಈಗ, ಕಚೇರಿಗಳಲ್ಲಿ ಪಂಜಾಬಿ ಕಡ್ಡಾಯವಾಗಿದೆ. ಅಲ್ಲದೆ, ರಾಜ್ಯದ ಎಲ್ಲಾ ಬೋರ್ಡ್‌ಗಳ ಮೇಲೆ ಪಂಜಾಬಿ ಎಂದು ಬರೆಯಲಾಗುವುದು," ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದಾರೆ.

Punjab Govt Makes Punjabi Compulsory In 1 To 10 Class: 2 lakh fine for not teaching subject

ಪಂಜಾಬಿಯಲ್ಲೇ ಶಿಕ್ಷಣ ನೀಡದಿದ್ದರೆ ದಂಡ:

ಪಂಜಾಬಿ ಮತ್ತು ಇತರ ಭಾಷೆಗಳ ಶಿಕ್ಷಣ (ತಿದ್ದುಪಡಿ) ಮಸೂದೆ, 2021ರ ಪ್ರಕಾರ, ಯಾವುದೇ ಶಾಲೆಯು ಮೊದಲ ಬಾರಿಗೆ ನಿಯಮವನ್ನು ಉಲ್ಲಂಘಿಸಿದರೆ 50,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಎರಡನೇ ಬಾರಿಗೆ 1 ಲಕ್ಷ ರೂಪಾಯಿ ಹಾಗೂ ಮೂರನೇ ಬಾರಿಯೂ ತಪ್ಪನ್ನು ಮುಂದುವರಿಸಿದರೆ 2 ಲಕ್ಷ ರೂಪಾಯಿವರೆಗೂ ದಂಡ ವಿಧಿಸಲಾಗುತ್ತದೆ.

ಪಂಜಾಬ್‌ನಲ್ಲಿ ಸ್ಥಳೀಯ ಭಾಷೆಯಲ್ಲೇ ವ್ಯವಹಾರ:

ಪಂಜಾಬ್ ರಾಜ್ಯ ಭಾಷೆ (ತಿದ್ದುಪಡಿ) ಮಸೂದೆ, 2021 ಅಧಿಕಾರಿಗಳು/ಉದ್ಯೋಗಿಗಳು ಪಂಜಾಬಿ ಭಾಷೆಯಲ್ಲಿ ವ್ಯವಹಾರ ನಡೆಸುವುದನ್ನು ಕಡ್ಡಾಯಗೊಳಿಸುತ್ತದೆ. ಪಂಜಾಬಿನಲ್ಲಿ ವ್ಯವಹರಿಸದಿದ್ದರೆ ಮೊದಲ ಬಾರಿಗೆ 500 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿ ತಪ್ಪಿತಸ್ಥರಿಗೆ 2,000 ರೂ. ದಂಡ ಮತ್ತು ಮೂರನೇ ಬಾರಿಗೆ 5,000 ರೂಪಾಯಿ ಅನ್ನು ವಿಧಿಸಲಾಗುತ್ತದೆ.

English summary
Punjab Govt Makes Punjabi Compulsory In 1 To 10 Class: 2 lakh fine for not teaching subject. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X